April 17, 2025

Hampi times

Kannada News Portal from Vijayanagara

ಸಾಧಕಿಯರಿಗೆ ಶ್ರೀವಾಲ್ಮೀಕಿ ಕಲಾರತ್ನ ಪ್ರಶಸ್ತಿ ಪ್ರಧಾನ

https://youtu.be/NHc6OMSu0K4?si=SI_K4goOPEgwo6h2

 

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳಾ ಸಾಧಕಿಯರಿಗೆ ಶ್ರೀವಾಲ್ಮೀಕಿ ಕಲಾರತ್ನ ಪ್ರಶಸ್ತಿ ಪ್ರಧಾನ

ಹಂಪಿಟೈಮ್ಸ್ ಹೊಸಪೇಟೆ:

ಸ್ಥಳೀಯ ಶ್ರೀವಾಲ್ಮೀಕಿ ಮಹಿಳಾ ಕಲಾ ಸಂಸ್ಥೆಯು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ 10ನೇ ವಾರ್ಷಿಕೋತ್ಸವದಂಗವಾಗಿ ಡಿ.22 ರಂದು ಸಂಜೆ 5ಕ್ಕೆ ನಗರದ ಸರ್ಕಾರಿ ನೌಕರರ ಭವನದಲ್ಲಿ ಸಮಾಜ ಸೇವಕ ಸಿದ್ಧಾರ್ಥಸಿಂಗ್‌ಗೆ ಶ್ರೀ ವಾಲ್ಮೀಕಿ ಕಲಾರತ್ನ ಪ್ರಶಸ್ತಿ ಹಾಗೂ ಕಲಾ ಸೇವೆ ಪ್ರಶಸ್ತಿ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳಾ ಸಾಧಕಿಯರಿಗೆ ಶ್ರೀವಾಲ್ಮೀಕಿ ಕಲಾರತ್ನ ಪ್ರಶಸ್ತಿ ಪ್ರಧಾನ ಮಾಡಲಿದೆ.

ಸಾಧಕಿಯರಿಗೆ ಪ್ರಶಸ್ತಿ ಪ್ರಧಾನ:

ನಗರಸಭೆ ಅಧ್ಯಕ್ಷ್ಷರಾದ ಸುಂಕಮ್ಮ (ಸಮಾಜಸೇವೆ), ಪಿ.ಪದ್ಮಾ (ರಂಗಭೂಮಿ), ಸವಿತಾ ಅಂಬರೇಶ್ ನುಡಗೋಣಿ(ಸಂಗೀತ ಕ್ಷೇತ್ರ), ವಿಜಯಲಕ್ಷಿö್ಮÃ(ವೈದ್ಯಕೀಯ ಕ್ಷೇತ್ರ), ಅಂಜಲಿ (ನೃತ್ಯ ಕ್ಷೇತ್ರ), ರಂಜಾನ್ ಬೀ.ಪಿ( ಯೋಗ ಕ್ಷೇತ್ರ), ಕುಮಾರಿ ಇಂದಿರಾ ಕಲಾಲ್ (ಪತ್ರಿಕಾ ಕ್ಷೇತ್ರ) ಇವರಿಗೆ ಪ್ರಶಸ್ತಿ ಪ್ರಧಾನ, ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ.

ಶ್ರೀ ತಾಯಮ್ಮ ಶಕ್ತಿ ಸಂಘದ ಅಧ್ಯಕ್ಷರಾದ ಕವಿತಾ ಈಶ್ವರಸಿಂಗ್ ಉದ್ಘಾಟಿಸಲಿದ್ದಾರೆ, ವಾಲ್ಮೀಕಿ ಕಲಾ ಸಂಸ್ಥೆಯ ಅಧ್ಯಕ್ಷರಾದ ಅನುರಾಧ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶರಾದ ಸಿದ್ಧಲಿಂಗೇಶ. ಕೆ.ರಂಗಣ್ಣರವರ್, ಬಿ.ಆರ್.ಸಿ.ಎಸ್, ಡಾ.ಡಾ. ಜಂಬಯ್ಯ, ಸಚಿವ ಆನಂದ್‌ಸಿAಗ್ ಅವರ ಆಪ್ತ ಸಹಾಯಕ ಗೋವಿಂದ ಕುಲಕರ್ಣಿ, ನಗರಸಭೆ ಉಪಾಧ್ಯಕ್ಷರಾದ ಎಲ್.ಎಸ್.ಆನಂದ, ಪ್ರಾಂಶುಪಾಲಾರಾದ ನಟರಾಜ್ ಪಾಟೀಲ್, ಹಿಂದೂಸ್ತಾನಿ ಗಾಯಕರಾದ ಮಲ್ಲಿಕಾರ್ಜುನ ಟಿ.ತುರುವನೂರು, ಕಾವ್ಯ ವಾಹಿನಿ ಸಂಸ್ಥೆ ಅಧ್ಯಕ್ಷರಾದ ಜ್ಯೋತಿರಾಜ್, ಇನ್ನರ್‌ವ್ಹೀಲ್ ಸಂಸ್ಥೆ ಅಧ್ಯಕ್ಷರಾದ ರೇಖಾ ಪ್ರಕಾಶ್, ಜನನಿ ಮಹಿಳಾ ಸಬಲೀಕರಣ ಸಮಿತಿ ಅಧ್ಯಕ್ಷರಾದ ಎನ್.ಹುಲಿಗೆಮ್ಮ ಮೌನೇಶ್, ಭರತನಾಟ್ಯ ಕಲಾವಿದೆ ಹಾಗೂ ಚಿತ್ರ ನಟಿ ಭಾರತಿ ಗುಂಡಿ ರಮೇಶ್, ಶ್ರೀವಾಲ್ಮೀಕಿ ಮಹಿಳಾ ಕಲಾ ಸಂಸ್ಥೆ ಉಪಾಧ್ಯಕ್ಷರಾದ ನಾಗರತ್ನ ಅರವಿಂದ ಉಪಸ್ಥಿತರಿರಲಿದ್ದಾರೆ ಎಂದು ವಾಲ್ಮೀಕಿ ಮಹಿಳಾ ಕಲಾ ಸಂಸ್ಥೆಯ ಅಧ್ಯಕ್ಷರಾದ ಅನುರಾಧ ವಾಲ್ಮಿಕಿ ತಿಳಿಸಿದ್ದಾರೆ.

 

ಜಾಹೀರಾತು
error: Content is protected !!