https://youtu.be/NHc6OMSu0K4?si=SI_K4goOPEgwo6h2
ಹಂಪಿ ಟೈಮ್ಸ್ ಹೊಸಪೇಟೆ:
ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಸ್ಥಳೀಯವಾಗಿ ಪಕ್ಷ ಸಂಘಟನೆ, ಬಲವರ್ಧನೆಗೆ ಶ್ರಮಿಸಿದ ನಾನು ಎಂಎಲ್ಎ ಪ್ರಬಲ ಟಿಕೇಟ್ ಆಕಾಂಕ್ಷಿಯಾಗಿದ್ದು, ಟಿಕೇಟ್ ನೀಡುವ ಭರವಸೆ ಹೈಕಮಾಂಡ್ ನೀಡಿದೆ, ಟಿಕೇಟ್ ಕೈತಪ್ಪಿದರೂ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಎಚ್.ಎನ್.ಎಫ್.ಇಮಾಮ್ ನಿಯಾಜಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ವಿಜಯನಗರ ಕ್ಷೇತ್ರದಲ್ಲಿ ತಾಪಂ, ಜಿಪಂ, ನಗರಸಭೆ ಚುನಾವಣೆಯಲ್ಲಿ ಬೂತ್ ಮಟ್ಟದಲ್ಲಿ ಕೆಲಸ ಮಾಡಿ ಪಕ್ಷ ಸಂಘಟನೆ ಮಾಡಿದ್ದೇನೆ. ಕಳೆದ ಎರಡು ಬಾರಿಯೂ ಆಕಾಂಕ್ಷೆಯಾಗಿದ್ದೆ. ಆದರೆ ಕಳೆದ ಬಾರಿ ವಲಸಿಗರಿಗೆ ಟಿಕೇಟ್ ನೀಡಿದರು. ಈವರೆಗೂ ಎಲ್ಲೂ ಬೇಸರಿಸಿಕೊಳ್ಳದೆ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕಾರ್ಯನಿರ್ವಹಿಸಿದ್ದೇನೆ. ಈ ಹಿಂದೆ ಸ್ಥಳೀಯರನ್ನು ಕಡೆಗಣಿಸಿದ ಬಗ್ಗೆ ಹೈಕಮಾಂಡ್ ಗೆ ಅರಿವಿದೆ. ಈ ಬಾರಿ ಸ್ಥಳೀಯರಿಗೆ ಟಿಕೇಟ್ ನೀಡುವ ಭರವಸೆ ಇದೆ. ಈಗಾಗಲೇ ಹೈಕಮಾಂಡ್ ಜೊತೆ ಮಾತನಾಡಿದ್ದೇನೆ. ಟಿಕೇಟ್ ನೀಡುವ ಭರವಸೆ ಕೊಟ್ಟಿದ್ದಾರೆ. ನಾಳೆಯಿಂದಲೇ ಕ್ಷೇತ್ರದಲ್ಲಿನ ಮನೆ ಮನೆಗೆ ತೆರಳಿ ಈವರೆಗಿನ ಸೇವೆಯನ್ನು ಪರಿಗಣಿಸಿ ಚುನಾವಣೆಯಲ್ಲಿ ಗೆಲ್ಲಿಸಲು ಕೋರುವೆ ಎಂದರು.
ಮುಖಂಡರಾದ ಬಿಸಾಟಿ ಸತ್ಯನಾರಾಯಣ, ಕೋರಿ ಶಿವರಾಮಪ್ಪ, ಹನುಮಂತಪ್ಪ, ವೆಂಕಪ್ಪ, ಅಣ್ಣಾಮಲೈ ಇದ್ದರು.
More Stories
ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ
ಪ್ಯಾನೆಲ್ ವಕೀಲರ ನೇಮಕಾತಿಗಾಗಿ ಅರ್ಜಿ ಆಹ್ವಾನ
ಗುಡೇಕೋಟೆ ನಾಗರಾಜ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ