December 5, 2024

Hampi times

Kannada News Portal from Vijayanagara

ಹಂಪಿ ಉತ್ಸವದಲ್ಲಿ ರಂಗಬಿಂಬ ಕಲಾವಿದರಿಂದ ಶರೀಫ ನಾಟಕ

 

https://youtu.be/NHc6OMSu0K4?si=SI_K4goOPEgwo6h2

ಹಂಪಿಟೈಮ್ಸ್ ಹೊಸಪೇಟೆ:

ಹಂಪಿ ಉತ್ಸವದ ಮೂರನೇ ದಿನ ಭಾನುವಾರ ರಾತ್ರಿ ಸಾಸುವೆಕಾಳು ಗಣಪತಿ ವೇದಿಕೆಯಲ್ಲಿ ಮರಿಯಮ್ಮನಹಳ್ಳಿಯ ರಂಗಬಿಂಬದ  ಕಲಾವಿದರು ಪ್ರದರ್ಶಿಸಿದ ಶರೀಫ ನಾಟಕವು ಪ್ರೇಕ್ಷರನ್ನು ಮಂತ್ರಮುಗ್ದರನ್ನಾಗಿತು.

ಮಂಜುನಾಥ ಬೆಳಕೆರೆ ಅವರು ರಚಿಸಿರುವ, ಪತ್ರಕರ್ತ ಹಾಗೂ ರಂಗಸಂಘಟಕ ಸಿ.ಕೆ. ನಾಗರಾಜ ಅವರ ನಿರ್ದೇಶನದಲ್ಲಿ ಶರೀಫ ನಾಟಕವು ಅತ್ಯಂತ ಮನೋಜ್ಞವಾಗಿ ಪ್ರದರ್ಶನಗೊಂಡಿತು.

ಶರೀಫ ನಾಟಕದಲ್ಲಿ ಕೆ. ಮಲ್ಲನಗೌಡ ಅವರು ಶರೀಫ, ಬಿ. ಸರದಾರ ಅವರು ಗೋವಿಂದ ಭಟ್ಟ, ಜಿ. ಮಲ್ಲಪ್ಪ ಅವರು ಗರಗದ ಮಡಿವಾಳಪ್ಪ ಹಾಗೂ ಹಿರೇಮಠದ ಸಿದ್ದರಾಮಯ್ಯ, ಎಂ. ಅರ್. ಚಿನ್ನಾಪ್ರಯ್ಯಅವರು ನಾಗಲಿಂಗಸ್ವಾಮಿ, ಹಾಗೂ ಚನ್ನಬಸವಯ್ಯ, ಜಿ. ಸೋಮಣ್ಣ ಅವರು ಇಮಾಮ್ ಹಾಗೂ ಮುದುಕಪ್ಪ, ಟಿ.ನವೀನ್ ಅವರು ಸಾಂಬಶಿವ ಹಾಗೂ ಕೃಷ್ಣ, ಎಲ್. ಕೊಟ್ರೇಶ್ ಅವರು ವಾಮನ, ಮಡಿವಾಳರ ಮಂಜುನಾಥ ಅವರು ರಾಮಾಶಾಸಿöÃ, ಕಟ್ಟೆ ಉಮೇಶ್ ವಿರೂಪಾಕ್ಷಿ, ಡಿ. ನಾರಾಯಣ ಅವರು ಕರಿಯಪ್ಪ, ಸಿ. ಕೆ. ನಾಗರಾಜ ಅವರು ಮೈಲಾರಿ, ಬಿ. ಶಾರದಮ್ಮ ಅವರು ಹಜ್ಜಮಾ, ಕೆ. ಸರ್ವಮಂಗಳ ಅವರು ನಾಗಕ್ಕ, ಪುಷ್ಪ ಅವರು ಫಾತಿಮಾ ಪಾತ್ರ ನಿರ್ವಹಿಸಿದರು. ನಾಟಕದ ಎಲ್ಲಾ ಕಲಾವಿದರು ಉತ್ತಮವಾಗಿ ಅಭಿನಯಿಸಿ, ಪ್ರೇಕ್ಷಕರನ್ನು ಗಮನ ಸೆಳೆದರು.

ನಾಟಕಕ್ಕೆ ಗಾಯಕರಾಗಿ ಕರಣಂ ಸಂತೋಷ್ ಕಿರಣ್, ಹರ‍್ಮೋನಿಯಂ ತಿಪ್ಪಣ್ಣ, ತಬಲ ಮೌನೇಶ್ ಸಂಗೀತದಲ್ಲಿ ತೊಡಗಿಕೊಂಡು ಪ್ರೇಕ್ಷಕರ ಗಮನಸೆಳೆದರು. ಅಕ್ಷರ ಎನ್. ದೇವನಕೊಂಡ ಅವರು ನಾಟಕಕ್ಕೆ ಬೆಳಕು ನಿರ್ವಹಿಸಿದರು.

 

 

ಜಾಹೀರಾತು
error: Content is protected !!