March 15, 2025

Hampi times

Kannada News Portal from Vijayanagara

ವೆಂಕಟೇಶ್ವರಸ್ವಾಮಿ ವಾರ್ಷಿಕ ಬ್ರಹ್ಮೋತ್ಸವ

 

https://youtu.be/NHc6OMSu0K4?si=SI_K4goOPEgwo6h2

 

ಹಂಪಿಟೈಮ್ಸ್ ಹೊಸಪೇಟೆ:

ನಗರದ  ಅಮರಾವತಿಯ ಸಪ್ತಗಿರಿ ಸೇವಾ ಟ್ರಸ್ಟ್ನವತಿಯಿಂದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಾ.10 ರಿಂದ ಮಾ.12ವರೆಗೆ ವಾರ್ಷಿಕ ಬ್ರಹ್ಮೋತ್ಸವ ನಿಮಿತ್ತ ವಿವಿಧ ವಿಶೇಷ ಪೂಜೆ ಜರುಗಲಿವೆ.

ಮಾ.10ರಂದು ಐಶ್ವರ್ಯ ಪ್ರಾಪ್ತಿಗಾಗಿ  ಬೆಳಿಗ್ಗೆ 9ಕ್ಕೆ ಪಂಚಾಮೃತ ಅಭಿಷೇಕ, ನಾಗದೋಷ ನಿವಾರಣೆ ಹಾಗೂ ಅಷ್ಟೈಶ್ವರ್ಯ ಅನುಗ್ರಹಕ್ಕಾಗಿ ಸಂಜೆ 5.30ಕ್ಕೆ ಶೇಷವಾಹನ ಪೂಜೆ, ಅಭಿವೃದ್ಧಿ ಮತ್ತು ಅಷ್ಟೈಶ್ವರ್ಯ ಅನುಗ್ರಹಕ್ಕಾಗಿ ಸಂಜೆ 6.30ಕ್ಕೆ ಧನಲಕ್ಷ್ಮಿ ಹೋಮ.

ಮಾ.11 ರಂದು ವ್ಯಾಪಾರ ಅಭಿವೃದ್ಧಿ ಮತ್ತು ವಂಶಾಭಿವೃದ್ಧಿಗಾಗಿ ಬೆಳಿಗ್ಗೆ 9.30ಕ್ಕೆ ಗರುಡವಾಹನ ಪೂಜೆ, ಸಂತಾನ ಪ್ರಾಪ್ತಿಗಾಗಿ ಬೆಳಿಗ್ಗೆ 11ಕ್ಕೆ ಗರುಡ ಧ್ವಜಾರೋಹಣ ಪೂಜೆ, ಸಕಲ ಅಭಿವೃದ್ಧಿ ಹಾಗೂ ವಿವಾಹ ಪ್ರಾಪ್ತಿಗಾಗಿ ಸಂಜೆ 5.30ಕ್ಕೆ ಶ್ರೀನಿವಾಸ ಕಲ್ಯಾಣೋತ್ಸವ ಪೂಜೆ.

ಮಾ.12ರಂದು ಭಯ ನಿವಾರಣೆಗಾಗಿ ಬೆಳಿಗ್ಗೆ 9ಕ್ಕೆ ಚಕ್ರಸ್ತಾನ, ಸಕಲ ಅಭಿವೃದ್ಧಿಗೆ  ಬೆಳಿಗ್ಗೆ 10ಕ್ಕೆ ಗಜವಾಹನ ಪೂಜೆ, ಆರೋಗ್ಯ ಅಭಿವೃದ್ಧಿ ಶತ್ರುದೋಷ ನಿವಾರಣೆಗೆ ಬೆಳೀಗ್ಗೆ 11ಕ್ಕೆ ಸುದರ್ಶನ ಹೋಮ, ಸಕಲ ದೋಷ ನಿವಾರಣೆಗೆ ಸಂಜೆ 6ಕ್ಕೆ ರಥೋತ್ಸವ ನಂತರ 7.30ಕ್ಕೆ ಗರುಡ ಧ್ವಜಾರೋಹಣ ಜರುಗಲಿದೆ. ಭಕ್ತಾದಿಗಳು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಅನುಗ್ರಹ ಪಡೆಯಬೇಕೆಂದು ಅಮರಾವತಿಯ ಸಪ್ತಗಿರಿ ಶ್ರೀನಿವಾಸ ಸೇವಾ ಟ್ರಸ್ಟ್ ತಿಳಿಸಿದೆ.

 

 

ಜಾಹೀರಾತು
error: Content is protected !!