https://youtu.be/NHc6OMSu0K4?si=SI_K4goOPEgwo6h2
ಹಂಪಿ ಟೈಮ್ಸ್ ಹೊಸಪೇಟೆ:
ವಿಧಾನಸಭೆ ಚುನಾವಣೆಗೆ ಆಡಳಿತಾರೂಢ ಬಿಜೆಪಿ ಪಕ್ಷ ತನ್ನ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಮಂಗಳವಾರ ರಾತ್ರಿ ಬಿಡುಗಡೆ ಮಾಡಿದೆ. ವಿಜಯನಗರ ಜಿಲ್ಲೆಯ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಸಹೋದರ-ಸಹೋದರಿ ನಡುವೆ ನಡೆದ ಟಿಕೇಟ್ ಪೈಪೋಟಿಯಲ್ಲಿ ಸಚಿವ ಆನಂದಸಿಂಗ್ ಅವರು ತಮ್ಮ ಪುತ್ರ ಸಿದ್ದಾರ್ಥಸಿಂಗ್‌ಗೆ ಬಿಜೆಪಿ ಟಿಕೇಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜ್ಯದ 224 ಅಭ್ಯರ್ಥಿಗಳ ಪೈಕಿ 189 ಕ್ಷೇತ್ರಗಳಿಗೆ ಬಿಜೆಪಿ ಮೊದಲ ಪಟ್ಟಿಯಲ್ಲಿ ಟಿಕೇಟ್ ನೀಡಲಾಗಿದೆ. ಈ ಪೈಕಿ ವಿಜಯನಗರ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಾದ 88 ಹಡಗಲಿ(ಎಸ್‌ಸಿ) ಕೃಷ್ಣನಾಯ್ಕ, 90ವಿಜಯನಗರ(ಹೊಸಪೇಟೆ)ಕ್ಕೆ ಸಿದ್ದಾರ್ಥಸಿಂಗ್, 96ಕೂಡ್ಲಿಗಿ(ಎಸ್‌ಟಿ)-ಲೋಕೇಶ್ ವಿ.ನಾಯಕ ಅವರಿಗೆ ಟಿಕೇಟ್ ಘೋಷಣೆಯಾದರೆ, ಹಗರಿಬೊಮ್ಮನಹಳ್ಳಿ ಮತ್ತು ಹರಪನಹಳ್ಳಿ ಕ್ಷೇತ್ರಕ್ಕೆ ಹೈಕಮಾಂಡ್ ಅಭ್ಯರ್ಥಿಗಳನ್ನು ಘೋಷಿಸದೆ ಪೆಂಡಿಂಗ್ ಇಟ್ಟಿದೆ.
ಬಳ್ಳಾರಿ ಜಿಲ್ಲೆಯಲ್ಲಿ 91 ಕಂಪ್ಲಿ(ಎಸ್‌ಟಿ) ಟಿ.ಎಚ್.ಸುರೇಶಬಾಬು, 92 ಸಿರುಗುಪ್ಪ(ಎಸ್‌ಟಿ)- ಎಂ.ಎಸ್.ಸೋಮಲಿಂಗಪ್ಪ, 93-ಬಳ್ಳಾರಿ(ಎಸ್ ಟಿ) ಬಿ.ಶ್ರೀರಾಮುಲು, 94 ಬಳ್ಳಾರಿ ಸಿಟಿ-ಗಾಲಿ ಸೋಮಶೇಖರರೆಡ್ಡಿ, 95 ಸಂಡೂರು(ಎಸ್‌ಟಿ) -ಶಿಲ್ಪ ರಾಘವೇಂದ್ರ ಇವರಿಗೆ ಬಿಜೆಪಿ ಟಿಕೇಟ್ ಘೋಷಣೆಯಾಗಿದೆ.
More Stories
ಸಂಡೂರು ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣ ಗೆಲುವು, ಯಾರಿಗೆ ಎಷ್ಟು ಮತ?
ನಾಡಿನ ಕಲೆ, ಸಂಸ್ಕೃತಿ ವಿಶ್ವಮಾನ್ಯವಾಗಿದೆ : ಕಾಂಗ್ರೆಸ್ ಯುವನಾಯಕ ಅಶೋಕ್ ಭೀಮನಾಯ್ಕ ಅಭಿಮತ
ಭಾರತೀಯ ಅಂಚೆ ಇಲಾಖೆಯಿಂದ ರಾಷ್ಟ್ರ ಮಟ್ಟದ ಪತ್ರಲೇಖನ ಸ್ಪರ್ಧೆ : ಅಂಚೆ ಅಧೀಕ್ಷಕರು ಪಿ.ಚಿದಾನಂದ ಹೇಳಿಕೆ