December 5, 2024

Hampi times

Kannada News Portal from Vijayanagara

ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ರಾಜೀನಾಮೇಗೆ ಆಗ್ರಹ

 

https://youtu.be/NHc6OMSu0K4?si=SI_K4goOPEgwo6h2

ಹಂಪಿಟೈಮ್ಸ್ ಹೊಸಪೇಟೆ:

ಜನಪರ ಆಡಳಿತ, ಐತಿಹಾಸಿ ಬಜೆಟ್ ಮಂಡಿಸಿ ಜನನಾಯಕ ಎನಿಸಿಕೊಂಡಿರುವ ಮಾಜಿ ಸಿಎಂ ಸಿದ್ದರಾಮಯ್ಯರ ಬಗ್ಗೆ ಲಘುವಾಗಿ ಮಾತನಾಡಿ, ಕೋಮು ಗಲಬೆಗೆ ಪ್ರೇರಣೆ ನೀಡುತ್ತಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎಸ್.ಅಶ್ವತ್ ನಾರಾಯಣ ಅವರ ರಾಜೀನಾಮೆ ಪಡೆದು ಬಂಧಿಸಬೇಕು ಎಂದು ಹೊಸಪೇಟೆ ಸಿದ್ದರಾಮಯ್ಯ ಅಭಿಮಾನ ಬಳಗೆ ಸರ್ಕಾರಕ್ಕೆ ಒತ್ತಾಯಿಸಿದೆ.

ನಗರದಲ್ಲಿ ಮಂಗಳವಾರ ಸಂಗೊಳ್ಳಿರಾಯಣ್ಣ ವೃತ್ತದಿಂದ ತಹಶೀಲ್ದಾರ ಕಚೇರಿವರೆಗೆ ಅಶ್ವತ್ ನಾರಾಯಣ ಅವರ ಶವಸಂಸ್ಕಾರದ ಚಟ್ಟಾವನ್ನು (ಅಣುಕು ಪ್ರದರ್ಶನ) ಮಾಡಿ ಅಕ್ರೋಶ ವ್ಯಕ್ತಪಡಿಸಿದರು. ಬಳಗದ ಮುಖಂಡ ವಕೀಲ ಹೆಚ್.ಮಹೇಶ್ ಮಾತನಾಡಿ, ಬಿ.ಜೆ.ಪಿ ಸರ್ಕಾರ ಚುನಾವಣೆ ಸಮಯದಲ್ಲಿ ಕೋಮು ಗಲಬೆ ಉಂಟಾಗುವಂತೆ ಜಾತಿ ಜಾತಿಗಳ ಮಧ್ಯೆ ಜಗಳ ಹಚ್ಚುವುದು, ಭಯದ ವಾತಾವರಣವನ್ನುಂಟು ಮಾಡುತ್ತಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನನ್ನು ಹೊಡೆದು ಹಾಕಬೇಕು ಎಂದು ಸಚಿವ ಅಶ್ವತ್ ನಾರಾಯಣ ಹೇಳಿರುವುದು ಅವರ ಅಸ್ವಸ್ಥತೆಯನ್ನು ತೋರಿಸುತ್ತದೆ.

ಯಾವ ಇತಿಹಾಸದ ಪುಸ್ತಕದಲ್ಲಿಯೂ ಊರಿಗೌಡ-ನಂಜೇಗೌಡ ಹೆಸರು ಇಲ್ಲದಿದ್ದ ಸಮಯದಲ್ಲಿ ಅಲ್ಲಿರುವ ಒಂದು ಜನಾಂಗದ ಮತವನ್ನು ಸೆಳೆಯುವುದಕ್ಕೋಸ್ಕರ ಜಾತಿ ವಿಷ ಬೀಜ ಬಿತ್ತಲಿಕ್ಕೆ ಹೊರಟಿರುವ ಇವರನ್ನು ಸರ್ಕಾರದಿಂದ ವಜಾ ಮಾಡಿ ಕಾನೂನು ಕ್ರಮ ಜರುಗಿಸಬೇಕು. ಭಾರತದ ಸಂವಿಧಾನದಲ್ಲಿ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಪ್ರಮಾಣವಚನ ತೆಗೆದುಕೊಂಡAತೆ ನಡೆದುಕೊಳ್ಳಬೇಕು ಎಂದು ಪ್ರತಿಭಟನೆಗಾರರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಅಭಿಮಾನಿ ಬಳಗದ ಮುಖಂಡರಾದ ಕೆ.ರವಿಕುಮಾರ್, ಜಿ.ಗೌಡರ ರಾಮಚಂದ್ರ, ಬಣ್ಣದ ಮನೆ ಸೋಮಶೇಖರ್, ಡಿ.ವೆಂಕಟರಮಣ, ವೀರಭದ್ರನಾಯಕ, ಅಯ್ಯಾಳಿ ಮೂರ್ತಿ, ದಾಸನಾಳ್ ಹನುಮೇಶಿ, ದಲ್ಲಾಳಿ ಕುಬೇರ, ಜಿ.ಗೋಪಾಲಕೃಷ್ಣ, ಅಯ್ಯಾಳಿ ಮೂರ್ತಿ, ಜೊಂಡಿಲಿಂಗಪ್ಪ, ಬಿಸಾಟಿ ತಾಯಪ್ಪ, ಜಂಬಣ್ಣ ಮೇಟಿ, ಬಸಲಿಂಗಪ್ಪ ಎಸ್.ಮೇಟಿ, ಜಿ.ವಿನಾಯಕ, ರಾಘವೇಂದ್ರ ಸಂಕ್ಲಾಪುರ, ದಮ್ಮೂರು ಮಂಜುನಾಥ, ಬೊಲ್ಲೂರ ಬಿ.ಯಂಕೋಬಿ, ಡಿ.ಭೀಮೇಶಿ, ಕೇಶವ, ಗಂಟೇ ಉಮೇಶ, ಜಡಿಯಪ್ಪ, ಹನುಮಂತ.ಡಿ, ಕೆ.ಸಿದ್ದಪ್ಪ, ಇತರರು ತಹಸೀಲ್ದಾರ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.

 

 

ಜಾಹೀರಾತು
error: Content is protected !!