https://youtu.be/NHc6OMSu0K4?si=SI_K4goOPEgwo6h2
ಬಸವಣ್ಣ ಪುತ್ಥಳಿ ನಿರ್ಮಾಣ ವಿಜಯನಗರದ ಹೆಮ್ಮೆ
ಹಂಪಿಟೈಮ್ಸ್ ಹೊಸಪೇಟೆ:
ವಿಜಯನಗರ ಸಾಮ್ರಾಜ್ಯದ ಅರಸ ಪ್ರೌಢದೇವರಾಯನ ಕಾಲದಲ್ಲಿ ವಿಜಯನಗರವನ್ನು ವಿಜಯ ಕಲ್ಯಾಣವೇಂದೇ ಕರೆಯಲಾಗಿತ್ತು. ಈ ನೆಲದಲ್ಲಿ ವಚನಗಳ ಸಂಪಾದನೆಗೆ ಹೆಚ್ಚಿನ ಪ್ರಾಶಸ್ತö್ಯ ದೊರೆತ್ತಿತ್ತು. ಬಸವಾದಿ ಶರಣರ ಕೊಡುಗೆ ಅಪಾರವಿರುವ ಈ ನೆಲದಲ್ಲಿ ಬಸವಣ್ಣನ ಪುತ್ಥಳಿ ಹಾಗೂ ವೃತ್ತ ನಿರ್ಮಾಣಗೊಳ್ಳುತ್ತಿರುವುದು ವಿಜಯನಗರದ ಹೆಮ್ಮೆ ಎಂದು ಶ್ರೀ ಕೊಟ್ಟೂರುಸ್ವಾಮಿ ಮಠದ ಜಗದ್ಗುರು ಶ್ರೀ ಕೊಟ್ಟೂರು ಬಸವಲಿಂಗ ಮಹಾಸ್ವಾಮಿಜಿ ಹೇಳಿದರು.
ನಗರದ ಸಿದ್ಧಿಪ್ರಿಯ ಕಲ್ಯಾಣಮಂಟಪದ ಮುಂಭಾಗದ ವೃತ್ತಕ್ಕೆ ವಿಶ್ವಗುರು ಬಸವಣ್ಣ ವೃತ್ತ ಮತ್ತು ಬಸವಣ್ಣನÀ ಪುತ್ಥಳಿ ನಿರ್ಮಾಣಕ್ಕೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ವಿಜಯನಗರದಲ್ಲಿ ಬಸವಣ್ಣನವರ ವೃತ್ತ, ಪುತ್ಥಳಿ ನಿರ್ಮಾಣಕ್ಕೆ ಮುಂದಾಗಿರುವ ಸಚಿವ ಆನಂದಸಿಂಗ್ ಕಾರ್ಯ ಶ್ಲಾಘನೀಯವಾಗಿದ್ದು, ಶೀಘ್ರವೇ ಉದ್ಘಾಟನೆ ಕಾರ್ಯ ನೆರವೇರಲಿ. 12ನೇ ಶತಮಾನದಲ್ಲಿ ಸರ್ವರು ಸಮಾನರೆಂದು ಬಸವಣ್ಣ ತಮ್ಮ ವಚನಗಳ ಮೂಲಕ ಸಾರಿದರು. ಮೇಲು, ಕೀಳುಗಳಿಂದಲೇ ತುಂಬಿದ್ದ ಸಮಾಜವನ್ನು ಕುಲ ಹೊಲೆಗಳಿಂದ ಮುಕ್ತವಾಗಿಸಿದರು. 900 ವರ್ಷಗಳಿಂದ ಹಿಂದೆ ಇದ್ದ ಸಮಸ್ಯೆಗಳನ್ನು ಇಂದು ನಾವುಗಳು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಅಂತಹ ಕಠಿಣ ಸಂದರ್ಭಗಳಲ್ಲೂ ಸಮ ಸಮಾಜವನ್ನು ನಿರ್ಮಿಸಲು ಅವರು ಅನುಭವಿಸಿದ ನೋವುಗಳು ಎಂತಹ ಕ್ರೂರಿಗಳಲ್ಲೂ ಕಣ್ಣೀರು ತರಿಸುತ್ತದೆ. ವಿಶ್ವಕ್ಕೆ ವಸುದೈವಕುಟುಂಬಕವನ್ನು ಜಾರಿಗೆ ತಂದು ಇವನಾರವ ಇವನಾರವ ಎನ್ನದೆ ಇವ ನಮ್ಮವ ಇವ ನಮ್ಮವ ಎಂದ ಮಹಾಶರಣ ಬಸವಣ್ಣನನ್ನು ಸದಾ ನೆನೆಯಬೇಕು. ಯಾವತ್ತೂ ಮಹಾತ್ಮರೊಳಗೆ ಬಿನ್ನಬೇಧ ಮಾಡಿಲ್ಲ. ಎಲ್ಲರನ್ನೂ ಗೌರವಿಸಬೇಕು. ತಾತ್ವಿಕ ವಿಚಾರಗಳು ಬೇರೆ ಇದ್ದರೂ ಅದು ಅವರೊಳಗೆ ಸರಿಪಡಿಸಿಕೊಳ್ಳಬೇಕು. ಯಾರೂ ಇನ್ನೊಬ್ಬರ ಬಗ್ಗೆ ಅಸೂಯೆಪಡುವಂತಾಗಬಾರದು. ಅಸೂಹೆಪಡುವವರು ಬಸವ ಭಕ್ತರಾಗುವುದಿಲ್ಲ ಎಂದರು.
ಸಮಾಜ ಸೇವಕ ಸಿದ್ದಾರ್ಥಸಿಂಗ್ ಮಾತನಾಡಿ, ಬಸವಣ್ಣನವರು ಮಾನವ ಕುಲಕ್ಕೆ ಜ್ಯೋತಿಯಾಗಿದ್ದಾರೆ. ವಚನಗಳ ಮೂಲಕ ಇಡೀ ವಿಶ್ವಕ್ಕೆ ಗುರುವಾಗಿದ್ದಾರೆ. ಅಂತಹ ಮಹಾಶರಣರ ವೃತ್ತ ಹಾಗೂ ಪುತ್ಥಲಿ ನಿರ್ಮಾಣವಾಗುತ್ತಿರುವುದು ನಮ್ಮೆಲ್ಲರ ಹೆಮ್ಮೆಯಾಗಿದೆ. ಇಡೀ ಸಮಾಜದ ಹಿರಿಯ ಸಲಹೆ ಸೂಚನೆಗಳು, ಮಾರ್ಗದರ್ಶನದಿಂದ ಆನಂದಸಿಂಗ್ ಮಾಡುತ್ತಿದ್ದಾರೆ.ಇದು ಅವರೊಬ್ಬರ ಕೊಡುಗೆ ಅಲ್ಲ ಸಮಾಜದ ಹಿರಿಯರ ಪಾತ್ರವೂ ಪ್ರಮುಖವಾಗಿದೆ ಎಂದರು.
ಬಸವಣ್ಣನವರ ಪುತ್ಥಳಿಯೂ 20 ಚ.ಅಡಿಯ ಸುತ್ತಳತೆ ವೃತ್ತದಲ್ಲಿ ನಿರ್ಮಾಣಗೊಳ್ಳಲಿದ್ದು, ಒಟ್ಟು 25 ಅಡಿ ಎತ್ತರ ಇರಲಿದೆ. ಮೂರು ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ವಾಸ್ತುಶಿಲ್ಪಿ ಸ್ವಾಮಿನಾಥನ್ ತಿಳಿಸಿದರು.
ಶ್ರೀ ಸಿದ್ದಲಿಂಗಸ್ವಾಮಿ, ಸಮಾಜ ಸೇವಕ ಧರ್ಮೇಂದ್ರಸಿAಗ್, ನಗರಸಭೆ ಸ್ಥಾಯಿಸಮಿತಿ ಅಧ್ಯಕ್ಷ ತಾರಿಹಳ್ಳಿ ಜಂಬುನಾಥ, ನಗರಸಭೆ ಸದಸ್ಯ ಹೆಚ್.ಕೆ.ಮಂಜುನಾಥ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಎಚ್.ವಿ.ಶರಣಸ್ವಾಮಿ, ಕಾರ್ಯದರ್ಶಿ ಕೆ.ರವಿಶಂಕರ, ಮುಖಂಡರಾದ ಸಾಲಿಸಿದ್ದಯಸ್ವಾಮಿ, ಆರ್.ಪಿ.ಪ್ರಕಾಶ, ಡಾ.ಮೃತ್ಯುಂಜಯ ರುಮಾಲೆ, ಅಶ್ವಿನ್ ಕೋತಂಬ್ರಿ, ಸಾಲಿ ಬಸವರಾಜ, ಜಾಲಿ ಪ್ರಕಾಶ, ಉತ್ತಂಗಿ ಕೊಟ್ರೇಶ್, ಎಂ.ವಿರೂಪಾಕ್ಷಯ್ಯಸ್ವಾಮಿ, ಶಶಿಧರಸ್ವಾಮಿ, ಮಧುರಚನ್ನಶಾಸ್ತಿç, ರೇವಣಸಿದ್ದಪ್ಪ, ಲಕ್ಚರ್ ಬಸವರಾಜ, ಎಂ.ಬಸವರಾಜ, ಶಶಿಕಲಾ ನಾಗರಾಜ, ಡಾ.ಅಜೆಯ್ ಕುಮಾರ್, ಲೋಕೇಶ ಅವರಾದಿ, ವಾಸ್ತುಶಿಲ್ಪಿ ಶ್ರೀಪಾದ್ ಸೇರಿದಂತೆ ಸಮಾಜದ ಮುಖಂಡರು ಇದ್ದರು.
“ಎಲ್ಲರನ್ನೂ ಒಂದುಗೂಡಿಸಿ, ಅಪ್ಪಿಕೊಂಡ ಸಮಾಜವನ್ನೇ ಇಂದು ಕಡೆಗಣಿಸಲ್ಪಡುತ್ತಿರುವುದು ಬೇಸರ ತಂದಿದೆ. ಸಮಾಜದ ಹಿರಿಯರು ಸಮಾಜಮುಖಿಯಾಗಿ ಮಾಡಿದ ಶಿಕ್ಷಣ ಕ್ರಾಂತಿಯಿಂದಾಗಿ ನಾಡಿನಾದ್ಯಂತ ಅಕ್ಷರಸ್ಥರಾಗಿದ್ದಾರೆ. ಬರೀ ಅನ್ನ ಕೊಟ್ರೆ ಮನುಷ್ಯ ಸ್ವತಂತ್ರವಾಗಿ ಜೀವಿಸಲು ಸಾಧ್ಯವಿಲ್ಲ. ಮನುಷ್ಯ ವಿಚಾಲಶೀಲನಾಗಬೇಕು. ತನ್ನ ಅನ್ನವನ್ನು ತಾನೇ ಗಳಿಸಿಕೊಳ್ಳುವ ಶಿಕ್ಷಣ ದೊರಕಬೇಕು.
•- ಶ್ರೀ ಕೊಟ್ಟೂರು ಬಸವಲಿಂಗ ಮಹಾಸ್ವಾಮೀಜಿ., ಎಚ್.ವಿ.ಶರಣಸ್ವಾಮಿ, ಅಧ್ಯಕ್ಷರು, ವೀರಶೈವ ಲಿಂಗಾಯತ ಸಮಾಜ, ಹೊಸೊಪೇಟೆ.
“ವಿಶ್ವಗುರು ಬಸವಣ್ಣನವರ ವೃತ್ತ ಹಾಗೂ ಪುತ್ಥಳಿ ಸ್ಥಾಪನೆ ಅನೇಕ ವರ್ಷಗಳಿಂದ ಕನಸಾಗಿಯೆ ಉಳಿದಿತ್ತು. ಸಮಾಜಬಾಂಧವರ ಬಹುದಿನಗಳ ಬೇಡಿಕೆಯನ್ನು ಸಚಿವ ಆನಂದಸಿಂಗ್ ಈಡೇರಿಸಲು ಮುಂದಾಗಿರುವುದು ಎಲ್ಲರಲ್ಲೂ ಹರ್ಷ ತಂದಿದೆ
-ಎಚ್.ವಿ.ಶರಣಸ್ವಾಮಿ,
More Stories
ಪೊಲೀಸರ ಬದುಕಿನ ಬಹುಪಾಲು ಸಮಯ ನಮ್ಮೆಲ್ಲರ ಒಳಿತಿಗಾಗಿ ಮೀಸಲು : ವೀಣಾ ಹೇಮಂತ್ಗೌಡ ಪಾಟೀಲ್
ಮೊದಲ ಉದ್ಯೋಗ ಮೇಳದಲ್ಲಿ 417 ಅಭ್ಯರ್ಥಿಗಳು ಆಯ್ಕೆ, 9 ಲಕ್ಷ ರೂ.ವರೆಗೆ ಪ್ಯಾಕೇಜ್ : ಮೆಟ್ರಿ ಮಲ್ಲಿಕಾರ್ಜುನ
ಐವರು ಸಾಧಕರು ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ : ಸಿಎಂ ಸಿದ್ದರಾಮಯ್ಯ