December 5, 2024

Hampi times

Kannada News Portal from Vijayanagara

ಕೊಟ್ಟೂರು ದೊರೆ ಶ್ರೀಗುರು ಬಸವೇಶ್ವರ ಜಾತ್ರೆ ಅದ್ಧೂರಿ

 

https://youtu.be/NHc6OMSu0K4?si=SI_K4goOPEgwo6h2

ಕೊಟ್ಟೂರು ದೊರೆ ಶ್ರೀಗುರು ಬಸವೇಶ್ವರ ಜಾತ್ರೆ ಅದ್ಧೂರಿ
ರಥೋತ್ಸವ ವೈಭವ ಕಣ್ತುಂಬಿಕೊಂಡ ಲಕ್ಷಾಂತರ ಭಕ್ತರು

ಹಂಪಿ ಟೈಮ್ಸ್ ಹೊಸಪೇಟೆ :

ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ  ಗುರುವಾರ ಮೂಲ ನಕ್ಷತ್ರದಲ್ಲಿ  ಶ್ರೀ ಗುರು ಬಸವೇಶ್ವರ ಸ್ವಾಮಿಯ ರಥೋತ್ಸವ ಅದ್ಧೂರಿಯಾಗಿ ಜರುಗಿತು.

ಜಿಲ್ಲಾಡಳಿತ ಹಾಗೂ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮದಾಯ ದತ್ತಿ ಇಲಾಖೆ ನೇತೃತ್ವದಲ್ಲಿ ರಥೋತ್ಸವ  ಹಾಗೂ ಧಾರ್ಮಿಕ ಕಾರ್ಯಗಳು ಜರುಗಿದವು. ಫೆ.12ರಿಂದ ಆರಂಭವಾದ ವಿವಿಧ ಪೂಜಾ ಧಾರ್ಮಿಕ ಕಾರ್ಯಗಳು ಐದನೇ ದಿನ ಜಾತ್ರಾ ಮಹೋತ್ಸವದೊಂದಿಗೆ ಸಂಪನ್ನಗೊಂಡವು. ರಥೋತ್ಸವ ಅಂಗವಾಗಿ ತೇರನ್ನು ವಸ್ತ್ರ, ನಾನಾ ಪುಷ್ಪಗಳಿಂದ ಅಲಂಕಾರಗೊಳಿಸಲಾಗಿತ್ತು.
ಪಲ್ಲಕ್ಕಿಯನ್ನು ಮೂರು ಸುತ್ತು ಪ್ರದಕ್ಷಿಣೆ ಹಾಕಿದ ನಂತರ ಶಿವಪ್ರಕಾಶ ಕೊಟ್ಟೂರು ಸ್ವಾಮೀಜಿ ಭಕ್ತಾದಿಗಳತ್ತ ಕೈಬೀಸಿ ತೇರಿನಲ್ಲಿ ಆಸೀನರಾದರು. ನಂತರ ಪಲ್ಲಕ್ಕಿಯಿಂದ ಶ್ರೀಗುರು ಬಸವೇಶ್ವರ ಸ್ವಾಮಿಯನ್ನು ತೇರಿನಲ್ಲಿ ಪ್ರತಿಷ್ಠಾಪಿಸಿ ಭಕ್ತರ ಸಮ್ಮುಖದಲ್ಲಿ ತೇರನ್ನು ಎಳೆಯಲಾಯಿತು.

ವಿಜಯನಗರ ಜಿಲ್ಲೆ ಸೇರಿದಂತೆ ನಾಡಿನ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಕಾಲ್ನಡಿಗೆಯಲ್ಲಿ ಆಗಮಿಸಿ ಭಕ್ತಿ ಮೆರೆದರು. ಜಾತ್ರಾ ಮಹೋತ್ಸವ ಹಾಗೂ ರಥೋತ್ಸವದ ನಿಮಿತ್ತ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ನೇತೃತ್ವದಲ್ಲಿ  ಜಿಲ್ಲಾ ಪೊಲೀಸ್ ಇಲಾಖೆಯಿಂದ ಕಾನೂನು ಸುವ್ಯವಸ್ಥೆ ಹಾಗೂ ಭದ್ರತೆ ಒದಗಿಸಲಾಗಿತ್ತು.

 

 

ಜಾಹೀರಾತು
error: Content is protected !!