November 7, 2024

Hampi times

Kannada News Portal from Vijayanagara

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ: ಶೇ.94.46 ವಿದ್ಯಾರ್ಥಿಗಳು ಹಾಜರ್

 

https://youtu.be/NHc6OMSu0K4?si=SI_K4goOPEgwo6h2

 

 

12,451 ವಿದ್ಯಾರ್ಥಿಗಳು ಹಾಜರ್

730 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು‌

ಒಟ್ಟು 13,181  ವಿದ್ಯಾರ್ಥಿಗಳ ನೋಂದಣಿ

 

ಹಂಪಿ ಟೈಮ್ಸ್  ಹೊಸಪೇಟೆ:

ಜಿಲ್ಲೆಯ 18 ಪರೀಕ್ಷಾ ಕೇಂದ್ರಗಳಲ್ಲಿ  ಗುರುವಾರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಆರಂಭಗೊಂಡಿದ್ದು, ಮೊದಲ ದಿನ ನಡೆದ ಕನ್ನಡ ಭಾಷಾ ಪರೀಕ್ಷೆಗೆ ಶೇ.94.46ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು.

ಹೊಸಪೇಟೆಯ 5 ಪರೀಕ್ಷಾ ಕೇಂದ್ರಗಳು ಸೇರಿದಂತೆ ಜಿಲ್ಲೆಯ 18 ಪರೀಕ್ಷಾ ಕೇಂದ್ರಗಳಲ್ಲಿ  ಪರೀಕ್ಷೆ ನಡೆಯಿತು.  ಪೊಲೀಸ್ ಇಲಾಖೆ ಸಿಬ್ಬಂದಿ ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಇದ್ದು, ಪರೀಕ್ಷಾರ್ಥಿಗಳ ಪ್ರವೇಶ ಪತ್ರ ಪರಿಶೀಲಿಸಿ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿಕೊಟ್ಟರು. ಆರೋಗ್ಯ ಇಲಾಖೆ ಸಿಬ್ಬಂದಿ ಪರೀಕ್ಷಾರ್ಥಿಗಳ ತಪಾಸಣೆ ನಡೆಸಿದರು. ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ. ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಲಾಗಿತ್ತು. ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಭದ್ರತೆ ಸಹ ಒದಗಿಸಲಾಗಿತ್ತು.

ಶೇ.94.46ರಷ್ಟು ಹಾಜರಾತಿ ವಿವರ: ಮೊದಲ ದಿನ ನಡೆದ ಕನ್ನಡ ಭಾಷಾ ಪರೀಕ್ಷೆಗೆ ಜಿಲ್ಲೆಯಲ್ಲಿ ನೋಂದಾಯಿಸಿದ್ದ ಒಟ್ಟು 13,181  ವಿದ್ಯಾರ್ಥಿಗಳ ಪೈಕಿ 12,451 ವಿದ್ಯಾರ್ಥಿಗಳು ಹಾಜರಾಗಿದ್ದರು. 730 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದು, ಶೇ.94.46ರಷ್ಟು ಹಾಜರಾತಿ ದಾಖಲಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಹೆಚ್.ಸುಗೇಂದ್ರ ಅವರು ಮಾಹಿತಿ ನೀಡಿದ್ದಾರೆ.

ತಾಲ್ಲೂಕುವಾರು ಹಾಜರಾತಿ:      
ಹೊಸಪೇಟೆ(5 ಪರೀಕ್ಷಾ ಕೇಂದ್ರ)
ನೋಂದಣಿ 3528, ಹಾಜರಿ 3364, ಗೈರು 164

ಕೊಟ್ಟೂರು(2 ಪರೀಕ್ಷಾ ಕೇಂದ್ರ)
ನೋಂದಣಿ 2046, ಹಾಜರಿ 1981, ಗೈರು 65

ಕೂಡ್ಲಿಗಿ(2 ಪರೀಕ್ಷಾ ಕೇಂದ್ರ)
ನೋಂದಣಿ 1206, ಹಾಜರಿ 1046, ಗೈರು 160

ಹೂವಿನಹಡಗಲಿ(2 ಪರೀಕ್ಷಾ ಕೇಂದ್ರ)
ನೋಂದಣಿ 1429, ಹಾಜರಿ 1361, ಗೈರು 68

ಹಗರಿಬೊಮ್ಮನಹಳ್ಳಿ(2 ಪರೀಕ್ಷಾ ಕೇಂದ್ರ)
ನೋಂದಣಿ 1887, ಹಾಜರಿ 1793, ಗೈರು 94

ಹರಪನಹಳ್ಳಿ(5 ಪರೀಕ್ಷಾ ಕೇಂದ್ರ)
ನೋಂದಣಿ 3085, ಹಾಜರಿ 2906, ಗೈರು 179

 

 

ಜಾಹೀರಾತು
error: Content is protected !!