https://youtu.be/NHc6OMSu0K4?si=SI_K4goOPEgwo6h2
ಹಂಪಿ ಟೈಮ್ಸ್ ಹೊಸಪೇಟೆ:
ಮಹಾ ಮಾನವತಾವಾದಿ, ಭಾರತ ರತ್ನ ಬಾಬಾ ಸಾಹೇಬ್ ಡಾ.ಬಿ ಆರ್ ಅಂಬೇಡ್ಕರ್ ಅವರ 132 ನೇ ಜಯಂತೋತ್ಸವವನ್ನು ನಗರದ ಜೈ ಭೀಮ್ ವೃತ್ತದಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ಮೂರ್ತಿಗೆ ಶುಕ್ರವಾರ ಮಾಲಾರ್ಪಣೆ ಮಾಡಿ ಆಚರಿಸಲಾಯಿತು.
ಛಲವಾದಿ ಮಹಾಸಭಾದ ಅಧ್ಯಕ್ಷರು ಮತ್ತು ವಿಜಯನಗರ ಜಿಲ್ಲಾ ಬಾಬಾಸಾಹೇಬ್ ಅಂಬೇಡ್ಕರ್ ಸಂಘದ ಜಿಲ್ಲಾ ಕಾರ್ಯದರ್ಶಿ ಸೋಮಶೇಖರ್ ಬಣ್ಣದ ಮನೆ ಮಾತನಾಡಿ, ಸಂವಿಧಾನವನ್ನೆ ಬದಲಾವಣೆ ಮಾತುಗಳನ್ನಾಡುವವರು ನಾವು ಅಂಬೇಡ್ಕರ್ ವಾದಿಗಳೆಂದು ನಾಟಕವಾಡುತ್ತಿದ್ದಾರೆ. ಜನರಿಗೆ ಸುಳ್ಳು ಹೇಳಿ ಮೋಸ ಮಾಡುತ್ತಿದ್ದಾರೆ. ಸಂವಿಧಾನ ಬದಲಾವಣೆ ಮಾಡುವವರಿಗೆ ಮತ್ತು ಅಂಬೇಡ್ಕರ್ ವಿಚಾರಧಾರೆಗಳನ್ನು ವಿರೋಧಿಸುವವರಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ. ಡಾ.ಅಂಬೇಡ್ಕರ್ ಅವರನ್ನು ಹುಡುಕುವುದಾದರೆ ಪುಸ್ತಕದಲ್ಲಿ ಮಾತ್ರ ಹುಡುಕಬೇಕು ವಿನಹ ಮೂರ್ತಿಗಳಲ್ಲಿ ಅಲ್ಲ ಅನ್ನುವ ಮಾತು ಸರ್ವಕಾಲಿಕ ಸತ್ಯ ಎಂದರು.
ಈ ಸಂದರ್ಭದಲ್ಲಿ ಎಚ್.ಜಿ. ಗುರುದತ್, ಅಂಬೇಡ್ಕರ್ ಸಂಘದ ಜಿಲ್ಲಾ ಅಧ್ಯಕ್ಷರಾದ ಟಿ ವಾಸುದೇವ, ಪ್ರಗತಿಪರ ಸಂಘಟನೆಯ ಸಂಚಾಲಕರದ ದುರ್ಗಪ್ಪ ಪೂಜಾರ್, ಕಾಂಗ್ರೆಸ್ ಮುಖಂಡರಾದ ಆಡಿಟರ್ ಮೊಹಮ್ಮದ್ ಸಾಬ್ , ನಗರಸಭಾ ಮಾಜಿ ಸದಸ್ಯರಾದ ಲಿಂಗಪ್ಪ, ರವಿಕುಮಾರ್, ಜೆ ಸಿ ಈರಣ್ಣ, ನೀಲಕಂಠ , ಮರಿಸ್ವಾಮಿ, ಪ್ರಕಾಶ್ ,ಅಂಬರೀಶ್, ಇತಿಹಾಸ, ಸಜ್ಜದ್ ಖಾನ್, ರಾಮಕೃಷ್ಣ, ಎಲ್ಲಪ್ಪ, ಮುದುಕಪ್ಪ, ಮಾಯಪ್ಪ ,ಮುನಿಸ್ವಾಮಿ, ರಮೇಶ್, ಮೌಲಾ, ಗಿರಿಯಪ್ಪ, ಹುಲುಗಪ್ಪ, ವೆಂಕಟೇಶ್ ಸೇರಿದಂತೆ ಪ್ರಗತಿಪರ ಚಿಂತಕರು ಪಾಲ್ಗೊಂಡಿದ್ದರು.
More Stories
ಸಂಡೂರು ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣ ಗೆಲುವು, ಯಾರಿಗೆ ಎಷ್ಟು ಮತ?
ನಾಡಿನ ಕಲೆ, ಸಂಸ್ಕೃತಿ ವಿಶ್ವಮಾನ್ಯವಾಗಿದೆ : ಕಾಂಗ್ರೆಸ್ ಯುವನಾಯಕ ಅಶೋಕ್ ಭೀಮನಾಯ್ಕ ಅಭಿಮತ
ಭಾರತೀಯ ಅಂಚೆ ಇಲಾಖೆಯಿಂದ ರಾಷ್ಟ್ರ ಮಟ್ಟದ ಪತ್ರಲೇಖನ ಸ್ಪರ್ಧೆ : ಅಂಚೆ ಅಧೀಕ್ಷಕರು ಪಿ.ಚಿದಾನಂದ ಹೇಳಿಕೆ