July 17, 2025

Hampi times

Kannada News Portal from Vijayanagara

ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಶೇ.98.52 ಹಾಜರಿ, 298 ಗೈರು

https://youtu.be/NHc6OMSu0K4?si=SI_K4goOPEgwo6h2

 

ಹಂಪಿ ಟೈಮ್ಸ್ ಹೊಸಪೇಟೆ:

ವಿಜಯನಗರ ಜಿಲ್ಲೆಯಲ್ಲಿ  ಶುಕ್ರವಾರ ಆರಂಭಗೊಂಡ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪ್ರಥಮ ಭಾಷೆ ಪರೀಕ್ಷೆಯನ್ನು ಶೇ.98.52 ವಿದ್ಯಾರ್ಥಿಗಳು ಬರೆದಿದ್ದಾರೆ.  ಪರೀಕ್ಷೆಗೆ ನಿಯೋಜನೆಗೊಂಡ ಸಿಬ್ಬಂದಿ ವಿದ್ಯಾರ್ಥಿಗಳ ಪ್ರವೇಶ ಪತ್ರ ಪರಿಶೀಲಿಸಿ ಪರೀಕ್ಷಾ ಕೇಂದ್ರಗಳಲ್ಲಿ ಬರಮಾಡಿಕೊಂಡರು. ಆರೋಗ್ಯ ಇಲಾಖೆ ಸಿಬ್ಬಂದಿ ವಿದ್ಯಾರ್ಥಿಗಳನ್ನು ತಪಾಸಣೆ ಮಾಡಿದರು. ಪೊಲೀಸರು ಭದ್ರತೆ ಒದಗಿಸಿದ್ದರು.

ಜಿಲ್ಲೆಯಲ್ಲಿ ನೋಂದಣಿಗೊಂಡ  20140 ವಿದ್ಯಾರ್ಥಿಗಳು ಪೈಕಿ 19842 ವಿದ್ಯಾರ್ಥಿಗಳು ಹಾಜರಾಗಿದ್ದು, 298 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಅತಿ ಹೆಚ್ಚು ವಿದ್ಯಾರ್ಥಿಗಳು ನೋಂದಣಿಗೊಂಡಿದ್ದು, ಹೆಚ್.ಬಿ.ಹಳ್ಳಿ ತಾಲೂಕಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ.

ಹೊಸಪೇಟೆ ತಾಲೂಕಿನಲ್ಲಿ  5706 ವಿದ್ಯಾರ್ಥಿಗಳ ನೋಂದಣಿ ಪೈಕಿ 5619 ಹಾಜರಿ, 87 ಗೈರು

ಕೂಡ್ಲಿಗಿ ತಾಲೂಕಿನಲ್ಲಿ  4623 ವಿದ್ಯಾರ್ಥಿಗಳ ನೋಂದಣಿ ಪೈಕಿ 4543 ಹಾಜರಿ, 80 ಗೈರು

ಹರಪನಹಳ್ಳಿ ತಾಲೂಕಿನಲ್ಲಿ  4108 ವಿದ್ಯಾರ್ಥಿಗಳ ನೋಂದಣಿ ಪೈಕಿ 4057 ಹಾಜರಿ, 51 ಗೈರು

ಹೂವಿನ ಹಡಗಲಲಿ ತಾಲೂಕಿನಲ್ಲಿ  2883 ವಿದ್ಯಾರ್ಥಿಗಳ ನೋಂದಣಿ ಪೈಕಿ 2839 ಹಾಜರಿ, 44 ಗೈರು

ಹೆಚ್.ಬಿ.ಹಳ್ಳಿ ತಾಲೂಕಿನಲ್ಲಿ  2820 ವಿದ್ಯಾರ್ಥಿಗಳ ನೋಂದಣಿ ಪೈಕಿ 2784 ಹಾಜರಿ, 36 ಗೈರು

ಹೊಸಪೇಟೆಯ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಸದಾಶಿವ ಪ್ರಭು ಭೇಟಿ ನೀಡಿ ಪರೀಕ್ಷಾ ಕೇಂದ್ರದಲ್ಲಿ ಮೂಲ ಸೌಕರ್ಯ ಪರಿಶೀಲಿಸಿದರು. ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ. ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು.

 

* ಪರೀಕ್ಷೆಯಲ್ಲಿ ಬಂದಿದ್ದ ವಿದ್ಯಾರ್ಥಿಗಳ ಮೊಗದಲ್ಲಿ ಲವಲವಿಕೆ ಕಂಡಿತು. ಈ ಬಾರಿ ನಾಲ್ಕು ಹೊಸ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತ ಸಕಲ ಸಿದ್ದತೆ ಕೈಗೊಂಡಿದ್ದು, ಪ್ರಥಮ ಭಾಷೆ ಪರೀಕ್ಷೆ ಸುಸೂತ್ರವಾಗಿ ಜರುಗಿದೆ.

-ಜಿ. ಕೊಟ್ರೇಶ್ ಉಪನಿರ್ದೇಶಕ(ಆಡಳಿತ)

 

ಜಾಹೀರಾತು
error: Content is protected !!