https://youtu.be/NHc6OMSu0K4?si=SI_K4goOPEgwo6h2
ಹಂಪಿಟೈಮ್ಸ್ ಹೊಸಪೇಟೆ:
ಹಗರಿಬೊಮ್ಮನಹಳ್ಳಿಯಲ್ಲಿ ಶಾಸಕ ಭೀಮಾನಾಯ್ಕ ಅವರನ್ನು ಮುಂಬರುವ ಚುನಾವಣೆಯಲ್ಲಿ ಮತ್ತೊಮ್ಮೆ ಆಶೀರ್ವದಿಸಿ ಎಂದು ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿರುವುದರಲ್ಲಿ ತಪ್ಪೇನಿದೆ? ಎಂದೇಳುವ ಮೂಲಕ ಮಾಜಿ ಗೃಹಮಂತ್ರಿ ಜಿ.ಪರಮೇಶ್ವರ ಶಾಸಕ ಭೀಮಾನಾಯ್ಕಗೆ ಪರೋಕ್ಷವಾಗಿ ಟಿಕೇಟ್ ಖಚಿತಪಡಿಸಿದರು.!
ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದರು. ರಾಜ್ಯದಲ್ಲಿ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯನವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಸಿಎಂ ಆಗಬೇಕೆಂಬುದು ಅವರವರ ಅಭಿಮಾನಿಗಳ ಆಸೆಯಾಗಿದೆ. ಇಂದು ಹೊಸಪೇಟೆಯಲ್ಲಿ ನನಗೆ ಮಾಲಾರ್ಪಣೆ ಮಾಡಿದ ಅಭಿಮಾನಿಗಳು ಜಿ.ಪರಮೇಶ್ವರ ಸಿಎಂ ಆಗಬೇಕೆಂದು ಹೇಳಿರುವುದು ನನ್ನ ಅಭಿಮಾನಿಗಳ ಆಸೆ. ಯಾರು ಸಿಎಂ ಆಗಬೇಕೆಂಬುದು ಪಕ್ಷದದಲ್ಲಿನ ಸಿದ್ದಾಂತದ ಮೇಲೆ ನಿಂತಿದೆ. ಅಭಿಮಾನಿಗಳು ಆಸೆ ಪಡುವುದು ತಪ್ಪಲ್ಲ. ಯಾವುದೇ ಕ್ಷೇತ್ರದಲ್ಲಿ ಪ್ರಚಾರಕ್ಕೆ, ಸಭೆ ಸಮಾರಂಭಕ್ಕೆ ಹಿರಿಯ ನಾಯಕರು ತೆರಳಿದಾಗ ಅಲ್ಲಿಯ ಹಾಲಿ ಶಾಸಕರನ್ನು ಮತ್ತೊಮ್ಮೆ ಗೆಲ್ಲಿಸಿ ಎಂದೇಳದೇ ಬೇರೇನು ಹೇಳಲಾಗದು ಎನ್ನುತ್ತಾ ಭೀಮಾನಾಯ್ಕರನ್ನು ಗೆಲ್ಲಿಸಿ ಎಂಬ ಸಿದ್ದರಾಮಯ್ಯನವರ ಘೋಷಣೆಗಳನ್ನು ಸಮರ್ಥಿಸಿಕೊಂಡರು.
ರಾಜ್ಯದಲ್ಲಿ ಅನೇಕ ಸಮಸ್ಯೆಗಳಿವೆ. ಲಂಚಾವತಾರ ತಾಂಡವವಾಡುತ್ತಿದೆ. ಜನವಿರೋಧಿ ಕಾರ್ಯಗಳು ನಡೆದಿವೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿವೆ, ಆಡಳಿವ ವ್ಯವಸ್ಥೆ ಕುಸಿದೋಗಿದೆ. ವಿಧಾನಸೌಧದಲ್ಲಿ ಅಧಿಕಾರಿಗಳೇ ಕೆಲಸ ಮಾಡುತ್ತಿಲ್ಲ. ಚುನಾವಣೆ ಮಾರ್ಚ್ ಏಪ್ರಿಲ್ ನಲ್ಲಿ ನಡೆಯಲಿವೆ. ಆದರೆ ಅಧಿಕಾರಿಗಳು ತಮ್ಮ ಕಚೇರಿಗೆ ಬೀಗ ಹಾಕಿಕೊಂಡಿದ್ದಾರೆ. ಅಭಿವೃದ್ಧಿ ಯೋಜನೆಗಳ ಫೈಲ್ ಗಳು ಮೂಲೆಗುಂಪಾಗಿವೆ. 6500 ಕೋಟಿ ರೂ ಪಿಡಬ್ಲಯೂಡಿ ಬಿಲ್ ಬಾಕಿ ಇವೆ. ಸಾಲು ಸಾಲು ಸಮಸ್ಯೆಗಳ ಸುಳಿಯಲ್ಲಿ ಜನ ಸಿಲುಕಿದ್ದಾರೆ. ಉತ್ತಮ ಸರ್ಕಾರಕ್ಕಾಗಿ ಕಾಂಗ್ರೆಸ್ ಗೆ ಜನರು ಆಶೀರ್ವಾದ ಮಾಡಬೇಕು
ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇರುವುದರಿಂದ ಆಕಾಂಕ್ಷಿಗಳ ಪಟ್ಟಿ ಹೆಚ್ಚುತ್ತಿದೆ. ಟಿಕೇಟ್ ಸಿಗದಿದ್ದರೆ ಪಕ್ಷೇತರವಾಗಿ ಸ್ಪರ್ಧಿಸುತ್ತೇನೆ ಎನ್ನುವುದು ಸಹಜ. ಕಾಂಗ್ರೆಸ್ ಪಕ್ಷ ರೂಪಿಸಿರುವ ಮಾನದಂಡಗಳ ಆಧಾರದ ಮೇಲೆ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಜನವರಿ 8 ರಂದು ಆಯೋಜಿಸಿರುವ ಎಸ್ಸಿ ಎಸ್ಟಿ ಸಮಾವೇಶಕ್ಕೆ ಪ್ರತಿ ಜಿಲ್ಲೆಯಲ್ಲಿ ಸಭೆ ನಡೆಸಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳಬೇಕೆಂದು ಅಹ್ವಾನಿಸಲಾಗುತ್ತಿದೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಿರಾಜ್ ಶೇಕ್, ಶಾಸಕರಾದ ಭೀಮನಾಯ್ಕ, ಪಿ.ಟಿ.ಪರಮೇಶ್ವರನಾಯ್ಕ, ಸೇರಿದಂತೆ ಮುಖಂಡರು ಇದ್ದರು.
More Stories
ಸಂಡೂರು ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣ ಗೆಲುವು, ಯಾರಿಗೆ ಎಷ್ಟು ಮತ?
ನಾಡಿನ ಕಲೆ, ಸಂಸ್ಕೃತಿ ವಿಶ್ವಮಾನ್ಯವಾಗಿದೆ : ಕಾಂಗ್ರೆಸ್ ಯುವನಾಯಕ ಅಶೋಕ್ ಭೀಮನಾಯ್ಕ ಅಭಿಮತ
ಭಾರತೀಯ ಅಂಚೆ ಇಲಾಖೆಯಿಂದ ರಾಷ್ಟ್ರ ಮಟ್ಟದ ಪತ್ರಲೇಖನ ಸ್ಪರ್ಧೆ : ಅಂಚೆ ಅಧೀಕ್ಷಕರು ಪಿ.ಚಿದಾನಂದ ಹೇಳಿಕೆ