December 14, 2024

Hampi times

Kannada News Portal from Vijayanagara

 ಹಂಪಿ ಬೈ ಸ್ಕೈಗೆ ಆನ್ಲೈನ್ ಬುಕ್ಕಿಂಗ್ ಆರಂಭ: ಡಿಸಿ ಟಿ.ವೆಂಕಟೇಶ

 

https://youtu.be/NHc6OMSu0K4?si=SI_K4goOPEgwo6h2

ಹಂಪಿಟೈಮ್ಸ್ ಹೊಸಪೇಟೆ:

ವಿಶ್ವವಿಖ್ಯಾತ ಹಂಪಿ ಉತ್ಸವದ ಅಂಗವಾಗಿ ‘ಹಂಪಿ ಬೈ ಸ್ಕೈ’ ಆರಂಭಿಸಲಾಗುತ್ತಿದ್ದು, ಜ.26 ರಿಂದ ಆಗಸದಲ್ಲಿ ಹಾರಾಟ ಪ್ರಾರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್  ತಿಳಿಸಿದ್ದಾರೆ.

ಹಂಪಿ ಉತ್ಸವದ ಪ್ರಯುಕ್ತ ಆಗಸದಿಂದ 6-7 ನಿಮಿಷಗಳ ಕಾಲ ಹಂಪಿ ಸ್ಮಾರಕಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದ್ದು, ಆನ್‌ಲೈನ್ ಮೂಲಕ ಮುಂಗಡ ಬುಕ್ಕಿಂಗ್ ಆರಂಭವಾಗಿದ್ದು, ಸಾರ್ವಜನಿಕರು ಸೇವೆಯನ್ನು ಪಡೆಯಬಹುದಾಗಿದೆ.

ಜ.26ರಿಂದ 30ರವರೆಗೆ ಹಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಂಪಿ ಬೈ ಸ್ಕೈ ಆಯೋಜಿಸಲು ಚಿಪ್ಸಾನ್ ಸಂಸ್ಥೆ ಮತ್ತು ತುಂಬಿ ಸಂಸ್ಥೆಗೆ ಅನುಮತಿ ನೀಡಿದ್ದು, ಚಿಪ್ಸಾನ್ ಸಂಸ್ಥೆ ಈಗಾಗಲೇ ಆನ್‌ಲೈನ್ ಬುಕ್ಕಿಂಗ್ ಆರಂಭಿಸಿದೆ.
https://www.chipsan.com/events/hampi-by-skyವೆಬ್‌ಸೈಟ್ ಮೂಲಕ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಒಬ್ಬರಿಗೆ ರೂ.3800 ದರ ನಿಗದಿಗೊಳಿಸಲಾಗಿದ್ದು, ಪ್ರತಿದಿನ ಬೆಳಿಗ್ಗೆ 10 ಗಂಟೆ ನಂತರ ಹಾರಾಟ ಆರಂಭವಾಗಲಿದೆ ಎಂದು ತಿಳಿಸಿದರು.

 

 

 

ಜಾಹೀರಾತು
error: Content is protected !!