https://youtu.be/NHc6OMSu0K4?si=SI_K4goOPEgwo6h2
ಹಂಪಿಟೈಮ್ಸ್ ಹೊಸಪೇಟೆ:
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವಿಜಯನಗರ ಜಿಲ್ಲೆ,ಶರಣ ಸಾಹಿತ್ಯ ಪರಿಷತ್ತು ಕದಳಿ ಮಹಿಳಾ ವೇದಿಕೆ ತಾಲೂಕು ಘಟಕ ಹೊಸಪೇಟೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ವಿಜಯನಗರ ಜಿಲ್ಲಾ ಘಟಕ ಇವರ ಸಹಯೋಗದಲ್ಲಿ ಚಿತ್ತವಾಡಗಿ ಬೆಲ್ಲದ ಚೆನ್ನಪ್ಪ ದತ್ತಿ ಉಪನ್ಯಾಸ, 158ನೇ ಮಹಾಮನೆ ಕಾರ್ಯಕ್ರಮ ಹಾಗೂ ಕೃತಿಗಳ ಬಿಡುಗಡೆ ಸಮಾರಂಭ ಶನಿವಾರ ಸಂಜೆ ನಗರದ ಗೃಹರಕ್ಷಕ ದಳದ ಸಭಾ ಮಂಟಪದಲ್ಲಿ ಜರುಗಿತು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ವಿಜಯನಗರ ಜಿಲ್ಲೆಯ ಜಿಲ್ಲಾಧ್ಯಕ್ಷರು, ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ.ಕೆ.ರವೀಂದ್ರನಾಥ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿಕೊಂಡು ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು.ಹೊಸಪೇಟೆಯ ನಿವೃತ್ತ ಇಂಜಿನಿಯರಾದ ಕೆ.ಎಂ.ಬಸವರಾಜ ಅವರ ‘ಕವಿ ಮನ ಪಯಣ’ ಕವನ ಸಂಕಲನ ಹಾಗೂ ಹಿರಿಯ ಸಾಹಿತಿ, ಕಚುಸಾಪ ಗೌರವಾಧ್ಯಕ್ಷರಾದ ಚಂದ್ರಶೇಖರಯ್ಯ ರೋಣದಮಠ ಅವರ ‘ಜನ್ಮ ಜನ್ಮದ ಅನುಬಂಧ’ ಕಥಾಸಂಕಲನ ಈ ಎರಡು ಕೃತಿಗಳನ್ನು ಜನಾರ್ಪಣೆಗೊಳಿಸಿ ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ಕವಿ, ಸಾಹಿತಿಗಳಿಗೆ ಮುಖ್ಯವಾಗಿ ಇರಬೇಕಾದಂತಹ ಸಾಮಾಜಿಕ ಕಾಳಜಿ ಹಾಗೂ ಜವಾಬ್ದಾರಿಯ ಬಗ್ಗೆ ತಿಳಿಹೇಳಿದರು.
ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ವಿಜಯನಗರ ಜಿಲ್ಲಾ ಘಟಕದ ಅಧ್ಯಕ್ಷರಾದ ಎಲ್.ಹಾಲ್ಯಾನಾಯ್ಕ ಅವರು ‘ಕವಿ ಮನ ಪಯಣ’ ಕವನ ಸಂಕಲನ ಕೃತಿಯ ಪರಿಚಯವನ್ನು ಹಾಗೂ ಶರಣ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷರಾದ ಹೆಚ್.ಸೌಭಾಗ್ಯಲಕ್ಷ್ಮಿ ಅವರು ‘ಜನ್ಮ ಜನ್ಮದ ಅನುಬಂಧ’ ಕಥಾಸಂಕಲನದ ಪರಿಚಯವನ್ನು ಮಾಡಿಕೊಟ್ಟರು.
ಕಾರ್ಯಕ್ರಮದಲ್ಲಿ ‘ಬೆಲ್ಲದ ಚೆನ್ನಪ್ಪನವರ ಸಾಮಾಜಿಕ ಒಲವು’ ವಿಷಯದ ಕುರಿತು ಸಂಗೀತ ಭಾರತೀಯ ಅಧ್ಯಕ್ಷರಾದ ಹೆಚ್.ಪಿ. ಕಲ್ಲಂಭಟ್ಟ್ ಅವರು ದತ್ತಿ ಉಪನ್ಯಾಸ ನೀಡಿ, ಹಿಂದಿನ ಕುಟುಂಬಗಳಲ್ಲಿದ್ದಂತಹ ಮೌಲ್ಯಗಳ ಬಗ್ಗೆ ಪ್ರಸ್ತಾಪಿಸಿದರು. ಸಮಾರಂಭದಲ್ಲಿ ಕೃತಿಕಾರರಿಗೆ ಹಾಗೂ ಕೊಪ್ಪಳದ ಶ್ರೀ.ಗವಿಸಿದ್ದೇಶ್ವರ ಭಕ್ತಿ ಸಿಂಚನ ಧ್ವನಿಸುರಳಿಗೆ ಸಹಕರಿಸಿದ ಸಂತೋಷ ಚಿತ್ರಗಾರ ಹೊಸಪೇಟೆ ತಂಡದವರಿಗೆ ಸನ್ಮಾನಿಸಲಾಯಿತು.
ವೀರಶೈವ ಸಮಾಜದ ಮುಖಂಡರಾದ ಕೆ. ಗಂಗಾಧರಪ್ಪ, ಕೊಪ್ಪಳದ ಸಾಹಿತಿಗಳಾದ ಈಶ್ವರ ಹತ್ತಿ, ನಿವೃತ್ತ ಶಿಕ್ಷಕರಾದ ಕೊಟ್ರಬಸಯ್ಯ, ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ರಾಮಣ್ಣ, ಗೃಹರಕ್ಷಕ ದಳದ ಘಟಕಾಧಿಕಾರಿಗಳಾದ ಎಸ್. ಎಂ. ಗಿರೀಶ್, ಚಿತ್ತವಾಡ್ಗಿಯ ಮಂಗಳ ಗೌರಿ ವಿಶ್ವನಾಥ, ನಿವೃತ್ತ ಕನ್ನಡ ಪಂಡಿತರಾದ ಎಂ.ಎಂ. ವಿರೂಪಾಕ್ಷಯ್ಯ ಸ್ವಾಮಿ ಇತರರು ಉಪಸ್ಥಿತರಿದ್ದರು. ಕಸಾಪ ಕಾರ್ಯದರ್ಶಿಗಳಾದ ಉಮಾಮಹೇಶ್ವರ ಪ್ರಾಥಿಸಿದರು. ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ಡಾ. ಆರ್. ಅಕ್ಕಮಹಾದೇವಿ ಸ್ವಾಗತಿಸಿದರು ಶಿಕ್ಷಕರಾದ ಎನ್.ನಾಗರಾಜ್ ನಿರ್ವಹಿಸಿದರು.
More Stories
ಸಂಡೂರು ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣ ಗೆಲುವು, ಯಾರಿಗೆ ಎಷ್ಟು ಮತ?
ನಾಡಿನ ಕಲೆ, ಸಂಸ್ಕೃತಿ ವಿಶ್ವಮಾನ್ಯವಾಗಿದೆ : ಕಾಂಗ್ರೆಸ್ ಯುವನಾಯಕ ಅಶೋಕ್ ಭೀಮನಾಯ್ಕ ಅಭಿಮತ
ಭಾರತೀಯ ಅಂಚೆ ಇಲಾಖೆಯಿಂದ ರಾಷ್ಟ್ರ ಮಟ್ಟದ ಪತ್ರಲೇಖನ ಸ್ಪರ್ಧೆ : ಅಂಚೆ ಅಧೀಕ್ಷಕರು ಪಿ.ಚಿದಾನಂದ ಹೇಳಿಕೆ