https://youtu.be/NHc6OMSu0K4?si=SI_K4goOPEgwo6h2
ವಿಜಯನಗರ ಜಿಲ್ಲಾ ಸರ್ಕಾರಿ ನೌಕರರ ಉತ್ತಮ ಸ್ಪಂದನೆ
ಹಂಪಿಟೈಮ್ಸ್ ಹೊಸಪೇಟೆ:
ದೇಶದ ಸಂಸ್ಕೃತಿ ಮತ್ತು ಸಂಪತ್ತಿನ ಪ್ರತೀಕ ಗೋವುಗಳ ರಕ್ಷಣೆಗೆ ಕರ್ನಾಟಕ ಸರ್ಕಾರ ಆತಂಭಿಸಿರುವ ಪುಣ್ಯಕೋಟಿ ದತ್ತು ಯೋಜನೆಗೆ
ವಿಜಯನಗರ ಜಿಲ್ಲೆಯ ಎಲ್ಲಾ ಇಲಾಖೆಯ ನೌಕರರಿಂದ 54,82,400 ರೂಗಳನ್ನು ದೇಣಿಗೆ ನೀಡಿರುತ್ತಾರೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ವಿಜಯನಗರ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನಗೌಡ, ಕಾರ್ಯದರ್ಶಿ ಕಡ್ಲಿ ವೀರಭದ್ರೇಶ ತಿಳಿಸಿದ್ದಾರೆ.
ಗೋವುಗಳನ್ನು ದತ್ತು ಪಡೆದು ಅವುಗಳ ನಿರ್ವಹಣಾ ವೆಚ್ಚಕ್ಕೆ ಸಾರ್ವಜನಿಕರು, ಸರ್ಕಾರಿ ನೌಕರರು, ಉದ್ಯಮಿಗಳು, ಮತ್ತು ಸಮಾಜದ ಎಲ್ಲರೂ ಸಹಕರಿಸುವಂತೆ ನಾಡಿನ ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕ್ರಿಯಾಶೀಲ ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಾಕ್ಷರಿಯವರು ರಾಜ್ಯ ಸರ್ಕಾರಿ ನೌಕರರು ದೇಣಿಗೆ ನೀಡುವುದಾಗಿ ಘೋಷಣೆ ಮಾಡಿದ್ದರು.
ರಾಜ್ಯ ಅಧ್ಯಕ್ಷರ ಘೋಷಣೆ ಸಾಕಾರಗೊಳಿಸಲು, ಪುಣ್ಯಕೋಟಿ ದತ್ತು ಯೋಜನೆಗೆ ವೇತನದಲ್ಲಿ ಕೊಡುಗೆ ನೀಡುವಂತೆ ಮಾಡಿದ ಮನವಿಗೆ ಸ್ಪಂದಿಸಿದ್ದಾರೆ.
ದೇಣಿಗೆ ವಿವರ: ಹೊಸಪೇಟೆ ತಾಲೂಕಿನಂದ 19,03,800/-, ಹಗರಿಬೊಮ್ಮನಹಳ್ಳಿ ತಾಲೂಕಿನಿಂದ 7,57,400/-, ಹರಪನಹಳ್ಳಿ ತಾಲೂಕಿನಿಂದ 9,59,200/-, ಕೂಡ್ಲಿಗಿ ತಾಲೂಕಿನಿಂದ 9,39,000/-, ಕೊಟ್ಟೂರು ತಾಲೂಕಿನಿಂದ 1,98,600/- ಹಾಗೂ ಹೂವಿನಹಡಗಲಿ ತಾಲೂಕಿನಿಂದ 7,24,400/- ಸೇರಿದಂತೆ ಒಟ್ಟು 54,82,400 ದೇಣಿಗೆ ಸಂಗ್ರಹವಾಗಿದೆ. ದೇಣಿಗೆ ನೀಡಿದ ವಿಜಯನಗರ ಜಿಲ್ಲೆಯ ಸರ್ಕಾರಿ ನೌಕರರಿಗೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನಗೌಡ, ಕಾರ್ಯದರ್ಶಿ ಕಡ್ಲಿ ವೀರಭದ್ರೇಶ ಧನ್ಯವಾದ ತಿಳಿಸಿದ್ದಾರೆ.
More Stories
ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ
ಪ್ಯಾನೆಲ್ ವಕೀಲರ ನೇಮಕಾತಿಗಾಗಿ ಅರ್ಜಿ ಆಹ್ವಾನ
ಗುಡೇಕೋಟೆ ನಾಗರಾಜ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ