December 5, 2024

Hampi times

Kannada News Portal from Vijayanagara

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಭವಿಷ್ಯ ಬದಲಾಯಿಸುವ ತಂತ್ರಜ್ಞಾನ :ವಿನಾಯಕ್ ಆರ್.ಡಿ.

 

https://youtu.be/NHc6OMSu0K4?si=SI_K4goOPEgwo6h2

ಪಿಡಿಐಟಿಯಲ್ಲಿ ನೂತನ ಆರ್ಟಿಫಿಸಿಯಲ್ ಇಂಟೆಲಿಜೆನ್ಸ್ ಲ್ಯಾಬ್ ಉದ್ಘಾಟನೆ

ಹಂಪಿಟೈಮ್ಸ್ ಹೊಸಪೇಟೆ:
ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕ್ಷೇತ್ರ ಭವಿಷ್ಯದ ತಂತ್ರಜ್ಞಾನ ಕ್ಷೇತ್ರದಲ್ಲಿ ಅಮುಲಾಗ್ರ ಬದಲಾವಣೆ ತರಲಿದೆ ಎಂದು ಹುಬ್ಬಳ್ಳಿಯ ನೆಕ್ಸ್ ಜಿ ಕಂಪನಿಯ ಉಪ ಸಂಸ್ಥಾಪಕ ವಿನಾಯಕ್ ಆರ್.ಡಿ. ಹೇಳಿದರು.

ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಗಣಕ ಯಂತ್ರ ವಿಭಾಗ ಹಾಗೂ ಎ.ಐ.ಎಂ.ಎಲ್. ವಿಭಾಗಗಳ ನೇತೃತ್ವದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನೂತನ ಆರ್ಟಿಫಿಸಿಯಲ್ ಇಂಟೆಲಿಜೆನ್ಸ್ ಲ್ಯಾಬ್ ಹಾಗೂ ನೂತನ ವಿಭಾಗ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಒಂದು ಯಂತ್ರವು ತನ್ನ ಪರಿಸರವನ್ನು ಗ್ರಹಿಸಿ ತನಗೆ ಕೊಟ್ಟಿರುವ ಗುರಿಯತ್ತ ಹೆಚ್ಚು ಯಶಸ್ಸು ಪಡೆಯಲು ಅಗತ್ಯವಿರುವ ಕ್ರಮಗಳನ್ನು ತಾನೇ ಕೈಗೊಳ್ಳುತ್ತದೆ. ಬುದ್ಧಿಮತ್ತೆಯುಳ್ಳ ಯಂತ್ರಗಳ ವಿನ್ಯಾಸ ಮತ್ತು ಇದರ ಅಧ್ಯಯನ ಇಂದಿನ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಇದೆ. ಮನಸ್ಸಿನ ಸಾಮರ್ಥ್ಯಗಳನ್ನು ಕೃತಕ ಬುದ್ಧಿಮತ್ತೆಯ ಮೂಲಕ ಸಂಯೋಜಿಸುವ ಮಾನವ ಪ್ರಯತ್ನ ಹೊಸ ಸವಾಲು ಹಾಗೂ ರೋಚಕ ಆವಿಷ್ಕಾರಗಳಿಗೆ ನಾಂದಿಯಾಗಲಿದೆ. ಆರ್ಟಿಫಿಸಿಯಲ್ ಇಂಟೆಲಿಜೆನ್ಸ್ ಪ್ರಯೋಗಾಲಯ ಇಂದಿನ ಇಂಜಿನಿಯರಿAಗ್ ವಿದ್ಯಾರ್ಥಿಗಳಿಗೆ ಹೊಸ ಆವಿಷ್ಕಾರ, ಸಂಶೋಧನೆಯಲ್ಲಿ ಹೆಚ್ಚು ಪೂರಕವಾಗಲಿದೆ ಎಂದು ಅಭಿಪ್ರಾಯ ಪಟ್ಟರು.

ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಚ್.ಎಂ.ಗುರುಸಿದ್ದಸ್ವಾಮಿ ಅಧ್ಯಕ್ಷತೆವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಗುಣ ಮಟ್ಟದ ಶಿಕ್ಷಣ ದೊರಕಲು ವೀರಶೈವ ವಿದ್ಯಾವರ್ಧಕ ಸಂಘ ಸ್ವತಂತ್ರ ಪೂರ್ವದಿಂದಲೂ ಗ್ರಾಮೀಣ ಮಕ್ಕಳಿಗೆ ಕಡಿಮೆ ವೆಚ್ಚದಲ್ಲಿ ತಾಂತ್ರಿಕ ಶಿಕ್ಷಣ ಒದಿಗಿಸುತ್ತ ಬಂದಿದೆ ಎಂದುರು.

ಬೆಂಗಳೂರಿನ ನೆಟಲ್ಲ ಇನ್ನೋವೇಶನ್ಸ್ ಕಂಪನಿಯ ನಿರ್ದೇಶಕರಾದ ಡಾ.ಎನ್.ಎಸ್. ಬಿರಾದಾರ್ ಮಾತನಾಡಿ, ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು ಹಾಗೂ ನೆಟಲ್ಲ ಇನ್ನೋವೇಶನ್ಸ್ ಕಂಪನಿಯ ಅನುದಾನದಲ್ಲಿ ನೂತನ ರೂ. 17 ಲಕ್ಷ ವೆಚ್ಚದಲ್ಲಿ ಆರ್ಟಿಫಿಸಿಯಲ್ ಇಂಟೆಲಿಜೆನ್ಸ್ ಹಾಗೂ ಐ.ಓ.ಟಿ ಲ್ಯಾಬ್ ನ್ನು ಸ್ಥಾಪಿಸಲಾಗಿದೆ ಎಂದರು.

ಪ್ರಾಂಶುಪಾಲರಾದ ಡಾ. ಎಸ್.ಎಂ.ಶಶಿಧರ್ ಮಾತನಾಡಿ, ಜಗತ್ತಿನ ಬದಲಾವಣೆಗೆ ತಕ್ಕಂತೆ ಪಿಡಿಐಟಿ ಕಾಲೇಜು ಶೈಕ್ಷಣಿಕವಾಗಿ ಅಭಿವೃದ್ಧಿಯನ್ನು ಹೊಂದುತ್ತಿದೆ. ಈ ದೆಸೆಯಲ್ಲಿ ವಿದ್ಯಾರ್ಥಿಗಳ ಕೌಶಲ್ಯತೆ ಹೆಚ್ಚಿಸುವಲ್ಲಿ ಇಂಥ ಲ್ಯಾಬ್‌ಗಳ ಅವಶ್ಯಕತೆ ಇದೆ. ಮುಂಬರುವ ದಿನಗಳಲ್ಲಿ ಡೇಟಾ ಸೈನ್ಸ್ ಎಂಬ ಹೊಸ ವಿಭಾಗವನ್ನು ಪ್ರಾರಂಭ ಮಾಡುವ ಉದ್ದೇಶವಿದೆ ಎಂದು ಹೇಳಿದರು.

ಲಕ್ಷ್ಮೇಶ್ವರದ ಅಗಡಿ ತಾಂತ್ರಿಕ ಕಾಲೇಜಿನ ಉಪ ಪ್ರಾಂಶುಪಾಲ ಡಾ. ಪರಶುರಾಮ್ ಬಾರ್ಕಿ, ಪಿಡಿಐಟಿಯ ಆಡಳಿತ ಮಂಡಳಿ ಅಧ್ಯಕ್ಷ ಶ್ರೀ ಪಲ್ಲೇದ್ ದೊಡ್ಡಪ್ಪ, ಉಪ ಪ್ರಾಂಶುಪಾಲ ಡಾ. ಯು.ಎಂ.ರೋಹಿತ್, ಯೋಜನೆಯ ಮುಖ್ಯ ಸಂಚಾಲಕರಾದ ಪ್ರೊ. ಮಾಲತೇಶ್, ಎ.ಐ.ಎಂ.ಎಲ್. ವಿಭಾಗ ಮುಖ್ಯಸ್ಥೆ ಪ್ರೊ.ವಸಂತಮ್ಮ, ಡಾ. ವಿಜಯ ಕುಮಾರ್ ಮಾತನಾಡಿದರು.

ಪ್ರೊ. ಇಂದಿರಾ ನಿರೂಪಿಸಿದರು, ಗಣಕ ಯಂತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಪಾರ್ವತೀ ಕಡ್ಲಿ ವಂದಿಸಿದರು. ಡಾ. ಮಂಜುಳಾ ಎಸ್.ಡಿ. ಸ್ವಾಗತಿಸಿದರು. ಕು. ಸಹನಾ ಪ್ರಾರ್ಥಿಸಿದರು. ಕಾಲೇಜಿನ ಪ್ರಧ್ಯಾಪಕ ವೃಂದ, ಸಿಬ್ಬಂದಿ ವರ್ಗ, ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

 

 

ಜಾಹೀರಾತು
error: Content is protected !!