March 15, 2025

Hampi times

Kannada News Portal from Vijayanagara

ಮೂಲ ಎಸ್ಸಿಗೆ ಕಾಂಗ್ರೆಸ್ ಟಿಕೇಟ್ ನೀಡಿ: ಜಿಲ್ಲಾ ಮಾದಿಗ ಸಮಾಜ ಆಗ್ರಹ

 

https://youtu.be/NHc6OMSu0K4?si=SI_K4goOPEgwo6h2

 

ಹಂಪಿಟೈಮ್ಸ್ ಹೊಸಪೇಟೆ:

ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ಪರಿಶಿಷ್ಠ ಜಾತಿಗೆ ಮೀಸಲಿರುವ ಹಗರಿಬೋಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಮಾದಿಗ ಸಮಾಜದವರಿಗೆ ಕಾಂಗ್ರೆಸ್ ಟಿಕೇಟ್ ನೀಡಬೇಕೆಂದು ವಿಜಯನಗರ ಜಿಲ್ಲಾ ಮಾದಿಗ ಸಮಾಜ ಒತ್ತಾಯಿಸಿದೆ.

ವಿಜಯನಗರ ಕ್ಷೇತ್ರಕ್ಕೆ ಮಂಗಳವಾರ ಭೇಟಿನೀಡಿದ್ದ ಎಐಸಿಸಿ ಕಾರ್ಯದರ್ಶಿ, ಕಲ್ಯಾಣ ಕರ್ನಾಟಕದ ವಿಭಾಗದ ಉಸ್ತುವಾರಿ ಶ್ರೀಧರ್ ಬಾಬುಗೆ ಸಮಜದ ಮುಖಂಡರು ಮನವಿ ಸಲ್ಲಿಸಿ ಮಾತನಾಡಿದರು.  ವಿಜಯನಗರ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳು ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಹಗರಿಬೊಮ್ಮನಹಳ್ಳಿ(89)ವಿಧಾನಸಭಾ ಮೀಸಲು ಕ್ಷೇತ್ರಕ್ಕೆ ಸಾಮಾಜಿಕ ನ್ಯಾಯದಡಿ ಹಲವಾರು ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿ ಮಾದಿಗ ಸಮಾಜಕ್ಕೆ ಅನ್ಯಾಯವಾಗಿದೆ. ಈ ಬಾರಿ ಕಾಂಗ್ರೆಸ್ ಟಿಕೇಟ್ ಮೂಲ ಎಸ್ಸಿಗೆ ನೀಡುವ ಮೂಲಕ ಸಾಮಾಜಿಕ ನ್ಯಾಯ ನೀಡಬೇಕು

ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 10 ವಿಧಾನಸಭಾ ಕ್ಷೇತ್ರಗಳಿವೆ. 2011ರ ಜನಗಣತಿಯ ಪ್ರಕಾರ 5,91,699 ಪರಿಶಿಷ್ಟ ಜಾತಿಯ ಮತದಾರರಿದ್ದಾರೆ. ಪ್ರಸ್ತುತ 2021ರ ಜನಗಣತಿ ವರೆಗೆ ಒಟ್ಟು 6,45,000 ಜನಸಂಖ್ಯೆ ಇರುವ ಅಂದಾಜು ಇದೆ. ಇದರಲ್ಲಿ ಪರಿಶಿಷ್ಟ ಜಾತಿಯ ಮಾದಿಗ ಸಮಾಜದ ಒಟ್ಟು 10ವಿಧಾನಸಭಾ ಕ್ಷೇತ್ರಗಳಲ್ಲಿ 4,60,000 ಮತದಾರರು ಇದ್ದಾರೆ. ಕಾಂಗ್ರೆಸ್ ಪಕ್ಷ ಬಲವರ್ಧನೆಗೆ ಮೂಲ ಎಸ್ಸಿಗಳ ಕೊಡುಗೆ ಅಪಾರ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಎಂ.ಸಿ.ವೀರಸ್ವಾಮಿ, ಕೊಟಗಿನಾಳ್ ಮಲ್ಲಿಕಾರ್ಜುನ, ಎಸ್.ಬಿ.ಮಂಜುನಾಥ, ವೇಂಕಟೇಶ್ ಹೆಗಡೆ, ಸಿದ್ದೇಶ, ಕುಮಾರ್, ದೇವದಾಸ್, ದುರಗೇಶ್, ಅಂಜನಿ, ಮರಿಸ್ವಾಮಿ, ಛಲವಾದಿ ಸಮಾಜದ ಸಣ್ಣ ಈರಪ್ಪ ಮತ್ತಿತರರು ಇದ್ದರು.

 

 

ಜಾಹೀರಾತು
error: Content is protected !!