https://youtu.be/NHc6OMSu0K4?si=SI_K4goOPEgwo6h2


ಹಂಪಿ ಟೈಮ್ಸ್ ಹೊಸಪೇಟೆ :
ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಿ, ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಕಾರ್ಯಪ್ರವೃತ್ತವಾಗಿದೆ. ವಿಜಯನಗರ ಜಿಲ್ಲೆಯು ಅಂತರ್‌ಜಿಲ್ಲಾ ಗಡಿ ಸೇರಿದಂತೆ 2 ಬದಿ ರಾಷ್ಟ್ರೀಯ ಹೆದ್ದಾರಿ ಸಹ ಹಾದುಹೋಗುವ ಕಾರಣದಿಂದ ಈ ಭಾಗಗಳಲ್ಲಿ ಸಂಚರಿಸುವ ಎಲ್ಲಾ ವಾಹನಗಳ ಮೇಲೆ ನಿಗಾ ವಹಿಸುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ವಿವಿಧ ಭಾಗಗಳಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ.
5 ಕ್ಷೇತ್ರಗಳಲ್ಲಿ 23 ಚೆಕ್‌ಪೋಸ್ಟ್ ಕಾರ್ಯಾಚರಣೆ: ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅಕ್ರಮವಾಗಿ ಸಾಗಿಸುವ ಹಣ, ಮದ್ಯ ಸೇರಿದಂತೆ ಆಮಿಷಕ್ಕೆ ಒಡ್ಡುವ ವಸ್ತುಗಳನ್ನು ಸಾಗಿಸುವುದು ಕಂಡುಬಂದಲ್ಲಿ ವಶಪಡಿಸಿಕೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 6 ತಾಲ್ಲೂಕಿನ 5 ವಿಧಾನಸಭಾ ಕ್ಷೇತ್ರಗಳಿದ್ದು, ಒಟ್ಟು 23 ಚೆಕ್‌ಪೋಸ್ಟ್ಗಳು ಈಗಾಗಲೇ ಕಾರ್ಯಾಚರಣೆ ಆರಂಭಿಸಿದೆ.
24/7 ಸಿಸಿಟಿವಿ ಕಣ್ಗಾವಲು, ಪಾಳಿಯಲ್ಲಿ ಸಿಬ್ಬಂದಿ ನಿಯೋಜನೆ:
ಪ್ರತಿ ಚೆಕ್‌ಪೋಸ್ಟ್ಗಳಿಗೂ ಸಿಸಿಕ್ಯಾಮರಾ ಆಳವಡಿಸಲಾಗಿದ್ದು, ಕಂಟ್ರೋಲ್ ರೂಂ ಮೂಲಕ ಪ್ರತಿ ಚೆಕ್‌ಪೋಸ್ಟ್ಗಳ ನೇರದೃಶ್ಯಾವಳಿ ವೀಕ್ಷಣೆ ಮಾಡಲಾಗುತ್ತದೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮೊಬೈಲ್‌ಗಳಲ್ಲೂ ಸಹ ಸಿಸಿಟಿವಿ ನೇರದೃಶ್ಯಾವಳಿ ಮೇಲೆ ನಿಗಾವಹಿಸಲು ಸಂಪರ್ಕ ಕಲ್ಪಿಸಲಾಗಿದೆ. ಪ್ರತಿ ಚೆಕ್‌ಪೋಸ್ಟ್ಗಳಲ್ಲಿ ಒಬ್ಬ ತಾಲ್ಲೂಕು ಮಟ್ಟದ ಅಧಿಕಾರಿ, ಪೊಲೀಸ್ ಸಿಬ್ಬಂದಿ, ಅಬಕಾರಿ/ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಒಬ್ಬ ವಿಡಿಯೋಗ್ರಾಫರ್ ಸೇರಿದಂತೆ ದಿನಕ್ಕೆ ಮೂರು ಪಾಳಿಯಂತೆ ಒಟ್ಟು 276 ಜನ ಸಿಬ್ಬಂದಿ ಚೆಕ್‌ಪೋಸ್ಟ್ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರತಿ ಚೆಕ್‌ಪೋಸ್ಟ್ಗಳಲ್ಲಿ ತೀವ್ರ ನಿಗಾವಹಿಸಿ ಕಾರ್ಯ ನಿರ್ವಹಿಸುವ ಜೊತೆಗೆ ಇತರ ಇಲಾಖೆಗಳ ಅಧಿಕಾರಿಗಳನ್ನು ಸಹ ವಾಹನಗಳ ತಪಾಸಣೆ ಮತ್ತು ಸರಕು ಸಾಮಾಗ್ರಿಗಳ ವಾಹನಗಳ ಪರಿಶೀಲನೆ ಕೈಗೊಳ್ಳಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೆಂಕಟೇಶ್ ಟಿ. ಅವರು ಸೂಚಿಸಿದ್ದಾರೆ.


88-ಹೂವಿನಹಡಗಲಿ ಕ್ಷೇತ್ರ(4 ಚೆಕ್‌ಪೋಸ್ಟ್) : ಹರವಿ ಬ್ರಿಡ್ಜ್, ಮೈಲಾರ-ಗುತ್ತಲ ರಸ್ತೆ, ರಾಜವಾಳ(ಸಿಂಗಟಲೂರು ಬ್ರಿಡ್ಜ್ ಹತ್ತಿರ), ಇಟ್ಟಗಿ(ಮೊರಾರ್ಜಿ ದೇಸಾಯಿ ವಸತಿ ಶಾಲೆ ಹತ್ತಿರ)
89-ಹಗರಿಬೊಮ್ಮನಹಳ್ಳಿ ಕ್ಷೇತ್ರ(4 ಚೆಕ್‌ಪೋಸ್ಟ್) : ದಶಮಾಪುರ, ಜಿಟಿಟಿಸಿ ಕಾಲೇಜು(ಮರಿಯಮ್ಮನಹಳ್ಳಿ), ಗರಗ-ನಾಗಲಾಪುರ, ಹರಾಳು ಕ್ರಾಸ್(ಕೊಟ್ಟೂರು ರಸ್ತೆ)
90-ವಿಜಯನಗರ(ಹೊಸಪೇಟೆ) (6 ಚೆಕ್‌ಪೋಸ್ಟ್) : ಗಣೇಶನ ಗುಡಿ(ಕೊಪ್ಪಳ-ಹೊಸಪೇಟೆ ರಸ್ತೆ), ಭುವನಹಳ್ಳಿ, ಬುಕ್ಕಸಾಗರ, ನಲ್ಲಾಪುರ, ಹೊಸೂರು(ರೈಲ್ವೆ ಬ್ರಿಡ್ಜ್), ಕಲ್ಲಹಳ್ಳಿ(ಸರ್ಕಾರಿ ಪ್ರಾಥಮಿಕ ಶಾಲೆ ಹತ್ತಿರ)
96-ಕೂಡ್ಲಿಗಿ ಕ್ಷೇತ್ರ(4 ಕ್ಷೇತ್ರ) : ಗೋವಿಂದಗಿರಿ ತಾಂಡ (ಸಂಡೂರು ರಸ್ತೆ), ಡಿ.ಸಿದ್ದಾಪುರ(ರಾಂಪುರ ರಸ್ತೆ), ಮೊಳಕಾಲ್ಮೂರು ರಸ್ತೆ, ಆಲೂರು(ರಾ.ಹೆ.50 ಚಿತ್ರದುರ್ಗ ರಸ್ತೆ)
104-ಹರಪನಹಳ್ಳಿ ಕ್ಷೇತ್ರ(5 ಚೆಕ್‌ಪೋಸ್ಟ್) : ಕಾನಹಳ್ಳಿ, ದುಗ್ಗಾವತಿ, ಮತ್ತಿಹಳ್ಳಿ, ಜಂಬುಲಿಂಗನಹಳ್ಳಿ, ಜಗಳೂರು ಉಜ್ಜಿನಿ(ಕೊಟ್ಟೂರು ರಸ್ತೆ)




More Stories
ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ಫೈನಲ್ಗೆ ಭಾರತ ಮಹಿಳಾ ತಂಡದ ಪ್ರವೇಶ
ಪೊಲೀಸರ ಸೇವೆ ಅವಿಸ್ಮರಣೀಯ: ಜಿಲ್ಲಾಧಿಕಾರಿ ಕವಿತಾ.ಎಸ್.ಮನ್ನಿಕೇರಿ
ಹೊಸಪೇಟೆಯಲ್ಲಿ ಗುರುವಂದನಾ ಕಾರ್ಯಕ್ರಮ: ಹಳೇ ವಿದ್ಯಾರ್ಥಿಗಳ ಸಾಧನೆಗೆ ಗುರುಗಳ ಹರ್ಷ