https://youtu.be/NHc6OMSu0K4?si=SI_K4goOPEgwo6h2
ಕೋಮು ಸೌಹಾರ್ಧಕ್ಕೆ ಧಕ್ಕೆ – ಆರೋಪಿ ಬಂಧನ : ಎಸ್ಪಿ
ಹಂಪಿ ಟೈಮ್ಸ್ ಹೊಸಪೇಟೆ:
ನಗರದ ಅನಂತಶಯನಗುಡಿಯ ಖಬರ್ ಸ್ಥಾನಕ್ಕೆ ಅತೀಕ್ರಮ ಪ್ರವೇಶಮಾಡಿ ಕೋಮು ಸಾಹಾರ್ಧಕ್ಕೆ ಧಕ್ಕೆಯುಂಟು ಮಾಡಿದ ಆರೋಪಿ ಎಸ್.ಪಿ.ಅಮರೇಶಯ್ಯ ತಂದೆ ಎಸ್ ಪಿ.ಪರಮೇಶ್ವರಯ್ಯನನ್ನು ಗ್ರಾಮೀಣ ಠಾಣೆ ಪಿಐ ಮತ್ತು ಸಿಬ್ಬಂದಿ ಬುಧವಾರ ಬಂಧಿಸಿದ್ದಾರೆ ಎಂದು ವಿಜಯನಗರ ಜಿಲ್ಲೆ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.
ಡಿ.25 ರಂದು ರಾತ್ರಿ 10 ಗಂಟೆಯಿಂದ ಡಿ.26ರ ಬೆಳಿಗ್ಗೆ 6-30ವರೆಗಿನ ಮಧ್ಯಾವಧಿಯಲ್ಲಿ ಹೊಸಪೇಟೆ ತಾಲೂಕಿನ ಅನಂತಶಯನಗುಡಿಯ ಖಬರ್ ಸ್ಥಾನಕ್ಕೆ ಅತೀಕ್ರಮ ಪ್ರವೇಶ ಮಾಡಿ ಕೋಮುಸೌಹಾರ್ದಕ್ಕೆ ಧಕ್ಕೆ ಯುಂಟು ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿತ್ತು.
More Stories
ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ
ಗುಡೇಕೋಟೆ ನಾಗರಾಜ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ
ರಾಜ್ಯಪಾಲರಿಂದ ಹಂಪಿಯ ಐತಿಹಾಸಿಕ ಸುಗ್ರೀವ ಗುಹೆ ವೀಕ್ಷಣೆ