December 5, 2024

Hampi times

Kannada News Portal from Vijayanagara

ಕಂಪ್ಲಿಯ ವಿರುಪಾಕ್ಷಗೆ ಕುಸ್ತಿಯಲ್ಲಿ ರಾಜ್ಯಮಟ್ಟದ ಕಿಶೋರ್ ಪ್ರಶಸ್ತಿ 

 

https://youtu.be/NHc6OMSu0K4?si=SI_K4goOPEgwo6h2

ಹಂಪಿಟೈಮ್ಸ್ ಹೊಸಪೇಟೆ :

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಹೊಸ ಮಲಪನಗುಡಿ ವಿಜಯ ವಿದ್ಯಾರಣ್ಯ ಶಿಲಾ ಮೈದಾನದಲ್ಲಿ ಜನವರಿ 28ರಂದು ನಡೆದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ಅಂತಿಮ ಹಣಾಹಣಿಯಲ್ಲಿ ಕುಸ್ತಿ ಪಟುಗಳಾದ ವಿರುಪಾಕ್ಷ, ಸಂಜು, ಶರತ್, ಯೋಗೇಶ, ತೇಜಸ್ವಿನಿ, ಬಸೀರಾ, ಭುವನೇಶ್ವರಿ, ಶಾಹೀದಾಬೇಗಂ ಅವರು ಗೆಲುವಿನ ಮಾಲೆಯನ್ನು ತಮ್ಮ ಮುಡಿಗೇರಿಸಿಕೊಂಡರು.
ಬೆಳಗ್ಗೆ 11 ಗಂಟೆಗೆ ಆರಂಭಗೊಂಡ ಕುಸ್ತಿ ಪಂದ್ಯವು ಮಧ್ಯಾಹ್ನ 2.30ರವರೆಗೆ ನಿರಂತರ ನಡೆಯಿತು. ವಿವಿಧ ವಿಭಾಗಗಳಲ್ಲಿ ಬೆಳಗ್ಗೆಯಿಂದ ಸೆಣಸಿ ವಿಜೇತರಾದ ಕುಸ್ತಿ ಪಟುಗಳ ಮಧ್ಯೆ ನಡೆದ ಅಂತಿಮ ಹಂತದ ಸ್ಪರ್ಧೆಯಲ್ಲಿ ವಿಜೇತರಾದ ಅಭ್ಯರ್ಥಿಗಳು ಬೆಲ್ಟ್ ತೊಟ್ಟು ಗೆಲುವಿನ ನಗೆ ಬೀರಿದರು.

ಎದುರಾಳಿ ಹೊಸಪೇಟೆಯ ಕೀರ್ತಿ ಅವರನ್ನು ಮಣಿಸಿ ಕಂಪ್ಲಿಯ ವಿರುಪಾಕ್ಷ ಅವರು 57 ಕೆಜಿಯ ಕಿಶೋರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಎದುರಾಳಿ ಸ್ಪರ್ಧಿ ಹಳಿಯಾಳದ ನೀಲಪ್ಪ ಬಿ.ಜಿ. ಅವರನ್ನು ಮಣಿಸಿ ದಾವಣಗೆರೆಯ ಸಂಜು ಕೊರವರ ಅವರು 65 ಕೆಜಿಯ ಹಂಪಿ ಕುಮಾರ ಪುರಸ್ಕಾರವನ್ನು ಪಡೆದರು. ಎದುರಾಳಿ ಸ್ಪರ್ಧಿ ದಾವಣಗೆರೆಯ ಭೀಮ ಅವರನ್ನು ಮಣಿಸಿ ಹರಪನಹಳ್ಳಿಯ ಶರತ್ ಅವರು 74ಕೆಜಿಯ ಹಂಪಿ ಕೇಸರಿ ಪುರಸ್ಕಾರ ಗಿಟ್ಟಿಸಿದರು. 86 ಕೆಜಿಯ ಹಂಪಿ ಕಂಠೀರವ್ ಪ್ರಶಸ್ತಿಗೆ ನಡೆದ ರೋಚಕ ಪಂದ್ಯದಲ್ಲಿ ಎದುರಾಳಿ ಸ್ಪರ್ಧಿ ಹೊಸಪೇಟೆಯ ಪ್ರಭು ಅವರನ್ನು ಮಣಿಸಿ ದಾವಣಗೆರೆಯ ಯೋಗೇಶ ಅವರು ಗೆಲವಿನ ಮಾಲೆಯನ್ನು ತಮ್ಮ ಮುಡಿಗೇರಿಸಿಕೊಂಡರು.

ಮಹಿಳಾ ವಿಭಾಗ: ರಾಜ್ಯಮಟ್ಟದ ಕುಸ್ತಿ ಪಂದ್ಯದ ಮಹಿಳಾ ವಿಭಾಗದಲ್ಲಿ ಹಂಪಿಯ ಕಿಶೋರಿ ಸ್ಪರ್ಧೆಯಲ್ಲಿ ಕಂಪ್ಲಿಯ ತೇಜಸ್ವಿನಿ ಅವರು ಪ್ರಥಮ ಹಾಗೂ ವಿಜಯಪುರದ ಸೋನಿಯಾ ದ್ವಿತೀಯ ಸ್ಥಾನ ಪಡೆದರು. ಹಂಪಿ ಕುಮಾರಿ ಸ್ಪರ್ಧೆಯಲ್ಲಿ ಬಸೀರಾ ಬಿಂಗಿ ಪ್ರಥಮ ಹಾಗೂ ಗದಗ ಜಿಲ್ಲೆಯ ವೈಷ್ಣವಿ ಅವರು ದ್ವಿತೀಯ ಸ್ಥಾನ ಪಡೆದರು. ಹಂಪಿ ಕೇಸರಿ ಸ್ಪರ್ದೇಯಲ್ಲಿ ಭುವನೇಶ್ವರಿ ವಕಾರದ ಪ್ರಥಮ ಹಾಗೂ ಗದಗ ಜಿಲ್ಲೆಯ ವರಲಕ್ಷ್ಮಿ ಅವರು ದ್ವಿತೀಯ ಸ್ಥಾನ ಪಡೆದರು. ಹಂಪಿ ಕಂಠೀರವ ಸ್ಪರ್ಧೆಯಲ್ಲಿ ಶಾಹೀದಾಬೇಗಂ ವೆಂಕಟಾಪುರ ಪ್ರಥಮ ಹಾಗೂ ಬಿನ್ನಾಳದ ಶೈಲಾ ದ್ವಿತೀಯ ಸ್ಥಾನ ಪಡೆದರು.

ಶರಣಗೌಡ ಬೇಲೇರಿ, ಸಾಯಿರಾ ಬಾನು, ನೀತೀನ್, ಬೀರಲಿಂಗ್ ಹಾಗೂ ಇತರರು ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ತಾಪಂ ಇಓ ರಮೇಶ ಜೆ.ವಿ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಹರಿಸಿಂಗ್ ರಾಥೋಡ್, ಮಲಪನಗುಡಿಯ ಗ್ರಾಪಂ ಅಧ್ಯಕ್ಷರಾದ ರಘು ನಾಯ್ಕ ಹಾಗೂ ಇತರರು ವಿಜೇತ ಕ್ರೀಡಾಪಟುಗಳಿಗೆ ಬೆಲ್ಟ್ ತೊಡಿಸಿ ಗೌರವಿಸಿದರು.

 

 

ಜಾಹೀರಾತು
error: Content is protected !!