December 5, 2024

Hampi times

Kannada News Portal from Vijayanagara

ಮಕ್ಕಳಲ್ಲಿ ಮೌಲ್ಯ ಬೆಳೆಸುವುದು ಎಲ್ಲರ ಜವಾಬ್ದಾರಿ : ಬಿಇಒ ಚನ್ನಬಸಪ್ಪ

 

https://youtu.be/NHc6OMSu0K4?si=SI_K4goOPEgwo6h2

ಹಂಪಿಟೈಮ್ಸ್ ಹೊಸಪೇಟೆ:
ಮಕ್ಕಳಲ್ಲಿ ರಾಷ್ಟ್ರಧ್ವಜ, ರಾಷ್ಟ್ರಗೀತೆ, ದೇಶ ಪ್ರೇಮ, ಶ್ರದ್ಧೆ ಸೇರಿದಂತೆ ರಾಷ್ಟ್ರೀಯ ಸಂಕೇತಗಳು ಹಾಗೂ ನಾಡಿನ ಸಂಸ್ಕೃತಿಯ ಮೌಲ್ಯಗಳನ್ನು ಬೆಳೆಸುವುದು ಪ್ರತಿಯೊಬ್ಬರ ಜವಾಬ್ಧಾರಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಚನ್ನಬಸಪ್ಪ ಹೇಳಿದರು.

ನಗರದ ಶ್ರೀ ಕೊಟ್ಟೂರುಸ್ವಾಮಿ ಮಠದಲ್ಲಿ ಭಾರತ್ ಸೇವಾದಳ ಜಿಲ್ಲಾ ಸಮಿತಿ ವಿಜಯನಗರ/ಬಳ್ಳಾರಿ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವಿಜಯನಗರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಉಪನ್ಯಾಸಕರುಗಳ ಸಹಾಯಕ ಶಿಕ್ಷಣ ತರಬೇತಿ ಶಿಬಿರದದಲ್ಲಿ ಶನಿವಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.


ಭಾರತಾಂಬೆ ಭಾರತೀಯರೆಲ್ಲರ ಜನ್ಮದಾತೆ ಎಂಬ ಭಾವನೆ ಮಕ್ಕಳಲ್ಲಿ ಬೆಳೆಸಬೇಕು. ಪಠ್ಯದಲ್ಲಿರುವ ರಾಷ್ಟ್ರೀಯ ಅಂಶಗಳನ್ನು ಬೋಧನೆಯ ಮೂಲಕ ಹೆಚ್ಚು ರಂಜನೀಯವಾಗಿ ಆಸಕ್ತಿದಾಯಕವಾಗಿ ಮಕ್ಕಳಲ್ಲಿ ತುಂಬಬೇಕು. ಐದು ದಿನಗಳ ಸೇವಾದಳದ ಶಿಬಿರದಲ್ಲಿ ತರಬೇತಿ ಪಡೆದ ವಿಜಯನಗರ ಜಿಲ್ಲೆಯ ಶಿಕ್ಷಕರು ಜಿಲ್ಲೆಯ ಎಲ್ಲಾ ಮಕ್ಕಳಿಗೂ ಸೇವಾದಳದ ಮಹತ್ವ ಹಾಗೂ ರಾಷ್ಟ್ರೀಯ ಭಕ್ತಿ ಬೆಳೆಸಬೇಕು ಎಂದರು.
ಭಾರತ್ ಸೇವಾ ದಳ ತಾಲೂಕ ಘಟಕದ ಅಧ್ಯಕ್ಷ ಸಾಲಿಸಿದ್ದಯ್ಯಸ್ವಾಮಿ, ಸೇವಾದಳದ ಮುಖ್ಯಸ್ಥರಾದ ಗಣೇಶ, ಪಾಂಡುರಂಗ ಇತರರು ಇದ್ದರು.

 

 

ಜಾಹೀರಾತು
error: Content is protected !!