https://youtu.be/NHc6OMSu0K4?si=SI_K4goOPEgwo6h2
ವಿಧಾನಸೌಧದ ಗೋಡೆಗಳು ಪಿಸುಗುಟ್ಟುತ್ತಿವೆ ಲಂಚಾ ಲಂಚಾ..: ಸಿದ್ದರಾಮಯ್ಯ
ರಾಜ್ಯವನ್ನು ಸಾಲದ ಸುಳಿಗೆ ಸಿಲಿಕಿಸಿದೆ ಬಿಜೆಪಿ|
ಬಿಜೆಪಿ ಕಿತ್ಹಾಕಿ, ಕಾಂಗ್ರೆಸ್ ಗೆ ಆಶೀರ್ವದಿಸಿಭೀ |ಭೀಮಾನಾಯ್ಕಗೆ ಪರೋಕ್ಷವಾಗಿ ಟಿಕೇಟ್ ಘೋಷಣೆ
ಹಂಪಿ ಟೈಮ್ಸ್ ಹಗರಿಬೊಮ್ಮನಹಳ್ಳಿ :
ಬಿಜೆಪಿ ಮಹಾ ಸುಳ್ಳಿನ ಸರ್ಕಾರ, ಪ್ರಣಾಳಿಕೆಯಲ್ಲಿನ ಶೇ.10 ರಷ್ಟು ಬನರವಸೆಗಳನ್ನ ಈಡೇರಿಸಿಲ್ಲ. ಏಳು ದಶಕದಲ್ಲಿ ಕಾಂಗ್ರೆಸ್ ಸರ್ಕಾರ 2.5 ಲಕ್ಷ ಕೋಟಿ ಸಾಲ ಮಾಡಿದರೆ, ಬಿಜೆಪಿ ಕೇವಲ ಮೂರೂವರೆ ವರ್ಷದಲ್ಲಿ 3 ಲಕ್ಷ ಕೋಟಿಗೂ ಅಧಿಕ ಸಾಲ ಮಾಡಿದೆ. ಹೀಗಾದರೆ ರಾಜ್ಯ ಉಳಿದೀತೆ ಎಂದು ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಡಳಿತ ಪಕ್ಷದ ವಿರುದ್ದ ಕಿಡಿಕಾರಿದರು.
ನಗರದ ಜಿ.ಬಿ.ಪಿ.ಸಿ ಕಾಲೇಜ್ ಮೈದಾನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಮಾಲವಿ ಜಲಾಶಯ ವಿಜಯೋತ್ಸವ-ಸಾರ್ಥಕ ನಮನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕಾಂಗ್ರೆಸ್ ಸರ್ಕಾರ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದೆ. ಭರವಸೆ ನೀಡದೇ ಅನೇಗ ಭಾಗ್ಯಗಳನ್ನು ಜಾರಿಗೊಳಿಸಿದೆ.
ಬಿಜೆಪಿ ಕೊಟ್ಟ ಭರವಸೆಗಳಲ್ಲಿ ಶೇ.10 ಈಡೇರಿಸಿಲ್ಲ. ಕಾಂಗ್ರೆಸ್ ನ ಜನಪರ ಭಾಗ್ಯಗಳನ್ನು ರದ್ದುಗೊಳಿಸಿದೆ. ತಾಕತದತಿದ್ದರೆ ಸಿಎಂ ಬಸವರಾಜ ಬೊಮ್ಮಾಯಿ ಬಹಿರಂಗ ವೇದಿಕೆಗೆ ಬಂದು ಸುಳ್ಳೊ ಸತ್ಯ ಎಂಬುದನ್ನು ಸಾಬೀತುಪಡಿಸಲಿ ನಾನು ಸಿದ್ಧನಿದ್ದೇನೆ ಎಂದು ಸವಾಲೆಸೆದರು.
ಹ.ಬೊ.ಹಳ್ಳಿಯಲ್ಲಿ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರದಲ್ಲಿ 2000 ಕೋಟಿ ರೂ ಅನುದಾನ ನೀಡಲಾಗಿದೆ. ಬಿಜೆಪಿ ಸರ್ಕಾರದಲ್ಲಿ ಬಡವರಿಗೆಒಂದು ಸೂರು ಕೊಟ್ಟಿಲ್ಲ. ಭೀಮನಾಯ್ಕ ಜೆಡಿಎಸ್ ನಲ್ಲಿದ್ದರೂ ಪಕ್ಷಪಾತವಿಲ್ಲದೆ 150 ಕೋಟಿ ರೂ ಅನುದಾನ ನೀರಾವರಿಗಾಗಿ ನೀಡಲಾಗಿದೆ. ಮುಂದಿನ ಚುನಾವಣೆಯಲ್ಲಿ ಭೀಮಾನಾಯ್ಕಗೆ ಜನರು ಆಶೀರ್ವಾದ ಮಾಡಬೇಕೆಂದು ಕೋರುವ ಮೂಲಕ ಕೈ ಟಿಕೇಟ್ ಖಚಿತ ಎಂಬುದನ್ನು ಪರೋಕ್ಷವಾಗಿ ಘೋಷಿಸಿದರು.
ಸಿಎಂ ಬಸವರಾಜ ಬೊಮ್ಮಾಯಿ ಪ್ರಧಾನಿ ಮೋದಿ ಮುಂದೆ ನಾಯಿ ಮರಿ ತರ ಇರ್ತೀರಿ, ಮೋದೊ ಕಂಡರೆ ಗಡಗಡ ಅಂತೀರಿ ಎಂದು ವಾಗ್ದಾಳಿ ನಡೆಸಿದರು. ಕೇಂದ್ರ ಸರ್ಕಾರದ ಅನುದಾನ ತರುವಲ್ಲಿ ವಿಫಲವಾಗಿದ್ದಾರೆ. ನಿರ್ಮಲ ಸೀತರಾಮನ್ ವಿಶೇಷ ಅನುದಾನ ಕೊಡಲು ಸಾಧ್ಯವಿಲ್ಲ ಎಂದು ಪತ್ರ ಬರೆದಿದ್ದಾರೆ. ಅನುದಾನ ತರುವ ದಮ್ಮು, ತಾಕತ್ ಸಿಎಂಗೆ ಇಲ್ಲವಾಗಿದೆ ಎಂದು ಹರಿಹಾಯ್ದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದೇ ಬರುತ್ತೆ, ಈ ಭಾಗದ 40 ಕೆರೆಗಳು ಸೇರಿದಂತೆ ರಾಜ್ಯದ ಎಲ್ಲಾ ಕೆರೆಗಳ ನೀರು ಭರ್ತಿಗೆ ಅನುದಾನ ಬಿಡುಗಡೆ ದಗಿಸಲಾಗುವುದು ಎಂದರು.
ಬಿಜೆಪಿ ಅವಧಿಯಲ್ಲಿ ವಿಧಾನಸೌಧದ ಗೋಡೆಗಳು ಲಂಚ ಲಂಚ ಎಂದು ಪಿಸುಗುಡುತ್ತವೆ. 40 ಪರ್ಸೆಂಟ್ ಸರ್ಕಾರದಲ್ಲಿ ಲಂಚ ಕೊಟ್ಟವರು ಸಾವನ್ನಪುತ್ತಿದ್ದಾರೆ. ಇಂತಹ ಸರ್ಕಾರ ಬೇಕೆ? ಬಿಜೆಪಿಯನ್ನು ತೊಲಗಿಸಿ ಕಾಂಗ್ರೆಸ್ ಗೆ ಆಶೀರ್ವಾದ ಮಾಡಿ ಎಂದು ಕೋರಿದರು.
ಶಾಸಕ ಭೀಮನಾಯ್ಕ ಮಾತನಾಡಿ, ಅಂದಿನ ಮುಖ್ಯಮಂತ್ರಿ, ಈಗಿನ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಹಗರಿಬೊಮ್ಮನಹಳ್ಳಿ ಮಾಲವಿ ಜಲಾಶಯಕ್ಕೆ ಶಾಶ್ವತ ನೀರು ತುಂಬಿಸಲು 150 ಕೋಟಿ ರೂ ಯೋಜನೆಗೆ ಅನುದಾನ ಬಿಡುಗಡೆ ಮಾಡಿ, ಈ ಭಾಗದ ರೈತರ ಕಣ್ಣೀರು ಒರಿಸುವ ಕಾರ್ಯ ಮಾಡಿದ್ದಾರೆ.
ದಲಿತ, ಶೋಷಿತ, ಹಿಂದುಳಿದ ನಾಯಕರಾಗಿರುವ ಸಿದ್ದರಾಮಯ್ಯನವರು ಅನೇಕ ಜನಪರ ಭಾಗ್ಯಗಳನ್ನು ನೀಡಿ ಜನನಾಯಕರಾಗಿದ್ದಾರೆ. ಮಾಲವಿ ಜಲಾಶಯ ಅಭಿವೃದ್ಧಿಗೆ ಅನೇಕರು ಹುಸಿ ಭರವಸೆಗಳನ್ನು ನೀಡುತ್ತಾ ಬಂದಿದ್ದರು. ಆದ್ರೆ ಸಿದ್ದರಾಮಯ್ಯನವರು ಸ್ಥಳಕ್ಕೆ ಬಂದು ನೋಡದೇ ನೀರಾವರಿಗೆ ಅನುದಾನ ಬಿಡುಗಡೆ ಮಾಡಿ ರೈತಪರ ಕಾಳಜಿ ಮೆರೆದಿದ್ದಾರೆ.
ಹ.ಬೊ.ಹಳ್ಳಿ ಕ್ಷೇತ್ರದ ಅಭಿವೃದ್ಧಿಗೆ 2000 ಕೋಟಿ ಅನುದಾನ ನೀಡಿದ್ದಾರೆ. ಕಾಂಗ್ರೆಸ್ ಅಧಿಕಾಕ್ಕೆ ಮತ್ತೆ ಬರುತ್ತೆ. ಸಿದ್ದರಾಮಯ್ಯನವರು ಮತ್ತೆ ಸಿಎಂ ಆಗಲಿದ್ದಾರೆ ಎಂದರು.
ಮಾಜಿ ಸಚಿವರಾದ ಸಂತೋಷ್‌ಲಾಡ್, ಜಮೀರ್ ಅಹ್ಮದ್, ಶಾಸಕ ಅಮರೇಗೌಡ ಬಯ್ಯಾಪುರ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಮಾಜಿ ಶಾಸಕ ಶಿರಾಜ್ ಶೇಕ್ ಮಾತನಾಡಿದರು.
ಶಾಸಕರಾದ ರುದ್ರಪ್ಪ ಲಮಾಣಿ, ಈ.ತುಕಾರಾಂ, ರಾಘವೇಂದ್ರ ಹಿಟ್ನಾಳ್, ಬೈರತಿ ಸುರೇಶ್, ಮಾಜಿ ವಿಧಾನಪರಿಷತ್ ಸದಸ್ಯ ಕೆ.ಎಸ್.ಎಲ್‌ಸ್ವಾಮಿ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶಿವಯೋಗಿ, ಮುಖಂಡರಾದ ಗೋಣಿ ಬಸಪ್ಪ, ಧಾರುಕೇಶ, ಕುರಿ ಶಿವಮೂರ್ತಿ, ಮುರಳಿಕೃಷ್ಣ, ಪತ್ರೇಶ್ ಹಿರೇಮಠ, ಕೆ.ಎಂ.ಹಾಲಪ್ಪ, ಅಕ್ಕಿ ತೊಟೇಶ, ಭೀಮಜ್ಜ ಸೇರಿದಂತೆ ಕಾಂಗ್ರೆಸ್ ವಿವಿಧ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
More Stories
ಕಳಚಿ ಬಿತ್ತು ರಾಷ್ಟ್ರಧ್ವಜ, ಈಬಾರಿ ಬಜೆಟ್ನಲ್ಲಿ ವಿಜಯನಗರ ಜಿಲ್ಲೆಗೆ ಮೆಡಿಕಲ್ ಕಾಲೇಜ್ : ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಭರವಸೆ
ತ್ರಿವಿಧ ದಾಸೋಹದ ದಕ್ಷಿಣ ಭಾರತದ ಕುಂಭಮೇಳ… ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ರಥೋತ್ಸವ