March 15, 2025

Hampi times

Kannada News Portal from Vijayanagara

ಏ.19ಕ್ಕೆ ನಾಮಪತ್ರ ಸಲ್ಲಿಸುವೆ: ಸಿದ್ದಾರ್ಥಸಿಂಗ್

 

https://youtu.be/NHc6OMSu0K4?si=SI_K4goOPEgwo6h2

 

ಹಂಪಿ ಟೈಮ್ಸ್ ಹೊಸಪೇಟೆ:

ವಿಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಏ.19 ರಂದು ನಗರದ ಪುನೀತ್ ರಾಜಕುಮಾರ್ ಜಿಲ್ಲಾ ಕ್ರಿಡಾಂಗಣದಿಂದ, ಪನೀತ್‌ರಾಜಕುಮಾರ ವೃತ್ತ, ಮದಕರಿ ನಾಯಕ ವೃತ್ತ, ವಾಲ್ಮೀಕಿ ವೃತ್ತದ ಮಾರ್ಗವಾಗಿ ಸಂಡೂರು ರಸ್ತೆಯಲ್ಲಿರುವ ಸಹಾಯಕ ಆಯುಕ್ತರ ಕಾರ್ಯಾಲಯಕ್ಕೆ ಅಭಿಮಾನಿ ಹಾಗೂ ಬೆಂಬಲಿಗರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ ಸಿದ್ದಾರ್ಥಸಿಂಗ್ ತಿಳಿಸಿದರು.

ನಗರದ ಬಸವೇಶ್ವರ ಬಡಾವಣೆಯಲ್ಲಿ ವಿಶ್ವಗುರು ಬಸವಣ್ಣ ಮೂರ್ತಿಗೆ ಶುಕ್ರವಾರ ಪೂಜೆ ಸಲ್ಲಿಸಿ ಮಾತನಾಡಿದರು. ವಿಜಯನಗರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ತಂದೆ ಆನಂದಸಿಂಗ್ ಜೊತೆಗೂಡಿ ಕೇಂದ್ರ-ರಾಜ್ಯ ಸರ್ಕಾರದ ಡಬಲ್ ಇಂಜಿನಿ ಮಾದರಿಯಂತೆ ಕಾರ್ಯನಿರ್ವಹಿಸುತ್ತೇವೆ. ಸಮರ್ಥ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿ ಮಾಡುವ ಸುಸಂದರ್ಭ ಮತದಾರರ ಮನೆಬಾಗಿಲಿಗೆ ಒಲಿದು ಬಂದಿದೆ. ನನ್ನ ತಂದೆ ಆನಂದಸಿಂಗ್‌ಗೆ ಕ್ಷೇತ್ರದ ಮತದಾರರು ಅಶೀರ್ವದಿಸಿದಂತೆ ಸಮಾಜ ಸೇವಕನಾಗಿ ಮುಂದುವರೆಯಲು ನನಗೂ ಆಶೀರ್ವದಿಸಬೇಕು. ತಂದೆ ಮಾಡಿದ ಅಭಿವೃದ್ಧಿ ಕಾರ್ಯಗಳಿಗಿಂತ ಎರಡು ಪಟ್ಟು ಅಭಿವೃದ್ಧಿ ಕೆಲಸ ಮಾಡುವೆ. ವಿಜಯನಗರ ಜಿಲ್ಲೆಗೆ ಉಜ್ವಲ ಭವಷ್ಯವಿದೆ. ಹಿಂದಿನ ಯೋಜನೆಗಳ ಅನುಷ್ಠಾನಗಳಿಂದ ಯುವಕರಿಗೆ ಉದ್ಯೋಗವಕಾಶ ದೊರೆಯುವ ಸಾಧ್ಯತೆಗಳಿವೆ ಎಂದರು.

ಬಸವೇಶ್ವರ ಬಡಾವಣೆ ನಿವಾಸಿಗಳ ಸಂಘದ ಅಧ್ಯಕ್ಷ ರೇವಣಸಿದ್ದಪ್ಪ ಸೇರಿದಂತೆ ಪದಾಧಿಕಾರಿಗಳು ಮುಖಂಡರು ಸಿದ್ದಾರ್ಥಸಿಂಗ್ ಗೆ  ಸನ್ಮಾನಿಸಿ, ಬಸವಾದಿ ಶರಣರು ಒಳಿತು ಮಾಡಲಿ ಎಂದು ಹಾರೈಸಿದರು. ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಶರಣಸ್ವಾಮಿ, ನಗರಸಭೆ ಉಪಾಧ್ಯಕ್ಷ ಎಲ್.ಎಸ್.ಆನಂದ, ಸಮಾಜ ಮುಖಂಡರಾದ ಎನ್.ಎಸ್.ರೇವಣಸಿದ್ದಪ್ಪ, ಸಾಹಿತಿ ಡಾ.ಮೃತ್ಯುಂಜಯ ರುಮಾಲೆ, ಗುತ್ತಿಗೆದಾರ ಬಸವರಾಜ, ಕಾಶಿನಾಥಯ್ಯ, ಎನ್.ಎಂ.ರವಿ, ಮಧುರಚನ್ನಶಾಸ್ತ್ರೀ, ಚಿದಾನಂದ, ಸಿದ್ದಾರ್ಥ ಅಮರಗೋಳ ಸೇರಿದಂತೆ ಇತರರು ಇದ್ದರು.

 

 

ಜಾಹೀರಾತು
error: Content is protected !!