June 14, 2025

Hampi times

Kannada News Portal from Vijayanagara

ವಿಶ್ವವಿದ್ಯಾಲಯದ ಋಣ ಮರೆಯಬಾರದು: ಉಪ ಕುಲಪತಿ ಡಾ. ವಿಜಯ್ ಪೂಣಚ್ಚ ತಂಬಂಡ

https://youtu.be/NHc6OMSu0K4?si=SI_K4goOPEgwo6h2

 

ಆಡಳಿತದಲ್ಲಿ ಪಾರದರ್ಶಕತೆ ಅಗತ್ಯ
ಹಂಪಿಟೈಮ್ಸ್ ಹೊಸಪೇಟೆ:

ಅಧ್ಯಾಪಕರು, ಆಡಳಿತ ಸಿಬ್ಬಂದಿಗಳು ಅವರವರ ಕೆಲಸಗಳನ್ನು ಶ್ರದ್ಧೆಯಿಂದ ನಿರ್ವಹಿಸಿದರೆ ಕನ್ನಡ ವಿಶ್ವವಿದ್ಯಾಲಯದ ಪ್ರಗತಿ ತನ್ನಿಂದ ತಾನೇ ಆಗುತ್ತದೆ ಎಂದು ಉಪ ಕುಲಪತಿ ಡಾ.ವಿಜಯ್ ಪೂಣಚ್ಚ ತಂಬಂಡ ಅಭಿಪ್ರಾಯಪಟ್ಟರು.

ಕನ್ನಡ ವಿಶ್ವವಿದ್ಯಾಲಯದ ನೂತನ ಉಪ ಕುಲಪತಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಭುವನವಿಜಯ ಸಭಾಂಗಣದಲ್ಲಿ ಮಂಗಳವಾರ ವಿಶ್ವವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಕನ್ನಡ ವಿಶ್ವವಿದ್ಯಾಲಯದ ಋಣ ನಮ್ಮ ಮೇಲಿದೆ. ವಿಶ್ವವಿದ್ಯಾಲಯ ಕೊಟ್ಟ ಕೆಲಸಗಳನ್ನು ನಿಯಮಾನುಸಾರ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯಗಳನ್ನು ಪಾಲಿಸಬೇಕು. ವಿಶ್ವವಿದ್ಯಾಲಯದ ಋಣ ಮತ್ತು ನಿಯಮಗಳು ಮುಖ್ಯವೇ ಹೊರತು, ಉಳಿದ ವಿಷಯಗಳು ನಗಣ್ಯ. ಯಾವುದೇ ಕೆಲಸಗಳಲ್ಲಿ ಹಸ್ತಕ್ಷೇಪಗಳಿಲ್ಲದೆ ಸರಿಯಾದ ನಿಟ್ಟಿನಲ್ಲಿ ಪ್ರೀತಿ-ವಿಶ್ವಾಸದಿಂದ ವಿಶ್ವವಿದ್ಯಾಲಯದ ಕೆಲಸವನ್ನು ಮಾಡೋಣ ಎಂದು ಹೇಳಿದರು.

ಕುಲಸಚಿವ ಡಾ.ಎ.ಸುಬ್ಬಣ್ಣ ರೈ, ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

ಜಾಹೀರಾತು
error: Content is protected !!