https://youtu.be/NHc6OMSu0K4?si=SI_K4goOPEgwo6h2
ಹಂಪಿಟೈಮ್ಸ್ ಹೊಸಪೇಟೆ:
ವೀರಶೈವ ಲಿಂಗಾಯತ ಪಂಚಮಸಾಲಿ ಹರಿಹರ ಪೀಠದಲ್ಲಿ ಜ.14 ಮತ್ತ 15ರಂದು ಹರಜಾತ್ರೆ ಮತ್ತು ಅಖಂಡ ವೀರಶೈವ ಲಿಂಗಾಯತರಿಗೆ ಕೇಂದ್ರದ ಓಬಿಸಿ ಹಾಗೂ ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಬೃಹತ್ ಮೀಸಲಾತಿ ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಮಾವೇಶ ಸಮಿತಿ ಅಧ್ಯಕ್ಷ ಪ್ರಕಾಶ ಪಾಟೀಲ್ ತಿಳಿಸಿದರು.
ಜಗದ್ಗುರು ಹರಿಹರ ಪೀಠದಲ್ಲಿ ಬುಧವಾರ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಹರಜಾತ್ರೆ ಹಾಗೂ ಮೀಸಲಾತಿ ಬೃಹತ್ ಜನಜಾಗೃತಿ ಸಮಾವೇಶ ನಡೆಸಲು ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು. ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ, ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಜಿ.ಪಿ.ಪಾಟೀಲ, ಗೌರವಧ್ಯಕ್ಷ ಬಾವಿ ಬೆಟ್ಟಪ್ಪ, ಮಾಜಿ ರಾಜ್ಯಧ್ಯಕ್ಷ ಬಸವರಾಜ್ ದಿಂಡೂರ್, ಉಪಾಧ್ಯಕ್ಷ ಶಂಕರಗೌಡ, ಕಾರ್ಯಾಧ್ಯಕ್ಷ ಸೋಮನಗೌಡ ಪಾಟೀಲ, ಧರ್ಮದರ್ಶಿ ಪಿ.ಡಿ.ಶಿರೂರ, ಮಹೇಶ್ ಹಾವೇರಿ, ನಾಗರಾಜ್, ಕಳಕನಗೌಡ, ಜ್ಯೋತಿ ಪ್ರಕಾಶ, ಚಂದ್ರಶೇಖರ ಪೂಜಾರ, ಯುವಘಟಕದ ರಾಜ್ಯಾಧ್ಯಕ್ಷ ಮಂಜುನಾಥ ನವಲಗುಂದ ಹಾಗೂ ವಿವಿಧ ಜಿಲ್ಲೆಯ ಜಿಲ್ಲಾಧ್ಯಕ್ಷರು, ತಾಲ್ಲೂಕಾಧ್ಯಕ್ಷರು, ವಿವಿಧ ಜಿಲ್ಲೆಯ ಮಹಿಳಾ ಘಟಕದವರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಮಾವೇಶ ಸಮಿತಿ: ಹರಜಾತ್ರೆ ನಿಮಿತ್ಯ ನಡೆಯುವ ಬೃಹತ್ ಮೀಸಲಾತಿ ಜನಜಾಗೃತಿ ಸಮಾವೇಶ ಸಮಿತಿ ಅಧ್ಯಕ್ಷರಾಗಿ ವಿಜಯನಗರ ಜಿಲ್ಲಾಧ್ಯಕ್ಷ ಪ್ರಕಾಶ್ ಪಾಟೀಲ್, ಪ್ರಧಾನ ಕಾರ್ಯದರ್ಶಿಯಾಗಿ ನಾಗೇಂದ್ರ ಕಡಕೋಳ, ಜಂಟಿ ಕಾರ್ಯದರ್ಶಿಯಾಗಿ ಮಂಜುನಾಥ ಮಾಗಡಿ, ಸಂಘ ಮತ್ತು ಪೀಠದ ಸಮನ್ವಯಕಾರರಾಗಿ ಸೋಮನಗೌಡ ಪಾಟೀಲ, ಖಂಜಾಚಿಯಾಗಿ ಮಲ್ಲಿನಾಥ ಹಾಗೂ ಜ್ಯೋತಿ ಪ್ರಕಾಶ್ ಇವರನ್ನು ಸರ್ವರ ಸಮ್ಮತದೊಂದಿಗೆ ಆಯ್ಕೆಯಾಗಿದ್ದಾರೆ.
More Stories
ಹಂಪಿ ಉತ್ಸವದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳ ಆಯೋಜನೆ, ರೂ.20 ಕೋಟಿ ಅನುದಾನಕ್ಕೆ ಬೇಡಿಕೆ: ಡಿ.ಸಿ. ಎಂ.ಎಸ್.ದಿವಾಕರ ಹೇಳಿಕೆ
ಮೊದಲ ಉದ್ಯೋಗ ಮೇಳದಲ್ಲಿ 417 ಅಭ್ಯರ್ಥಿಗಳು ಆಯ್ಕೆ, 9 ಲಕ್ಷ ರೂ.ವರೆಗೆ ಪ್ಯಾಕೇಜ್ : ಮೆಟ್ರಿ ಮಲ್ಲಿಕಾರ್ಜುನ