December 14, 2024

Hampi times

Kannada News Portal from Vijayanagara

ಕುಟುಂಬ ರಾಜಕಾರಣಕ್ಕೆ ಮಣೆ, ನಿಷ್ಠಾವಂತ ಕಾರ್ಯಕರ್ತರನ್ನೆ ಕೈಬಿಟ್ಟ ಬಿಜೆಪಿ: ರಾಣಿ ಸಂಯುಕ್ತಾ ಆಕ್ರೋಶ

 

https://youtu.be/NHc6OMSu0K4?si=SI_K4goOPEgwo6h2

ನನ್ನದು ಲಿಂಗಾಯತ ಕುಟುಂಬ, ಸಿಂಗ್ ಕುಟುಂಬವಲ್ಲ | ಸಿದ್ದಾರ್ಥಸಿಂಗ್‌ಗೆ ನನ್ನ ಆಶೀರ್ವಾದವಿಲ್ಲ | ಬೇರೆ ಪಕ್ಷದವರು ನನ್ನ ಸಂಪರ್ಕಿಸಿದ್ದಾರೆ.

ಹಂಪಿ ಟೈಮ್ಸ್ ಹೊಸಪೇಟೆ:
ಮೂರು ದಶಕಗಳಿಂದ ಪಕ್ಷದ ಬಲವರ್ಧನೆಗೆ ದುಡಿದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ, ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ಚಿಹ್ನೆಯಡಿ ಪಕ್ಷದ ಕೆಲಸ ಮಾಡದ ಹುಡುಗನಿಗೆ ವಿಜಯನಗರ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಘೋಷಿಸಿ ಕುಟುಂಬ ರಾಜಕಾರಣಕ್ಕೆ ಇಂಬು ನೀಡಿರುವುದು ತುಂಬಾ ನೋವು ತಂದಿದೆ. ಬಿಜೆಪಿ ಹೇಳುವುದು ಒಂದು, ಮಾಡುವುದು ಮತ್ತೊಂದುಎಂಬಂತಾಗಿದೆ ಎಂದು ವಿಜಯನಗರ ಬಿಜೆಪಿ ಟಿಕೆಟ್‌ ಆಕಾಂಕ್ಷಿ ರಾಣಿ ಸಂಯುಕ್ತಾ ಬೇಸರ ವ್ಯಕ್ತಪಡಿಸಿದರು.

ನಗರದ ಅವರ ನಿವಾಸದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಿಜೆಪಿ ಟಿಕೆಟ್ ಪಡೆಯಲು ಹತ್ತಾರು ವರ್ಷ ಪಕ್ಷದ ಕಾರ್ಯಕರ್ತರಾಗಿ ದುಡಿಯಬೇಕಿಲ್ಲ ಎಂಬ ಸಂದೇಶ ಹೈಕಮಾಂಡ್ ಸಾರಿದೆ. ಎಂಎಲ್‌ಎ ಅಥವಾ ಮಿನಿಸ್ಟರ್ ಮಕ್ಕಳಾದ್ರೆ ಸಾಕು ಚುನಾವಣೆಗೂ ಮುನ್ನ ನಾಲ್ಕೈದು ತಿಂಗಳು ಖರ್ಚುಮಾಡಿ ಕೆಲಸ ಮಾಡಿದ್ರೆ ಅವರಿಗೆ ಟಿಕೆಟ್‌ ಖಚಿತ ಎಂಬುದನ್ನು ಬಿಜೆಪಿಯಿಂದ ನಿರೀಕ್ಷಿಸಿರಲಿಲ್ಲ. ಬಿಜೆಪಿ ಕಾರ್ಯಕರ್ತರು ನಿರಂತರವಾಗಿ ತಳಹಂತದಲ್ಲಿ ದುಡಿಯುತ್ತಲೇ ಇರಬೇಕಾದ ಪರಿಸ್ಥಿತಿ ಎದುರಾಗಿದೆ. ಎಂ.ಎಲ್.ಎ, ಮಂತ್ರಿಗಳ ಮಕ್ಕಳಿಗೆ ಟಿಕೆಟ್ ನೀಡುವುದಾದರೆ ನಿಷ್ಠಾವಂತ ಕಾರ್ಯಕರ್ತರ ಪಾಡೇನು?. ಕಾರ್ಯಕರ್ತರನ್ನು ಬೆಳೆಸ್ತೀವಿ ಎನ್ನುವ ಬಿಜೆಪಿಯ ಮಂತ್ರ ಸುಳ್ಳಾಗಿದೆ. ಒಬ್ಬ ಸಾಮಾನ್ಯರಿಗೆ ಟಿಕೇಟ್ ಕೊಟ್ಟು ಅವರನ್ನೆ ಎಲ್ಲರಿಗೂ ತೋರಿಸುವಂತಾಗಿದೆ. ಕಾರ್ಯಕರ್ತರನ್ನು ಝಂಡಾ ಹಿಡಿದುಕೊಂಡು ಘೋಷಣೆಗಳನ್ನು ಕೂಗುವುದಕ್ಕಷ್ಟೇ ಬಳಸಿಕೊಳ್ಳಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

ಕರೋನಾ ನೆರೆ ಬಂದಾಗ ಈ ಹುಡುಗ ಎಲ್ಲಿದ್ದ? ಪಕ್ಷದ ಕಾರ್ಯಕರ್ತರನ್ನು ಗಮನಕ್ಕೆ ತೆಗೆದುಕೊಳ್ಳದೇ, ಯಾರ ಇಚ್ಚೆಯನ್ನೂ ಪರಿಗಣಿಸದೆ, ಏಕಾಏಕಿ ಹೊಸ ಹೆಸರನ್ನು ವಿಜಯನಗರ ಕ್ಷೇತ್ರಕ್ಕೆ ಘೋಷಿಸಿರುವುದು ನಿಷ್ಟಾವಂತ ಕಾರ್ಯಕರ್ತರಲ್ಲೂ ಬೇಸರ ಅಸಮಧಾನ ತಂದಿದೆ. ಈ ಹಿಂದೆ ನಡೆದ ನಗರಸಭೆ ಚುನಾವಣೆಯಲ್ಲಿ ಪಕ್ಷದ ಟಿಕೇಟ್‌ನಡಿ ಸ್ಪರ್ಧಿಸಿದ ಅನೇಕ  ಅಭ್ಯರ್ಥಿಗಳನ್ನು ಬೆಂಬಲಿಸದೆ, ಅನ್ಯ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಾಗಿದೆ.ಪಕ್ಷ ವಿರೋಧಿ ಚಟುವಟಿಕೆ ಮಾಡಿದವರಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕುತ್ತಿರುವುದು ಎಷ್ಟು ಸರಿ? ಕುಟುಂಬ ರಾಜಕಾರಣ ವಿರೋಧಿಸುತ್ತಿದ್ದ ಪಕ್ಷದಲ್ಲೆಕುಟುಂಬ ರಾಜಕಾರಣ ನಡೆಯುತ್ತಿರುವುದು ಹಾಸ್ಯಸ್ಪದವಾಗಿದೆ.

ನಾನು ಲಿಂಗಾಯತ ಸಮುದಾಯಕ್ಕೆ ಸೇರಿದ್ದೇನೆ. ನನ್ನ ಪತಿ ಲಿಂಗಾಯತ. ರಜಪೂತ ಕುಟುಂಬದಲ್ಲಿ ಹುಟ್ಟಿದ್ದರೂ ಆ ಕುಟುಂಬದೊಂದಿಗೆ ನಾನಿಲ್ಲ. ಹೆಣ್ಣಿಗೆ ಮದುವೆಯಾಗುವವರೆಗೂ ತಂದೆಯ ಮನೆತನದ ಹೆಸರಿರುತ್ತದೆ. ಗಂಡನ ಮನೆ ಸೇರಿದರೆ ಗಂಡನ ಮನೆತನ ಹೆಸರು ಹೇಳಬೇಕಲ್ವೇ ಎಂದು ಪತ್ರಕತ್ರರ ಪ್ರಶ್ನೆಗೆ ಉತ್ತರಿಸಿದರು.

ಪಕ್ಷ ಕಟ್ಟಿ ಬೆಳೆಸಿದವರನ್ನು ನಡೆಸಿಕೊಂಡ ಬಿಜೆಪಿ ಈ ನಿಲುವುಗಳಿಗೆ ಕರ್ನಾಟಕದ ಜನ ಸುಮ್ಮನೆ ಕೂಡಲ್ಲ. ಎಲ್ಲವನ್ನೂ ಗಮನಿಸಿ ತೀರ್ಮಾನ ತೆಗೆದು ಕೊಳ್ಳುತ್ತಾರೆ. ಪಕ್ಷದ  ಸಿದ್ದಾಂತಕ್ಕೆ ಧಕ್ಕೆ ತಗುಲಿದೆ. ವಿಜಯನಗರಕ್ಷೇತ್ರದಿಂದ ಆನಂದಸಿಂಗ್, ರಾಣಿಸಂಯುಕ್ತಾ ಮತ್ತು ಪ್ರಿಯಾಂಕಜೈನ್ ಹೆಸರು ಮಾತ್ರಕೊಡಲಾಗಿತ್ತು. ಆದರೆರಾಜ್ಯದಿಂದ ಸಿದ್ಧಗೊಳಿಸಿದ ಪಟ್ಟಿಯಲ್ಲೆ ಹೇಗೆ ಹೊಸ ಹೆಸರು ಸೇರ್ಪಡೆಗೊಂಡಿದೆ ಎಂಬುದೆ ತಿಳಿಯದು. ಪಕ್ಷದಿಂದಲೇ ನನಗೆ ಮೋಸವಾಗಿದೆ. ನನಗೆ ಮತ್ತು ಆನಂದಸಿಂಗ್ ಗೆ ಟಿಕೇಟ್ ನೀಡದೇ ಸಾಮಾನ್ಯ ಕಾರ್ಯಕರ್ತರಿಗೆ ಟಿಕೇಟ್ ನೀಡಿದ್ದರೆ  ನಾನೂ, ಆನಂದ ಸಿಂಗ್ ಸೇರಿದಂತೆ ಎಲ್ಲರೂ ಒಗ್ಗೂಡಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುತ್ತಿದ್ದೆವು ಎಂದರು.

ಪಕ್ಷಾ ಪಕ್ಷಾ ಅಂತೀರಿ, ಪಕ್ಷ ನಿಮಗೇನು ಕೊಟ್ಟಿದೆ? ಎನ್ನುವ ಪ್ರಶ್ನೆ ಬೆಂಬಲಿಗರದ್ದಾಗಿದೆ. ಬೆಂಬಲಿಗರ, ಕಾರ್ಯಕರ್ತರ ಅಭಿಪ್ರಾಯ ಪಡೆದು ಇನ್ನೆರೆಡು ದಿನದಲ್ಲಿ ತೀರ್ಮಾನ ಹೇಳುವೆ. ಬೇರೆ ಪಕ್ಷದವರು ನನ್ನ ಸಂಪರ್ಕಿಸಿದ್ದಾರೆ. ಚರ್ಚೆಗಳು ನಡೆದಿವೆ. ಸಮಯ ತೆಗೆದುಕೊಂಡು ನಿರ್ಧಾರ ತಿಳಿಸುವೆ ಎಂದರು.

 

 

 

 

ಜಾಹೀರಾತು
error: Content is protected !!