December 5, 2024

Hampi times

Kannada News Portal from Vijayanagara

ಹಂಪಿಯಲ್ಲಿ ಮಕರ ಸಂಕ್ರಮಣ ಪುಣ್ಯಸ್ನಾನ

 

https://youtu.be/NHc6OMSu0K4?si=SI_K4goOPEgwo6h2

ಎಳ್ಳು ಬೆಲ್ಲ ತಿಂದು  ಒಳ್ಳೋಳ್ಳೆ ಮಾತನಾಡಿ…

ಹಂಪಿಟೈಮ್ಸ್ ಹೊಸಪೇಟೆ:
ಹಂಪಿ ಶ್ರೀ ವಿರೂಪಾಕ್ಷೇಶ್ವರಸ್ವಾಮಿ ಭಕ್ತರು ಭಾನುವಾರ ತುಂಗಭದ್ರಾ ನದಿಯಲ್ಲಿ ಮಿಂದೆದ್ದು, ಹೊಸ ವಸ್ತçಗಳನ್ನು ಧರಿಸಿ ಸ್ವಾಮಿಗೆ ಹಣ್ಣುಕಾಯಿ ಸಮರ್ಪಿಸಿ, ದರ್ಶನ ಪಡೆದು ಮಕರ ಸಂಕ್ರಮಣ ಹಬ್ಬವನ್ನು ಕುಟುಂಬದ ಸದಸ್ಯರೊಂದಿಗೆ ಆಚರಿಸಿದರು.

ಮಕರಸಂಕ್ರಮದ ಉತ್ತರಾಯಣ ಆರಂಭದ ಸೂರ್ಯೋದಯವನ್ನು ಪುಣ್ಯಕ್ಷೇತ್ರದಲ್ಲಿಯೇ ವೀಕ್ಷಿಸಲು ಅನೇಕ ಭಕ್ತರು ಶನಿವಾರ ರಾತ್ರಿಯೇ ಹಂಪಿಯಲ್ಲಿ ತಂಗಿದ್ದರು. ಭಾನುವಾರ ಬೆಳಿಗ್ಗೆ ಸೂರ್ಯೋದಯ ವೀಕ್ಷಿಸಿ, ಸಂಪ್ರದಾಯದAತೆ ದೇಹಕ್ಕೆ ತೈಲ ಹಚ್ಚಿಕೊಂಡು ನದಿಯಲ್ಲಿ ಸ್ನಾನಮಾಡಿ, ಸೂರ್ಯನಿಗೆ ಜಲ ಸಮರ್ಪಣೆ ಮಾಡಿದರು.

ವಿಜಯನಗರ, ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆ ಸೇರಿದಂತೆ ನಾಡಿನ ವಿವಿಧೆಡೆಗಳಿಂದ ಮತ್ತು ನೆರೆ ರಾಜ್ಯ ಆಂಧ್ರಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿನಿಂದಲೂ ಪ್ರವಾಸಿಗರು ಆಗಮಿಸಿದ್ದರು. ಶ್ರೀ ವಿರೂಪಾಕ್ಷೇಶ್ವರಸ್ವಾಮಿ ದರ್ಶನ ಪಡೆದ ಭಕ್ತರು, ಪ್ರವಾಸಿಗರು ಹಂಪಿಯ ಐತಿಹಾಸಿಕ ಸ್ಮಾರಕಗಳನ್ನು ಕಣ್ತುಂಬಿಕೊAಡರು. ರಾಣಿಸ್ನಾನಗೃಹ, ಪುರಂದರದಾಸರ ಮಂಟಪ, ನದಿ ದಡದಲ್ಲಿ ಮಕರ ಸಂಕ್ರಮಣದ ಹಬ್ಬದಡುಗೆಯನ್ನು ಸವಿದರು. ಎಳ್ಳು ಬೆಲ್ಲವನ್ನು ಪರಸ್ಪರ ಹಂಚಿ ಶುಭಕೋರಿದರು. ಸಂಜೆ ಮೂಲ ವಿರೂಪಾಕ್ಷೇಶ್ವರ ದೇವಸ್ಥಾನ ಜಮಾವಣೆಗೊಂಡ ಪ್ರವಾಸಿಗರು ಸೂರ್ಯಾಸ್ತವನ್ನು ವೀಕ್ಷಿಸಿ, ಸೆಲ್ಫಿಯೊಂದಿಗೆ ಸಂಭ್ರಮಿಸಿ ಮರಳಿದರು.

 

 

 

ಜಾಹೀರಾತು
error: Content is protected !!