November 11, 2024

Hampi times

Kannada News Portal from Vijayanagara

ಏ.6 ಹಂಪಿ ಬ್ರಹ್ಮರಥೋತ್ಸವ

 

https://youtu.be/NHc6OMSu0K4?si=SI_K4goOPEgwo6h2

 

ಹಂಪಿ ಟೈಮ್ಸ್ ಹೊಸಪೇಟೆ:

ಹಂಪಿ ಶ್ರಿ ವಿರೂಪಾಕ್ಷೇಶ್ವರಸ್ವಾಮಿ ಮತ್ತು ಶ್ರೀ ವಿರೂಪಾಕ್ಷ ವಿದ್ಯಾರಣ್ಯ ಪೀಠಾಧೀಶ್ವರರ ಸಹಿತ ಶ್ರೀ ಚಂದ್ರಮೌಳೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಏ.6 ರಂದು ಸಂಜೆ 4.45ಕ್ಕೆ ಜರುಗಲಿದೆ. ಭಕ್ತಾಧಿಗಳು ದೇವರ ಸರ್ವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ಪಂಪಾವಿರೂಪಾಕ್ಷೇಶ್ವರ ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ ತಿಳಿಸಿದ್ದಾರೆ.

ಏ.1 ರಿಂದ ಏ.8ವರೆಗೆ ವಿವಿಧ ಧಾರ್ಮಿಕ ಪೂಜಾ, ಬ್ರಹ್ಮ ರಥೋತ್ಸವದ ಕಾರ್ಯಕ್ರಮಗಳು ಜರುಗಲಿವೆ.

  • ಏ.1 ಬೆಳಿಗ್ಗೆ: ಸಿಂಹವಾಹನೋತ್ಸವ, ರಾತ್ರಿ ಚಂದ್ರಮಂಡಲ ವಾಹನೋತ್ಸವ
  • ಏ.2 ಬೆಳಿಗ್ಗೆ ಸೂರ್ಯಪ್ರಭವಾಹನೋತ್ಸವ, ರಾತ್ರಿ ಶೇಷವಾಹನೋತ್ಸವ
  • ಏ.3 ಬೆಳಿಗ್ಗೆ ಶೇಷವಾಹನೋತ್ಸವ, ರಾತ್ರಿ ಪುಷ್ಪಮಂಟಪವಾಹನೋತ್ಸವ
  • ಏ.4 ಬೆಳಿಗ್ಗೆ ಪುಷ್ಪಮಂಟಪವಾಹನೋತ್ಸವ, ರಾತ್ರಿ ಶ್ರೀ ಪಂಪಾ ವಿರೂಪಾಕ್ಷೇಶ್ವರ ಸ್ವಾಮಿಯ ಕಲ್ಯಾಣೋತ್ಸವ ಹಾಗೂ ರಜತ ನಂದಿ ವಾಹನೋತ್ಸವ
  • ಏ.5 ಬೆಳಿಗ್ಗೆ ಮತ್ತು ರಾತ್ರಿ ಗಜವಾಹನೋತ್ಸವ
  • ಏ.6 ಬೆಳಿಗ್ಗೆ 10.25ಕ್ಕೆ ಬಹ್ಮರಥೋತ್ಸವ ಮಡಿತೇರು, ಸಂಜೆ 4.30ಕ್ಕೆ ಧ್ವಜ ಮುಕ್ತಿಬಾವುಟ ಹರಾಜು, ಸಂಜೆ 4.45ಕ್ಕೆ ಬ್ರಹ್ಮರಥೋತ್ಸವ
  • ಏ.7 ರಾತ್ರಿ ರಜತ ಅಶ್ವವಾಹನೋತ್ಸವ ಮೃಗಯಾತ್ರೆ ಕಡಬಿನ ಕಾಳಗ
  • ಏ.8 ಬೆಳಿಗ್ಗೆ ಪೂರ್ಣಾಹುತಿ ವಸಂತೋತ್ಸವ, 10.30ಕ್ಕೆ ಶ್ರೀಚಕ್ರತೀರ್ಥ ಕೋದಂಡಸ್ವಮಿ ಕಲ್ಯಾಣೊತ್ಸವ ಹಾಗೂ ರಥೋತ್ಸವ, ರಾತ್ರಿ 8ಕ್ಕೆ ಮನ್ಮುಖತೀರ್ಥದಲ್ಲಿ ಶ್ರೀ ಪಂಪಾ ವಿರೂಪಾಕ್ಷೇಶ್ವರಸ್ವಾಮಿಯ ತೆಪ್ಪೋತ್ಸವ.

 

 

 

 

ಜಾಹೀರಾತು
error: Content is protected !!