https://youtu.be/NHc6OMSu0K4?si=SI_K4goOPEgwo6h2
ಹಂಪಿಟೈಮ್ಸ್ ಹೊಸಪೇಟೆ :
ಸೂರ್ಯಾಸ್ತ ಸಮೀಪಿಸತ್ತಿದ್ದಂತೆ ಐತಿಹಾಸಿ ವಿಜಯನಗರ ಸಾಮ್ರಾಜ್ಯದ ಗತ ವೈಭವ ಎದುರು ಬಸವಣ್ಣ ವೇದಿಕೆಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮದ ಮೂಲಕ ಮತ್ತೆ ಮರುಕಳಿಸಿತು. ಹಂಪಿ ಉತ್ಸವ ಎರಡನೇ ದಿನದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಹಾಗೂ ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ ಕಲಾವಿದರು ಗಂಧರ್ವಲೋಕವನ್ನು ಧರೆಗಿಳಿಸಿದರು. ಆರಂಭದಲ್ಲಿ ಹಗರಬೊಮ್ಮನಹಳ್ಳಿ ಮಹಾಂತೇಶ್ ಹಾಗೂ ಅವರ ತಂಡ ‘ಸಂಗೋಳ್ಳಿ ರಾಯಣ್ಣ’ ‘ಚಲ್ಲಿದರು ಮಲ್ಲಿಗೆಯ’ ಹಾಗೂ ರೈತ ಗೀತೆಯನ್ನು ಪ್ರಸ್ತುತ ಪಡಿಸಿದರು.
ಉತ್ತರ ಕನ್ನಡ ಜಿಲ್ಲೆಯ ಅನ್ನಪೂರ್ಣೇಶ್ವರಿ ಅಂಧರ ಗೀತೆ ಗಾಯನ ಸಂಘದ ಕಲಾವಿದರು ‘ನಮ್ಮಮ್ಮ ಶಾರದೆ’ ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಕುರಿತ ಗೀತೆ, ಹಾಗೂ ‘ಕಾಣದ ಕಡಲಿಗೆ’ ಗೀತೆಗಳನ್ನು ಹಾಡಿದರು.
ಮೈಮರೆಸಿದ ಶಹನಾಯಿ ನಾದ; ಹಾವೇರಿಯ ಪಂಡಿತ್ ಟಿ.ಬಿ.ಬಸವರಾಜ ಭಜಂತ್ರಿ ಹಾಗೂ ಪರುಶುರಾಮ ಹನುಮಂತಪ್ಪ ಭಜಂತ್ರಿ ಅವರ ಶಹನಾಯಿ ನಾದ ಕೇಳುಗರನ್ನು ಸನ್ಮೋಹನಗೊಳಿಸಿತು. ಧಾರವಾಡದ ಡಾ.ಪ್ರಸನ್ನ ಗುಡಿಯ ಅವರ ಹಂಪಿಯ ಐತಿಹ್ಯ ಸಾರುವ ಗೀತೆ ‘ಹಂಪಿ ವಿರೂಪಾಕ್ಷ ವಿಜಯನಗರ ಯಂತ್ರೋಧಾರ ಹನುಮ’ ಶಾಸ್ತ್ರೀಯ ಗೀತೆ ಜನರ ಮೆಚ್ಚುಗೆ ಗಳಿಸಿತು.
ಶಿವಮೊಗ್ಗದ ಬಿ.ವಿ.ವಿಜಯಲಕ್ಷ್ಮೀ ಅವರ ವೀಣಾ ವಾದನ, ಮಧುಸೂಧನ ಅವರ ಸಂಗೀತ,ಮೈಸೂರಿನ ಮೇಲುಕೋಟೆ ಸಾಗರ ಅವರ ಸ್ಯಾಕ್ಸಫೆÇೀನ್, ಚಿತ್ರದುರ್ಗ ಕೆ.ಓ ಶಿವಣ್ಣ ಹಾಗೂ ಸುಂಕೇಶ್.ಎಂ, ಧಾರವಾಡದ ಸೌಮ್ಯ ಡೊಳ್ಳಿನ ಹಾಗೂ ವಿಜಯಪುರದ ಡಾ.ಹರೀಶ್ ಹೆಗಡೆ ಅವರ ಸುಗಮ ಸಂಗೀತ ಕೇಳುಗರ ಮೈಮರೆಸಿತು. ಮಕ್ಕಳು ಮನಸೂರೆಗೊಂಡ ಕಿಂದರ ಜೋಗಿ ನೃತ್ಯ ರೂಪಕ; ಬೆಂಗಳೂರಿನ ರಂಗಕಹಳೆ ತಂಡದ ಮಕ್ಕಳು ಕುವೆಂಪು ವಿರಚಿತ ಬೊಮ್ಮನಹಳ್ಳಿ ಕಿಂದರಿಜೋಗಿ ನೃತ್ಯ ರೂಪಕ ಪ್ರದರ್ಶಿಸಿದರು. 50ಕ್ಕೂ ಹೆಚ್ಚು ಮಕ್ಕಳಿಂದ ಮೂಡಿಬಂದ ಈ ನೃತ್ಯ ರೂಪಕ ಮಕ್ಕಳ ಸೇರಿದಂತೆ ವಯಸ್ಕರ ಮನಸೂರೆಗೊಂಡಿತು. ಆದರೆ ಆಯೋಜಕರು ನೃತ್ಯ ರೂಪಕವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿದ್ದು ಪ್ರೇಕ್ಷಕರಿಗೆ ನಿರಾಸೆ ಉಂಟುಮಾಡಿತು. ಬೆಂಗಳೂರಿನ ಗೌರಿ ಶಂಕರ ಅಕಾಡಿಮೆ ಕಲ್ಚರ್ ಟ್ರಸ್ಟ್ ಮಕ್ಕಳ ಜಾನಪದ ಗೀತೆಗಳನ್ನು ಹೇಳಿದರು.
ವೇದಿಕೆ ಮೇಲೆ ಭರತನಾಟ್ಯ ವೈಭವ; ಹಂಪಿಯ ಕಲಾ ಶ್ರೀಮಂತಿಕೆಯ ವೈಭವ ಭರತನಾಟ್ಯದ ಮೂಲಕ ವೇದಿಕೆ ಮೇಲೆ ಅನಾವರಣಗೊಂಡಿತು. ಬೆಂಗಳೂರಿನ ಭರತನಾಟ್ಯ ಸಂಗೀತ ಅಕಾಡೆಮೆ, ಪುμÁ್ಪಂಜಲಿ ನೃತ್ಯ ಶಾಲೆ, ಉμÁ.ಬಿ ಹಾಗೂ ಅವರ ತಂಡ, ನಾಗಭೂಷಣ, ಬಾಗಲಕೋಟೆಯ ಶ್ರೇಯಾ ಪ್ರಸಾದ್ ಕುಲಕರ್ಣಿ, ಕೃತಿಕಾ ದಯಾನಂದ, ಬೋಲಾರ್‍ನ ಡಾ.ಶೋಭಾರಾಣಿ ಭರತನಾಟ್ಯ ಕಲೆ ಪ್ರದರ್ಶಿಸಿದರು. ಮಾತಂಗ ಪರ್ವತದಲ್ಲಿ ಮಾರ್ಧನಿಸಿದ ಜನಪದ ಸಂಗೀತ; ಹಂಪಿ ಉತ್ಸವದಲ್ಲಿ ಜಾನಪದ ಕಲೆಗಳು ಹಾಗೂ ಗೀತಗಾಯನಗಳು ತಮ್ಮ ಸೊಗಡನ್ನು ಪಸರಿಸಿದವು. ಜನಪದ ಸಂಗೀತದ ಧ್ವನಿ ಮಾತಂಗ ಪರ್ವತದಲ್ಲಿ ಮಾರ್ಧನಿಸಿತು. ಕೊಪ್ಪಳದ ಶರಣಪ್ಪ ವಡಿಗೇರ, ಕಲಾವತಿ ಮತ್ತು ತಂಡ ಜನಪದ ಗೀತೆಗಳನ್ನು ಹಾಡಿದರೆ, ಹುಬ್ಬಳ್ಳಿಯ ಸ್ವರ್ಣ ಮಯೂರಿ ತಂಡ ಜಾನಪದ ನೃತ್ಯ ರೂಪಕ ಪ್ರದರ್ಶಿಸಿದರು.
ಮಧುರ ಹಿಂದುಸ್ತಾನಿ ಸಂಗೀತ; ಉಡುಪಿ ಕೃಷ್ಣಪ್ಪ ಕಾರ್ಕಳ, ಬೆಂಗಳೂರಿನ ಡಾ.ಮುದ್ದುಮೋಹನ್, ಉತ್ತರ ಕನ್ನಡದ ವಿದೂಷಿ ಲಕ್ಷ್ಮೀ ಹೆಗಡೆ ಹಾಗೂ ಹುಬ್ಬಳಿಯ ಬಾಲಚಂದ್ರ ನಾಟೋಡ್ ಮಧುರ ಹಿಂದುಸ್ತಾನಿ ಸಂಗೀತವನ್ನು ಕೇಳುಗರ ಕರ್ಣಗಳಿಗೆ ಉಣಬಡಿಸಿದರು. ಬೆಂಗಳೂರಿನ ಡಾ.ಬೇಗಾರ್ ಶಿವಕುಮಾರ ಅವರ ಯಕ್ಷಗಾನ ಪ್ರೇಕ್ಷರಿಗೆ ವಿಶೇಷ ಅನುಭೂತಿ ನೀಡಿತು. ಪರಂವಃ ಟ್ರೈಲರ್ ಬಿಡುಗಡೆ; ವಿಜಯನಗರ ಜಿಲ್ಲೆಯ ಕೂಡ್ಲಗಿ ತಾಲೂಕಿನ ನಟ ಪ್ರೇಮ ಸಿಡೆಗಲ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಪರಂವಃ ಚಲನಚಿತ್ರದ ಟ್ರೈಲರ್‍ನ್ನು ವೇದಿಕೆಯಲ್ಲಿ ಪ್ರದರ್ಶಿಸಲಾಯಿತು.
ಪೀಪಲ್ ವಲ್ರ್ಡ್ ಪ್ರಸುತ್ತ ಪಡಿಸಿರುವ ಈ ಚಿತ್ರದಲ್ಲಿ ಮೈತ್ರಿ, ಗಣೇಶ್ ಹೆಗ್ಗೋಡು, ನಾಜರ್.ಪಿ.ಎಸ್. ಶೃತಿ, ಮುಕುಂದ ಮೈಗೂರು, ಅವಿನಾಶ್, ಶಭರೀಶ್ ನಟಿಸಿದ್ದಾರೆ. ಸಂತೋμï ಕೈಡಾಲಾ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಅಪರಜಿತ್ ಮತ್ತು ಜಾಸ್ ಜೊಸ್ಸೀ ಸಂಗೀತ ನೀಡಿದ್ದಾರೆ. ನಟ ಪ್ರೇಮ ಸಿಡೆಗಲ್ ಅವಕಾಶ ನೀಡಿದ ಜಿಲ್ಲಾಡಳಿತಕ್ಕೆ ವಂದಿಸಿ, ಚಲನಚಿತ್ರ ಡೈಲಾಗ್ ಹೇಳುವುದರ ಮೂಲಕ ಜನರನ್ನು ರಂಜಿಸಿದರು.
More Stories
ಜನರು ಧಂಗೆ ಏಳುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಿ , ಸುಳ್ಳು ದೂರು ನೀಡಿದಲ್ಲಿ 3 ವರ್ಷ ಜೈಲು: ಉಪ ಲೋಕಾಯುಕ್ತ ಬಿ.ವೀರಪ್ಪ
ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಿ….ಜಯ ನಿಮ್ಮದೇ….
ದಾಖಲೆ ವಹಿವಾಟು ನಡೆಸಿದ ಕೊಪ್ಪಳ ಹಣ್ಣು ಮತ್ತು ಜೇನು ಮೇಳ