November 11, 2024

Hampi times

Kannada News Portal from Vijayanagara

ವಿಜಯನಗರ ವೈಭವಕ್ಕೆ ಸಾಕ್ಷಿಯಾಗಲಿದೆ ಧ್ವನಿ-ಬೆಳಕು : ಸಚಿವ ಆನಂದ್ ಸಿಂಗ್

 

https://youtu.be/NHc6OMSu0K4?si=SI_K4goOPEgwo6h2

 

ಧ್ವನಿ-ಬೆಳಕು ಸಿದ್ಧತೆ ಪರಿಶೀಲನೆ
ಜ.27ರಂದು ಮುಖ್ಯಮಂತ್ರಿಗಳಿಂದ ಧ್ವನಿ-ಬೆಳಕಿಗೆ ಚಾಲನೆ

ಹಂಪಿಟೈಮ್ಸ್ ಹೊಸಪೇಟೆ:
ಹಂಪಿ ಉತ್ಸವ ಆಚರಣೆ ಅಂಗವಾಗಿ ವಿಶೇಷವಾಗಿ ಆಯೋಜಿಸಲಾಗಿರುವ ಧ್ವನಿ ಮತ್ತು ಬೆಳಕು ವಿಶೇಷ ಪ್ರದರ್ಶನವು ಜ.27ರಿಂದ ಫೆ.2ರವರೆಗೆ ನೆರವೇರಲಿದೆ. ಹಂಪಿ ಉತ್ಸವದ ಮೂರು ದಿನಗಳು ಮನೆ ಮನೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಳ್ಳಲಿದೆ ಎಂದು ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರಾದ ಆನಂದ್ ಸಿಂಗ್ ಹೇಳಿದರು.

ಹಂಪಿಯ ಗಜಶಾಲೆ ಆವರಣದಲ್ಲಿ ಪ್ರದರ್ಶಿಸಲಾಗುವ ‘ವಿಜಯನಗರ ವೈಭವ’ ಧ್ವನಿ ಮತ್ತು ಬೆಳಕು ಕಾರ್ಯಕ್ರಮದ ಸಿದ್ಧತೆ ಹಾಗೂ ಕಲಾವಿದರ ತಾಲೀಮನ್ನು ವೀಕ್ಷಿಸಿ ಮಾತನಾಡಿದರು. ಜ.27 ರಂದು  ಗಾಯಿತ್ರಿ ಪೀಠದ ಮುಖ್ಯವೇದಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು  ಹಂಪಿ ಉತ್ಸವ ಉದ್ಘಾಟಿಸಲಿದ್ದಾರೆ.  ವಿಜಯನಗರ ಸಾಮ್ರಾಜ್ಯದ ಗತವೈಭವ ಧ್ವನಿ-ಬೆಳಕು ಮೂಲಕ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ನೆಲೆಗೊಳ್ಳಲಿದೆ.  ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಜಿಲ್ಲಾಡಳಿತ ಹೆಚ್ಚಿನ ಮುತುವರ್ಜಿ ವಹಿಸಿ ಆಯೋಜಿಸಿದ್ದು, ಸಾರ್ವಜನಿಕರು ಪ್ರಶಾಂತ ವಾತಾವರಣದಲ್ಲಿ ವೈಭವವನ್ನು ಕಣ್ತುಂಬಿಕೊಳ್ಳಲಿದ್ದಾರೆ. ಧ್ವನಿ ಮತ್ತು ಬೆಳಕು ಪ್ರದರ್ಶನದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಲಾಗಿದ್ದು, ಈಗಾಗಲೇ ತಾಲೀಮು ಆರಂಭಿಸಿದ್ದಾರೆ ಎಂದರು.

ಜಿಲ್ಲಾಧಿಕಾರಿ ಟಿ.ವೆಂಕಟೇಶ ಮಾತನಾಡಿ, ನಿಗದಿತ ಸಮಯದಲ್ಲಿ ಪ್ರದರ್ಶನಕ್ಕೆ ಅವಶ್ಯವುಳ್ಳ ಎಲ್ಲಾ ಸಿದ್ಧತೆಗೆ ಬೇಕಾದ ಸೌಲಭ್ಯ, ಅನುದಾನ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ರಾಜ್ಯ ಸರ್ಕಾರದಿಂದ ಸಿಕ್ಕಿದೆ. ಧ್ವನಿ ಬೆಳಕು ಹಂಪಿ ಉತ್ಸವದ ಮುಖ್ಯ ಆಕರ್ಷಣೆಯಾಗಲಿದೆ ಎಂದರು.

ಜ.25ಕ್ಕೆ ತುಂಗಾರತಿ ಕಾರ್ಯಕ್ರಮ:  ಜ.25ರಂದು ಸಂಜೆ ಹಂಪಿ ವಿರುಪಾಕ್ಷ ದೇವಸ್ಥಾನದ ಹಿಂಭಾಗದ ನದಿ ತೀರದಲ್ಲಿ ತುಂಗಾರತಿ ನೆರವೇರಲಿದೆ.

ಸಾರಿಗೆ ವ್ಯವಸ್ಥೆ: ಸಂಚಾರ ನಿರ್ವಹಣೆಗಾಗಿ ಏಕಮುಖ ರಸ್ತೆ ನಿರ್ಮಾಣವಾಗಲಿದ್ದು, ಪ್ರದರ್ಶನಕ್ಕೆ ಆಗಮಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಸಾರಿಗೆ ಸಂಸ್ಥೆಯ ಬಸ್‍ಗಳ ಸೇವೆ ಇರಲಿದೆ.

ಈ ಸಂದರ್ಭದಲ್ಲಿ  ಎಸ್ಪಿ ಶ್ರೀಹರಿ ಬಾಬು, ಉಪವಿಭಾಗಾಧಿಕಾರಿ ಹಾಗೂ ಹಂಪಿ ವಿಶ್ವಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಸಿದ್ಧರಾಮೇಶ್ವರ, ಹೊಸಪೇಟೆ ಡಿವೈಎಸ್ಪಿ ವಿಶ್ವನಾಥ್ ರಾವ್ ಕುಲಕರ್ಣಿ, ತಹಶೀಲ್ದಾರ್ ವಿಶ್ವಜೀತ್ ಮೆಹ್ತಾ ಇದ್ದರು.

” ಅದ್ಧೂರಿಯಾಗಿ ಉತ್ಸವವನ್ನು ಕೈಗೊಳ್ಳಲಾಗುತ್ತಿದ್ದು, ವೇದಿಕೆ ಹಾಗೂ ಇನ್ನಿತರ ಸಿದ್ಧತೆಗಳನ್ನು ಪರಿಶೀಲನೆ ಮಾಡಲಾಗಿದೆ. ಮೂರು ದಿನಗಳ ಉತ್ಸವದ ಆರಂಭಕ್ಕೂ ಮುನ್ನ ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ನೂರಾರು ಕಲಾವಿದರ ತಂಡದಿಂದ ವಸಂತ ವೈಭವ ವಿಶೇಷ ಸಾಂಸ್ಕøತಿಕ ಮೆರವಣಿಗೆ ನಡೆಯಲಿದೆ. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ; ಹಂಪಿ ಉತ್ಸವದಲ್ಲಿ ಆಯೋಜಿಸಲಾದ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕಾರ್ಯಕ್ರಮ ನೀಡಲು 12 ಸಾವಿರ ಕಲಾವಿದರಿಂದ ಅರ್ಜಿ ಬಂದಿದ್ದವು, ಅದರಲ್ಲಿ 3 ಸಾವಿರ ಕಲಾವಿದರನ್ನು ಆಯ್ಕೆಮಾಡಲಾಗಿದೆ ಅದರಲ್ಲಿ ಬಹುಪಾಲು ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬಾಲಿವುಡ್‍ನಿಂದ 3-4 ಕಲಾವಿದರು ಆಗಮಿಸಲಿದ್ದಾರೆ”

|| ಆನಂದಸಿಂಗ್, ಪ್ರವಾಸೋಧ್ಯಮ ಸಚಿವರು.

 

 

ಜಾಹೀರಾತು
error: Content is protected !!