https://youtu.be/NHc6OMSu0K4?si=SI_K4goOPEgwo6h2
ಇಂಧನ ಸಂರಕ್ಷಣಾ ಜಾಗೃತಿ
ಹಂಪಿಟೈಮ್ಸ್ ಹೊಸಪೇಟೆ:
ಇಂಧನ ಸಂರಕ್ಷಣೆ ಮತ್ತು ವಿದ್ಯುತ್ ಉಳಿತಾಯವನ್ನು ತಮ್ಮ ಜೀವನಶೈಲಿಯ ಒಂದು ಭಾಗವಾಗಿ ಮಾಡಿಕೊಳ್ಳಬೇಕು ಎಂದು ಕೆ.ಪಿ.ಟಿ.ಸಿ.ಎಲ್. ನ ಕಾರ್ಯನಿರ್ವಾಹಕ ಎಂಜಿನಿಯರ್ ಎಚ್.ರಮೇಶ್ ಅಭಿಪ್ರಾಯಪಟ್ಟರು.
ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ ಮತ್ತು ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಮುನಿರಾಬಾದ್ ಪ್ರಾದೇಶಿಕ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆಯಲ್ಲಿ ಶುಕ್ರವಾರ ಮಾತನಾಡಿದರು.
ಕರ್ನಾಟಕದ ವಿವಿಧ ಕಡೆಗಳಲ್ಲಿ ಸೋಲಾರ್ ಪಾರ್ಕ್ ಗಳ ಸ್ಥಾಪನೆಯಾಗಿದೆ. ನೈಸರ್ಗಿಕ ಶಕ್ತಿ ಸಂಪನ್ಮೂಲ ಬಳಸಿ ವಿದ್ಯುತ್ ತಯಾರಿಸುವುದರಿಂದ ಮುಂದಿನ ಪೀಳಿಗೆಗಳಿಗೆ ಪೆಟ್ರೋಲ್ ಹಾಗೂ ಡೀಸೆಲ್ ಇಂಧನಗಳನ್ನು ಸಂರಕ್ಷಿಸಬಹುದು ಎಂದು ಹೇಳಿದರು.
ಶಕ್ತಿ ದಕ್ಷತೆಯ ಬ್ಯೂರೋ ಸಂಸ್ಥೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ಸಂಸ್ಥೆಯು ಪರೀಕ್ಷೆಗಳನ್ನು ನಡೆಸಿ ಎನರ್ಜಿ ಮ್ಯಾನೇಜರ್ ಹಾಗೂ ಅರ್ಜಿ ಆಡಿಟರ್ ಪ್ರಮಾಣಪತ್ರವನ್ನು ವಿತರಿಸುತ್ತಾರೆ. ಈ ಪ್ರಮಾಣ ಪತ್ರ ಪಡೆದ ವಿದ್ಯಾರ್ಥಿಗಳು ಕೈಗಾರಿಕೆಗಳಲ್ಲಿ ಇಂಧನವನ್ನು ಉಳಿಸುವ ಸಲಹೆಗಾರರಾಗಿ ಕಾರ್ಯ ನಿರ್ವಹಿಸಬಹುದಾಗಿದೆ ಎಂದು ತಿಳಿಸಿದರು.
ಪ್ರಾಂಶುಪಾಲರಾದ ಡಾ. ಎಸ್.ಎಂ. ಶಶಿಧರ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಅನವಶ್ಯಕ ವಿದ್ಯುತ್ ಬಳಕೆ, ವಿದ್ಯುತ್ ಅಪವ್ಯಯದಿಂದ ಅಪಾರವಾದ ಇಂಧನವು ಹಾಗು ಪರಿಸರ ನಾಶವಾಗುತ್ತಿದೆ. ಇದನ್ನು ತಡೆಗಟ್ಟಲು ವಿದ್ಯಾರ್ಥಿಗಳು ಸಾರ್ವಜನಿಕರಲ್ಲಿ ಇಂಧನ ಸಂರಕ್ಷಣಾ ಜಾಗೃತಿಯನ್ನು ಮೂಡಿಸಬೇಕು ಎಂದು ಹೇಳಿದರು.
ವಿದ್ಯುತ್ ವಿಭಾಗದ ಸಹ ಪ್ರಾಧ್ಯಾಪಕರಾದ ಪ್ರೊ .ಮಧ್ವರಾಜ ಮಾತನಾಡಿ, ಇಂಧನ ಸಂರಕ್ಷಣೆಯಲ್ಲಿ ಮಹಿಳೆಯರ ಪಾತ್ರದ ಬಗ್ಗೆ ತಿಳಿಸಿದರು. ಪ್ರೆಶರ್ ಕುಕ್ಕರ್ ನ್ನು ಬಳಸಿ ಆಹಾರ ವನ್ನು ಬೇಯಿಸುವುದರಿಂದ ಇಂಧನವನ್ನು ಉಳಿತಾಯ ಮಾಡಬಹುದು. ರೆಫ್ರಿಜಿರೇಟರ್ ನ್ನು ತ್ವರಿತವಾಗಿ ಮುಚ್ಚಬೇಕು. ವಾಹನಗಳಲ್ಲಿ ಏರೋ ಡೈನಮಿಕ್ ವಿನ್ಯಾಸವನ್ನು ಅಳವಡಿಸುವ ಮೂಲಕ ಇಂಧವನ್ನು ಉಳಿತಾಯ ಮಾಡಬಹಿದು ಎಂದು ಹೇಳಿದರು.
ಲಲಿತ್ ಪ್ರಸಾದ್ ಮಾತನಾಡಿ, ಇಂತಹ ಕಾರ್ಯಕ್ರಮಗಳು ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಜನಜಾಗೃತಿ ಮೂಡಿಸುವಲ್ಲಿ ಸಹಾಯವಾಗಲಿದೆ ಎಂದರು.
ಇಂಧನ ಉಳಿತಾಯದ ಬಗ್ಗೆ ಜಾಗೃತಿ ಮೂಡಿಸುವ ಕ್ವಿಜ್ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿಭಾಗ ಮುಖ್ಯಸ್ಥರಾದ ಪ್ರೊ. ಪ್ರಕಾಶ್, ಪ್ರೊ.ಚಂದ್ರೇಗೌಡ ಉಪಸ್ಥಿತರಿದ್ದರು. ಕು.ಶ್ರಾವಣಿ ಕಾರ್ಯಕ್ರಮ ನಿರೂಪಿಸಿದರು. ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಕಾರ್ಯದರ್ಶಿ ಕಟ್ಟ ನಂಜಪ್ಪ ಸ್ವಾಗತಿಸಿದರು. ಅಧ್ಯಾಪಕರಾದ ರಜನಿ ಉಮಾಪತಿ ಹಾಗೂ ಜಿ.ಸಿ. ಸುಮಾ ಸಂಚಾಲಕರಾಗಿ ಕಾರ್ಯರ್ವಹಿಸಿದರು.
More Stories
ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ
ಪ್ಯಾನೆಲ್ ವಕೀಲರ ನೇಮಕಾತಿಗಾಗಿ ಅರ್ಜಿ ಆಹ್ವಾನ
ಗುಡೇಕೋಟೆ ನಾಗರಾಜ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ