December 5, 2024

Hampi times

Kannada News Portal from Vijayanagara

ವಿಜ್ಞಾನ ಶಿಕ್ಷಕ ಎಂ.ರಾಜುಗೆ ಎಚ್.ಎನ್ ಪ್ರಶಸ್ತಿ : ಕಿಚಿಡಿ ಕೊಟ್ರೇಶ್

 

https://youtu.be/NHc6OMSu0K4?si=SI_K4goOPEgwo6h2

ಹಂಪಿಟೈಮ್ಸ್ ಹೊಸಪೇಟೆ:

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು 2022ರ ಸಾಲಿಗೆ ಕೊಡಮಾಡುವ ರಾಜ್ಯ ಮಟ್ಟದ ಡಾ.ಎಚ್.ಎನ್.ಪ್ರಶಸ್ತಿಗೆ ವಿಜಯನಗರ ಜಿಲ್ಲೆ  ಹಗರಿಬೊಮ್ಮನಹಳ್ಳಿಯ ವಿಜ್ಞಾನ ಶಿಕ್ಷಕ ಎಂ‌.ರಾಜು ಅವರು ಆಯ್ಕೆಯಾಗಿದ್ದಾರೆ.

ವೈಚಾರಿಕ ಚಿಂತಕ ಹುಲಿಕಲ್ ನಟರಾಜ್ ಸ್ಥಾಪಿತ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನಿಂದ ತುಮಕೂರಿನಲ್ಲಿ ಡಿ.28 ಹಾಗೂ 29 ರಂದು ನಡೆಯುವ ಎರಡನೇ ವರ್ಷದ ವೈಜ್ಞಾನಿಕ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಎಂ.ರಾಜು ಅವರು ಸಾಕಷ್ಟು ವೈಜ್ಞಾನಿಕ, ವೈಚಾರಿಕ ಚಿಂತನೆಗಳಲ್ಲಿ ತೊಡಗಿಸಿಕೊಂಡು, ಸಮಾಜ ಮುಖಿ ಕಾರ್ಯಗಳನ್ನು ಮಾಡಿದ್ದಾರೆ. ಅಲ್ಲದೇ ಹತ್ತು ಸಾವಿರಕ್ಕೂ ಹೆಚ್ಚು ಮರಗಳನ್ನು ಬೆಳೆಸಿ ಪರಿಸರ ಸಂರಕ್ಷಣೆ ಮುಂದುವರೆಸಿದ್ದಾರೆ ಎಂದು ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಜಿಲ್ಲಾಧ್ಯಕ್ಷ ಕಿಚಿಡಿ ಕೊಟ್ರೇಶ್ ತಿಳಿಸಿದರು.

 

 

ಜಾಹೀರಾತು
error: Content is protected !!