December 14, 2024

Hampi times

Kannada News Portal from Vijayanagara

ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಜನವರಿಯಲ್ಲಿ ಬಿಡುಗಡೆಗೆ ಚಿಂತನೆ : ಸಿದ್ದರಾಮಯ್ಯ

 

https://youtu.be/NHc6OMSu0K4?si=SI_K4goOPEgwo6h2

ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಜನವರಿಯಲ್ಲಿ ಬಿಡುಗಡೆಗೆ ಚಿಂತನೆ : ಸಿದ್ದರಾಮಯ್ಯ

ಹಂಪಿಟೈಮ್ಸ್ ಹಗರಿಬೊಮ್ಮನಹಳ್ಳಿ :

ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ, ಶಕ್ತಿ ಹೆಚ್ಚಿರುವುದರಿಂದ ಅಕಾಂಕ್ಷಿಗಳು ಹೆಚ್ಚಿದ್ದಾರೆ. ಜನವರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೆ ಚಿಂತನೆ ಮಾಡಲಾಗುತ್ತಿದೆ  ಎಂದು  ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಹಗರಿಬೊಮ್ಮನಹಳ್ಳಿಯಲ್ಲಿ ಶಾಸಕ ಭೀಮಾನಾಯ್ಕ ಮಂಗಳವಾರ ಆಯೋಜಿಸಿದ್ದ ಸಾರ್ಥಕ ನಮನ ಸಮಾರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು. ಯಾರು ಏನೆ ಪಕ್ಷ ಕಟ್ಟಲಿ, ಬಿಜೆಪಿ, ಜೆಡಿಎಸ್ ನವರು ಏನೆ ಹೇಳಿಕೊಳ್ಳಲಿ ಕಾಂಗ್ರೆಸ್ ತನ್ನ ಶಕ್ತಿಯಿಂದ ಈಬಾರಿ ಗೆದ್ದೇ ಗೆಲ್ಲುತ್ತದೆ.

ದೇವರಾಜ ಅರಸ್, ಬಂಗಾರಪ್ಪ ಕಾಲದಿಂದಲೂ ಅನೇಕರು ಪಾರ್ಟಿ ಕಟ್ಡಿದ್ದಾರೆ.  ಯಡಿಯೂರಪ್ಪ, ಶ್ರೀರಾಮಯಲು ಸೇರಿದಂತೆ ಅನೇಕರು ಲೋಕಲ್ ಪಾರ್ಟಿ ಕಟ್ಟಿದ್ದರು. ಏನಾಗಿದೆ? ಪ್ರಜಾಪ್ರಭುತ್ವದಲ್ಲಿ  ಜನರ ತೀರ್ಮಾನವೇ ಅಂತಿಮವಾಗಿದೆ. ಹಾಗಂತ ಹೊಸ ಪಾರ್ಟಿ ಕಟ್ಡಿದವರ ಬಗ್ಗೆ ನಾನು ಲಘುವಾಗಿ ಮಾತನಾಡಲ್ಲ ಎಂದರು.

ಶಾಸಕರಾದ ಭೀಮಾನಾಯ್ಕ, ಜಿ.ಎನ್.ಗಣೇಶ, ಮಾಜಿ ಸಚಿವರಾದ ಸಂತೋಷಲಾಡ್, ಪಿಟಿ ಪರಮೇಶ್ವರ ನಾಯ್ಕ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶಿವಯೋಗಿ,, ಹಡಗಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐಗೋಳ ಚಿದಾನಂದ, ಮಾಜಿ ಶಾಸಕ ಶಿರಾಜ್ ಶೇಕ್ ಇತರರು ಇದ್ದರು.

 

 

ಜಾಹೀರಾತು
error: Content is protected !!