February 10, 2025

Hampi times

Kannada News Portal from Vijayanagara

ರಾಷ್ಟ್ರೀಯ ಶಿಲ್ಪಕಲಾ ಶಿಬಿರಕ್ಕೆ ಸಚಿವ ಆನಂದ್ ಸಿಂಗ್ ಚಾಲನೆ

 

https://youtu.be/NHc6OMSu0K4?si=SI_K4goOPEgwo6h2

ಹಂಪಿ ಉತ್ಸವ-2023 ರಾಷ್ಟ್ರೀಯ ಶಿಲ್ಪಕಲಾ ಶಿಬಿರ

ಹಂಪಿಟೈಮ್ಸ್ ಹೊಸಪೇಟೆ :

ಹಂಪಿ ಉತ್ಸವ ಆಚರಣೆ ಅಂಗವಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಪ್ರವಾಸೋದ್ಯಮ ಹಾಗೂ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಶಿಲ್ಪಕಲಾ ಶಿಬಿರವನ್ನು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆನಂದ್ ಸಿಂಗ್  ಬೃಹತ್ ಕಲ್ಲಿಗೆ ಉಳಿಪೆಟ್ಟು ಹಾಕುವ ಮೂಲಕ ಸೋಮವಾರ ಉದ್ಘಾಟಿಸಿದರು.

ವಿಶ್ವವಿಖ್ಯಾತ ಹಂಪಿಯ ವಿರೂಪಾಕ್ಷ ದೇವಸ್ಥಾನದ ರಥಬೀದಿ ಪಕ್ಕದ ಮೈದಾನದಲ್ಲಿ  ಶಿಬಿರ ಆಯೋಜಿಸಲಾಗಿದೆ.  ಜ.26 ರವೆರಗೂ ಶಿಬಿರ ನಡೆಯಲಿದ್ದು ಹೊಸಪೇಟೆ ಸೇರಿದಂತೆ ಕೊಲ್ಕತ್ತಾ, ಬೆಂಗಳೂರು, ಚೆನೈ, ಬರೋಡಾ, ಮಂಡ್ಯ, ಬುಕ್ಕಸಾಗರ, ಬೈಲುವದ್ದಿಗೇರಿ , ಬಿಜಾಪುರ, ಬಾದಾಮಿ ಭಾಗಗಳಿಂದ 20 ಜನ ನುರಿತ ಕಲಾವಿದರು ಶಿಬಿರದಲ್ಲಿ ಭಾಗವಹಿಸಿದ್ದಾರೆ ಎಂದು ಶಿಬಿರದ ಆಯೋಜಕ ಮೋಹನ್‍ರಾವ್ ಪಾಂಚಾಳ್ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಎಸ್ಪಿ ಶ್ರೀಹರಿ ಬಾಬು, ಉಪವಿಭಾಗಾಧಿಕಾರಿ ಹಾಗೂ ಹಂಪಿ ವಿಶ್ವಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಸಿದ್ಧರಾಮೇಶ್ವರ, ಹೊಸಪೇಟೆ ಡಿವೈಎಸ್ಪಿ ವಿಶ್ವನಾಥ್ ರಾವ್ ಕುಲಕರ್ಣಿ, ಹಂಪಿ ಗ್ರಾಮ ಪಂಚಾಯಿತಿ ಸದಸ್ಯರಾದ ಸ್ವಾತಿಸಿಂಗ್ ಇದ್ದರು.

 

 

ಜಾಹೀರಾತು
error: Content is protected !!