https://youtu.be/NHc6OMSu0K4?si=SI_K4goOPEgwo6h2
ಹಂಪಿ ಟೈಮ್ಸ್ ಹೊಸಪೇಟೆ:
ಜಿಲ್ಲೆಯಾದ್ಯಂತ ಚೆಕ್‌ಪೊಸ್ಟ್ಗಳು ಸಿಸಿ ಕ್ಯಾಮರದಡಿ ಹಗಲಿರಳು ಕಾರ್ಯ ನಿರ್ವಹಿಸುತ್ತಿದ್ದು, ವ್ಯಾಪಾರಸ್ಥರು ವಾಣಿಜ್ಯ ಸರಕುಗಳನ್ನು ಸಾಗಿಸುವ ಮತ್ತು ತರಿಸುವ ವೇಳೆ ಅಗತ್ಯ ದಾಖಲಾತಿ, ಬಿಲ್‌ಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ಬಿಲ್ ಇಲ್ಲದ ಸರಕರುಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಅನುರಾಧ ಜಿ. ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ ಹಮ್ಮಿ ಕೊಂಡಿದ್ದ, ಹೋಟೆಲ್, ಲಾಡ್ಜ್ ಮಾಲೀಕರು, ಆಭರಣ ಮಳಿಗೆ ಮಾಲೀಕರು, ಹೋಲ್‌ಸೇಲ್ ಅಂಗಡಿ ಮಾಲೀಕರು, ದಿನಸಿ ಅಂಗಡಿ, ಗೊಬ್ಬರ ಅಂಗಡಿ ಹಾಗೂ ಪೆಟ್ರೋಲ್ ಬಂಕ್ ಮಾಲೀಕರ ಸಭೆಯಲ್ಲಿ ಮಾತನಾಡಿದರು. ಚುನಾವಣಾ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಅಕ್ರಮ ಹಣ ಸಾಗಟ, ಮತದಾರರನ್ನು ಆಮಿಷಕ್ಕೆ ಒಳಪಡಿಸುವ ವಿವಿಧ ವಸ್ತುಗಳ ಸಾಗಟ ತಡೆಗಟ್ಟಲು ಚೆಕ್‌ಪೋಸ್ಟ್ಗಳನ್ನು ಜಿಲ್ಲೆಯಾದ್ಯಂತ ಸ್ಥಾಪಿಸಲಾಗಿದೆ. ದಾಖಲೆ ಪ್ರಸ್ತುತಪಡಿಸುವಲ್ಲಿ ಗೊಂದಲ ಉಂಟಾದರೆ ಅಧಿಕಾರಿಗಳು ಅದನ್ನು ವಶಪಡಿಸಿಕೊಳ್ಳುತ್ತಾರೆ. ಸೂಕ್ತ ದಾಖಲೆಗಳನ್ನು ಸಲ್ಲಿಸಿದ ನಂತರ ಪರಿಶೀಲಿಸಿ ಹಿಂತಿರುಗಿಸಲಾಗುವುದು. ಜಿಲ್ಲೆಯಲ್ಲಿ ನೀತಿ ಸಂಹಿತೆ ಅನುಸಾರ ಅಚ್ಚು-ಕಟ್ಟಾಗಿ ಚುನಾವಣೆ ನಡೆಯಲು ಸಹಕರಿಸಬೇಕು ಎಂದು ತಿಳಿಸಿದರು
ಅಧಿಕ ವಹಿವಾಟು ನಡೆದರೆ ಮಾಹಿತಿ ನೀಡಿ:
ವಾಣಿಜ್ಯ ಮಳಿಗೆಗಳಲ್ಲಿ ಅಧಿಕ ಪ್ರಮಾಣದಲ್ಲಿ ವಸ್ತುಗಳು ಖರೀದಿಸಿದಲ್ಲಿ ಜಿಎಸ್‌ಟಿ ಬಿಲ್ ಸಲ್ಲಿಸ ಬೇಕು. ಹೋಟೆಲ್, ಲಾಡ್ಜ್ಗಳಲ್ಲಿ ಹೆಚ್ಚಿನ ಸಂಖ್ಯೆ ಯಲ್ಲಿ ರೂಮ್ ಬುಕ್ಕಿಂಗ್, ವಿವಿಧ ಸಾಮಾಗ್ರಿಗಳ ಶೇಖರಣೆ ಆಗುವ ಸಂಭವ ಇದ್ದರೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ರಾಜಶೇಖರ ಬೈರಪ್ಪನವರ್ ಮಾತನಾಡಿ, ೫೦ ಸಾವಿರ ರೂ. ಮೇಲ್ಪಟ್ಟು ವಹಿವಾಟು ನಡೆದಾಗ ಕಂಪ್ಯೂಟರ್ ಬಿಲ್ ಕಡ್ಡಾಯವಾಗಿರುತ್ತದೆ. ವಿವಿಧ ವಾಣಿಜ್ಯ ಮಳಿಗೆಗಳ ಮಾಲೀಕರು ತಮ್ಮ ಬಳಿ ಇರುವ ಅಥವಾ ತಾವು ಸಂಗ್ರಹಿಸುವ ಗೋಡನ್‌ಗಳ ಮಾಹಿತಿ ಸಲ್ಲಿಸಬೇಕು. ಪ್ರತಿ ಚೆಕ್‌ಪೋಸ್ಟ್ಗಳಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ. ತಾವು ಸಾಗಿಸುವ ವಾಣಿಜ್ಯ ವಸ್ತುಗಳ ಜೊತೆಗೆ ಸರಕುಗಳ ಬಿಲ್ ಹೊಂದಿರಬೇಕು ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಕಾರ್ತಿಕ್ ಸೇರಿದಂತೆ ಅಂಗಡಿ ಮಾಲೀಕರ ಸಂಘದ ಪದಾಧಿಕಾರಿಗಳು ಇದ್ದರು.
More Stories
ಸಂಡೂರು ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣ ಗೆಲುವು, ಯಾರಿಗೆ ಎಷ್ಟು ಮತ?
ನಾಡಿನ ಕಲೆ, ಸಂಸ್ಕೃತಿ ವಿಶ್ವಮಾನ್ಯವಾಗಿದೆ : ಕಾಂಗ್ರೆಸ್ ಯುವನಾಯಕ ಅಶೋಕ್ ಭೀಮನಾಯ್ಕ ಅಭಿಮತ
ಭಾರತೀಯ ಅಂಚೆ ಇಲಾಖೆಯಿಂದ ರಾಷ್ಟ್ರ ಮಟ್ಟದ ಪತ್ರಲೇಖನ ಸ್ಪರ್ಧೆ : ಅಂಚೆ ಅಧೀಕ್ಷಕರು ಪಿ.ಚಿದಾನಂದ ಹೇಳಿಕೆ