November 11, 2024

Hampi times

Kannada News Portal from Vijayanagara

ಪಿ.ಡಿ.ಐ.ಟಿ. ವಿಸ್ಮಯಗೆ 2ನೇ ರ‍್ಯಾಂಕ್

 

https://youtu.be/NHc6OMSu0K4?si=SI_K4goOPEgwo6h2

 

ಹಂಪಿಟೈಮ್ಸ್ ಹೊಸಪೇಟೆ:

ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುತ್ ಮತ್ತು ವಿದ್ಯುನ್ಮಾನ (ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್) ವಿಭಾಗದ ವಿದ್ಯಾರ್ಥಿನಿ ಕುಮಾರಿ ವಿಸ್ಮಯ.ಕೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 2ನೇ ರ‍್ಯಾಂಕ್ ಗಳಿಸುವ ಮೂಲಕ ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ.

ಫೆ.24ರಂದು ಬೆಳಗಾವಿಯಲ್ಲಿ ಆಯೋಜಿಸಲಾಗಿರುವ ವಿಟಿಯುನ 22ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪದವಿ ಹಾಗೂ ರ‍್ಯಾಂಕ್ ಪ್ರಮಾಣಪತ್ರ ಪಡೆಯಲಿದ್ದಾರೆ.  ಪರೀಕ್ಷೆಗಳಲ್ಲಿ ಒಟ್ಟು 9.4 ಸಿ.ಜಿ.ಪಿ.ಎ, ಅಂಕಗಳನ್ನು ಪಡೆದಿರುತ್ತಾರೆ. ಟಿ.ಬಿ. ಡ್ಯಾಂ ನಿವಾಸಿ ಮೋಹನ್ ದಾಸ್ ಕೆ, ಹಾಗೂ ಬಿಂದು,ಕೆ ರವರ ಸುಪುತ್ರಿಯಾಗಿದ್ದು, ಪ್ರಸ್ತುತ ಈ ವಿದ್ಯಾರ್ಥಿನಿ ಬೆಂಗಳೂರಿನ ಅಮೆಜಾನ್ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವೀರಶೈವ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು, ಪಿ.ಡಿ.ಐ.ಟಿ.ಯ ಆಡಳಿತ ಮಂಡಳಿ ಅಧ್ಯಕ್ಷ ಪಲ್ಲೇದ್ ದೊಡ್ಡಪ್ಪ, ಪಿ.ಡಿ.ಐ.ಟಿ.ಯ ಪ್ರಾಂಶುಪಾಲ ಡಾ.ಯು.ಎಂ.ರೋಹಿತ್, ಉಪಪ್ರಾಂಶುಪಾಲರಾದ ಪಾರ್ವತೀ ಕಡ್ಲಿ, ಎಲೆಕ್ಟಿçಕಲ್ ಮತ್ತು ಎಲೆಕ್ಟಾçನಿಕ್ಸ್ ವಿಭಾಗದ ಮುಖ್ಯಸ್ಥರಾದ ಪ್ರೊ.ಎಸ್.ಪ್ರಕಾಶ್, ಪ್ರಾಧ್ಯಾಪಕ ವೃಂದ ಹಾಗೂ ಸಿಬ್ಬಂದಿ ವರ್ಗ ಅಭಿನಂದನಿಸಿದ್ದಾರೆ.

 

 

ಜಾಹೀರಾತು
error: Content is protected !!