https://youtu.be/NHc6OMSu0K4?si=SI_K4goOPEgwo6h2
ಹಂಪಿಟೈಮ್ಸ್ ಹೊಸಪೇಟೆ:
ನಗರದ ಐಎಸ್‌ಆರ್ ಸಕ್ಕರೆ ಕಾರ್ಖಾನೆ ಮುಚ್ಚಲು ಕಾರ್ಖಾನೆಯ ಕಾರ್ಯವೈಖರಿ ಮತ್ತು ಮಾಲೀಕರೇ ಹೊರತು, ಪ್ರವಾಸೋಧ್ಯಮ ಸಚಿವ ಆನಂದ್‌ಸಿಂಗ್ ಕಾರಣವಲ್ಲ. ವಿನಾಃಕಾರಣ ಸಚಿವ ಆನಂದ್‌ಸಿಂಗ್ ಮೇಲೆ ಆರೋಪ ಮಾಡಲಾಗುತ್ತಿದೆ. ಕಾಂಗ್ರೆಸ್ ಮುಖಂಡ ರಾಜಶೇಖರ ಹಿಟ್ನಾಳ್ ಬಹಿರಂಗ ಸಭೆಯೊಂದರಲ್ಲಿ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಹೊಸಪೇಟೆ ರೈತ ಸಂಘ ಅಧ್ಯಕ್ಷ ಎಂ.ಜಿ.ಜೋಗಯ್ಯ ಹೇಳಿದರು.
ನಗರದ ರೈತ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರೈತರ ಬಾಕಿ ಹಣ ಪಡೆಯಲು ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ನಡೆಸಿದ ಕಾನೂನು ಹೋರಾಟದಲ್ಲಿ ಸಚಿವ ಆನಂದಸಿಂಗ್ ಅವರು 1.5 ರಿಂದ 2 ಕೋಟಿ ರೂ.ವರೆಗೂ ವಕೀಲರ ಶುಲ್ಕವನ್ನು ಭರಿಸಿದ್ದಾರೆ. ನ್ಯಾಯಾಲಯದಲ್ಲಿ ರೈತರ ಪರ ಕಾನೂನು ಹೋರಾಟಕ್ಕೆ ಸಚಿವ ಆನಂದ್‌ಸಿಂಗ್ ನೆರವಾಗಿದ್ದಾರೆ. ಕಾಂಗ್ರೆಸ್ ಮುಖಂಡ ರಾಜಶೇಖರ್ ಹಿಟ್ನಾಳ್ ಅವರು ಬಹಿರಂಗ ಸಭೆಯೊಂದರಲ್ಲಿ ಐಎಸ್‌ಆರ್ ಸಕ್ಕರೆ ಕಾರ್ಖಾನೆ ಮುಚ್ಚಲು ರೈತ ಸಂಘ, ಆನಂದ್‌ಸಿಂಗ್ ಕಾರಣವೆಂದು ಆರೋಪಿಸಿದ್ದಾರೆ. ರಾಜಕೀಯ ಸ್ವಾರ್ಥಕ್ಕಾಗಿ ಹಿಟ್ನಾಳ್ ಅವರು ಮಾಡಿರುವ ಆರೋಪ ಸರಿಯಲ್ಲ. ರೈತರ ಪರ ನಿಂತವರನ್ನು ನೆನೆಯುವುದು ನಮ್ಮ ಧರ್ಮ, ಆದರೆ ನೆರವಾದವರಿಗೆ ಮತ ಹಾಕಬೇಕೆಂದು ಯಾರಿಗೂ ಹೇಳುವುದಿಲ್ಲ. ಚುನಾವಣೆಗಳಲ್ಲಿ ಯಾರಿಗೆ ಮತದಾನ ಮಾಡಬೇಕೆಂಬುದು ಮತದಾರರ ನಿರ್ಧಾರವಾಗಿರುತ್ತದೆ ಮತದಾರರು ಸ್ವತಂತ್ರರು ಎಂದರು.
ಹೊಸಪೇಟೆ ರೈತಸಂಘದ ರೈತಭವನ ಪುನರ್ ನಿರ್ಮಾಣಕ್ಕೆ ಸಚಿವ ಆನಂದಸಿಂಗ್ ಅವರು ಪ್ರವಾಸೋಧ್ಯಮ ಇಲಾಖೆಯಿಂದ ರೂ.5 ಕೋಟಿ ರೂ ಅನುದಾನ ಮಂಜೂರು ಮಾಡಿಸಿದ್ದಾರೆ. ಜನವರಿ ಕೊನೆ, ಇಲ್ಲವೆ ಫೆಬ್ರವರಿ ಮೊದಲ ವಾರದಲ್ಲಿ ಭೂಮಿಪೂಜೆ ನೆರವೇರಿಸಲಾಗುತ್ತದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಎ.ಪರಸಪ್ಪ, ಖಜಾಂಚಿ ಸಿ.ಹಾಶಾಂ, ಸಹ ಕಾರ್ಯದರ್ಶಿ ಸಿ.ಅಂಜಿನಪ್ಪ, ನಿರ್ದೆಶಕರಾದ ಗೋಸಲ ಭರಮಪ್ಪ, ಬಂಡೆ ರಂಗಪ್ಪ, ಬಿ.ನಾಗರಾಜ, ಬಿ.ತಿರುಮಲ, ಯು. ಕೊಟ್ರೇಶ, ಶಂಶುದ್ದೀನ್ ಉಪಸ್ಥಿತರಿದ್ದರು.
More Stories
ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ
ಪ್ಯಾನೆಲ್ ವಕೀಲರ ನೇಮಕಾತಿಗಾಗಿ ಅರ್ಜಿ ಆಹ್ವಾನ
ಗುಡೇಕೋಟೆ ನಾಗರಾಜ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ