November 7, 2025

Hampi times

Kannada News Portal from Vijayanagara

ವಿಜ್ಞಾನದ ವಿದ್ಯಾರ್ಥಿಗಳಿಗೆ ಕೈಗಾರಿಕಾ ಕ್ಷೇತ್ರದಲ್ಲೂ ಬೇಡಿಕೆ: ಡಾ.ಡಿ.ಎಚ್.ಮಂಜುನಾಥ

https://youtu.be/NHc6OMSu0K4?si=SI_K4goOPEgwo6h2

ಹಂಪಿಟೈಮ್ಸ್ ಹೊಸಪೇಟೆ:
ಬಿಎಸ್ಸಿ, ಎಂ.ಎಸ್ಸಿ ಶಿಕ್ಷಣ ಪೂರೈಸಿದ ವಿದ್ಯಾರ್ಥಿಗಳಿಗೆ ಕೈಗಾರಿಕೆ ಕ್ಷೇತ್ರದಲ್ಲೂ ಹೆಚ್ಚಿನ ಬೇಡಿಕೆ ಇದ್ದು, ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಹಾಯಕ ಪ್ರಾಧ್ಯಾಪಕ ಡಾ.ಡಿ.ಎಚ್.ಮಂಜುನಾಥ ಹೇಳಿದರು.

ನಗರದ ವಿಜಯನಗರ ಮಹಾವಿದ್ಯಾಲಯದ ರಸಾಯನಶಾಸ್ತ್ರ ವಿಭಾಗ ಹಾಗೂ ಐಕ್ಯೂಎಸಿ ಸಹಯೋಗದೊಂದಿಗೆ ಕಾಲೇಜಿನ ಸುವರ್ಣ ಭವನದ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಸಾಯನಶಾಸ್ತ್ರದ ಭವಿಷ್ಯದ ವೃತ್ತಿಪರ ದೃಷ್ಟಿಕೋನಗಳು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು. ವಿಜ್ಞಾನ ವಿಷಯ ಆಯ್ಕೆಮಾಡಿಕೊಂಡು ಬಿ.ಎಸ್ಸಿ., ಎಂ.ಎಸ್ಸಿ ಶಿಕ್ಷಣ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಬೋಧನೆ ಕ್ಷೇತ್ರಕ್ಕೆ ಸೀಮಿತ ಎಂಬ ಭಾವನೆಯಿಂದ ಹೊರಬರಬೇಕಿದೆ. ಶಿಕ್ಷಣದ ಜೊತೆಗೆ ಕೌಶಲ್ಯ ಬೆಳೆಸಿಕೊಂಡವರನ್ನು ಆಧುನೀಕ ಜಗತ್ತಿನ ಉದ್ಯೋಗಗಳು ಕೈಬೀಸಿ ಕರೆಯುತ್ತವೆ. ಕಲಿಕೆಯ ಹಂತದಲ್ಲೆ ಕೌಶಲ್ಯ ರೂಢಿಸಿಕೊಳ್ಳಬೇಕು. ಕೌಶಲ್ಯವಿದ್ದವರಿಗೆ ನೌಕರಿಗಾಗಿ ಅಲೆದಾಡುವ ಅನಿವಾರ್ಯತೆ ಎದುರಾಗದು ಎಂದರು.

ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಅಸುಂಡಿ ಬಿ ನಾಗರಾಜ್‌ಗೌಡ ಅಧ್ಯಕ್ಷತೆವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಮಹತ್ವವನ್ನು ಅರಿತುಕೊಳ್ಳಬೇಕು. ಪ್ರತಿಯೊಂದು ಕ್ಷೇತ್ರದಲ್ಲಿ ತಮ್ಮದೆ ಆದ ಸಾಧನೆಗೈಯಲು ವಿದ್ಯಾರ್ಥಿಗಳು ಕ್ರಿಯಾಶೀಲತೆ, ಆಸಕ್ತಿ ಮೈಗೂಡಿಸಿಕೊಳ್ಳಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ಡಾ.ವಿ.ಎಸ್.ಪ್ರಭಯ್ಯ ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದರು. ಬಿ.ಪಿ.ಚಂದ್ರಶೇಖರಪ್ಪ, ಪ್ರಾಧ್ಯಾಪಕ ಡಾ.ವೀರೇಶ್, ಡಾ.ಎ.ರಾಮಚಂದ್ರ, ಮಧುಕರ್ ಸೊಪ್ಪಿನ್ ನಿರ್ವಹಿಸಿದರು.

 

 

 

 

 

 

ಜಾಹೀರಾತು
error: Content is protected !!