https://youtu.be/NHc6OMSu0K4?si=SI_K4goOPEgwo6h2
ಒಂಬತ್ತು ತಿಂಗಳಲ್ಲಿ ರೈಲ್ವೆ ಮೇಲ್ಸೇತುವೆ ಪೂರ್ಣ : ಆನಂದಸಿಂಗ್
ಹಂಪಿಟೈಮ್ಸ್ ಹೊಸಪೇಟೆ:
33 ಕೋಟಿ ರೂ ವೆಚ್ಚದಲ್ಲಿ ಅನಂತಶಯನಗುಡಿ ರೈಲ್ವೇ ಗೆಟ್ ಮೇಲ್ಸೇತುವೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಶೇ.50ರಷ್ಟು ಅನುದಾನದೊಂದಿಗೆ 9 ತಿಂಗಳಲ್ಲಿ ಪೂರ್ಣಗೊಳಿಸಲಾಗವುದು ಎಂದು ಪ್ರವಾಸೋದ್ಯಮ ಸಚಿವ ಆನಂದಸಿಂಗ್ ಹೇಳಿದರು.
ನೈರುತ್ಯ ರೈಲ್ವೆ ಲೆವೆಲ್ ಕ್ರಾಸಿಂಗ್ ಅನಂತಶಯನಗುಡಿ ರೈಲ್ವೆ ಗೇಟ್ ಮೇಲ್ಸೇತುವೆ ನಿರ್ಮಾಣ ಕಾರ್ಯ ಸೋಮವಾರ ಉದ್ಘಾಟಿಸಿ ಮಾತನಾಡಿದರು.
ರೈಲ್ವೇ ಗೇಟ್ ತೆರೆದಿದ್ದರೆ ನಾವು ಹೋಗುವ ಕೆಲಸ ಆಗುತ್ತೇ, ಮುಚ್ಚಿದ್ದರೆ ಕೆಲಸ ಆಗಲ್ಲ ಎನ್ನುವ ಮೂಢ ನಂಬಿಕೆಯೂ ಜನರದ್ದಾಗಿತ್ತು.
ದಿನಕ್ಕೆ 75 ಟ್ರೈನ್ ಓಡಾಟವಿರುವುದರಿಂದ ಸುಮಾರು 18 ಗಂಟೆ ಕಾಲ ಗೇಟ್ ಮುಚ್ಚಲಾಗುತ್ತಿದೆ. ಎರಡು ಗೇಟ್ ನಿರ್ಮಿಸಿದರೂ ಟ್ರಾಫಿಕ್ ಸುಧಾರಣೆ ಆಗಿಲ್ಲ. ಜನರು ಸಧಾರಣೆಯೂ ಆಗಿಲ್ಲ. ಜನ ರಸ್ತೆ ನಿಯಮಗಳನ್ನು ಪಾಲಿಸುತ್ತಿಲ್ಲವೆಂದು ಅರಿತು ಮೇಲ್ಸೇತುವೆ ನಿರ್ಮಾಣ ಮಾಡಬೇಕೆಂದು ಫೋರ್ ಲೈನ್ ಡಿಪಿಆರ್ ಮಾಡಿ ಪ್ರಸ್ತಾವನೆಯೂ ಸಲ್ಲಿಸಿದ್ದೆವು.
60 ಕೋಟಿ ರೂ ಯೋಜನೆಗೆ ಕೇಂದ್ರ ಸರ್ಕಾರ 20 ಕೋಟಿ ಮಾತ್ರ ನೀಡಲಾಗುವುದು ಎಂದು ಸ್ಪಷ್ಟವಾಗಿ ತಿಳಿಸಿತು. ಜನರ ಮನೆಯ ಉಳಿಸಲು ಫೋರ್ ಲೈನ್ ಡ್ರಾಪ್ ಮಾಡಿ, ಟು ಲೈನ್ ಗೆ ಬದಲಾದೆವು.
ಚುನಾವಣೆಗೂ ಮುನ್ನ ಮೇಲ್ಸೇತುವೆ ನಿರ್ಮಾಣ ಕ್ಕು ಅಡಿಗಲ್ಲು ಹಾಕಬೇಕೆಂದು ಶಪಥ ಮಾಡಿದ್ದೆ. ಅಂದುಕೊಂಡದ್ದನ್ನ ಮಾಡಿದ್ದೇನೆ. ಅದುವೇ ನನ್ನ ಛಲ.
ಒಂಬತ್ತು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಷರತ್ತು ವಿಧಿಸಲಾಗಿದೆ. ಸಾರ್ವಜನಿಕರ ಸಹಕರಿಸಬೇಕು. ಟ್ರಾಫೀಕ್ ತಡೆಯಲು ಕಮಲಾಪುರದಿಂದ ಅಟಲ್ ಬಿಹಾರ ವಾಜಪೇಯಿ ಜ್ಹೂ ಮಾರ್ಗವಾಗಿ ಪಾಪನಾಯಕನಹಳ್ಳಿ ಮಾರ್ಗವಾಗಿ ಹೊಸಪೇಟೆ ಗೆ ವಾಹನಗಳು ಸಂಚರಿಸಬೇಕು.
30 ಕೋಟಿ ರೂ ವೆಚ್ಚದಲ್ಲಿ ಹೊಸಪೇಟೆ ಟು ಕಡ್ಡಿರಾಂಪುರ ಕ್ರಾಸ್ ವರೆಗೆ ಟು ಲೈನ್ ರಸ್ತೆ ಮಾಡಲಾಗುತ್ತಿದೆ.
10 ಕೋಟಿ ರೂ ವೆಚ್ಚದಲ್ಲಿ ಕಮಲಾಪುರದಲ್ಲಿ ಟೂರಿಸಂ ಪ್ಲಾಜಾ ನಿರ್ಮಿಸಲಾಗುತ್ತದೆ.
ಹಂಪಿಯಲ್ಲಿ ಸ್ನಾನ ಘಟ್ಟ ನಿರ್ಮಾಣಕ್ಕೆ 17 ಕೋಟಿ ರೂ ಮೀಸಲಿಡಲಾಗಿದೆ. ಶೀಘ್ರ ಕೆಲಸ ಪ್ರಾರಂಭವಾಗಲಿದೆ.
ಪಾಪಿನಾಯಕನಹಳ್ಳಿಯ ಭಾಗದ ಕೆರೆಗಳಿಗೆ ನೀರು ಭರ್ತಿ ಕಾರ್ಯ ಶೀಘ್ರ ನೆರವೇರಲಿದೆ.
ಕಮಲಾಪುರದ ರೈತರು ನೀರಿನ ಪೈಪ್ ಹಾಕುವಲ್ಲಿ ನಯಾ ಪೈಸ ಬೇಡದೇ ಭೂಮಿಯನ್ನು ಉಚಿತವಾಗಿ ನೀಡಿದ್ದಾರೆ.
ವಿಜಯನಗರ ಜಿಲ್ಲೆ ಅಭಿವೃದ್ಧಿ ನಕ್ಷೆಯೆ ಬದಲಾಗುತ್ತಿದೆ. ನಾನು ಕಾನೂನು ಪಾಲನೆ ಮಾಡುತ್ತೇನೆ. ಜನರಿಗಾಗಿ ಅಂತ ಬಂದಾಗ ಕಾನೂನು ದಾಟಿಯೂ ಕೆಲಸ ಮಾಡುತ್ತೇನೆ ಎಂದರು.
ನಗರಸಭೆ ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಎಲ್.ಎಸ್.ಆನಂದ, ಸ್ಥಾಯಿಸಮಿತಿ ಅಧ್ಯಕ್ಷ ತಾರಿಹಳ್ಳಿ ಜಂಬುನಾಥ, ಹುಡಾ ಅಧ್ಯಕ್ಷ ಅಶೋಕ ಜೀರೆ, ಹಿರಿಯ ಮುಖಂಡರಾದ ಬಾಬಲಾಲ್ ಜೈನ್, ರೈಲ್ವೆ ಇಲಾಖೆಯ ಅಧಿಕಾರಿಗಳು ಇದ್ದರು.
More Stories
ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ
ಪ್ಯಾನೆಲ್ ವಕೀಲರ ನೇಮಕಾತಿಗಾಗಿ ಅರ್ಜಿ ಆಹ್ವಾನ
ಗುಡೇಕೋಟೆ ನಾಗರಾಜ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ