https://youtu.be/NHc6OMSu0K4?si=SI_K4goOPEgwo6h2
ಮೊಬೈಲ್ ಇಲ್ಲದ ಆ ದಿನಗಳ ಪ್ರೀತಿ ಗೆಳೆತನ ನೆನಪಾಗದೆ ಇರದು
ಹಂಪಿ ಟೈಮ್ಸ್ ಹೊಸಪೇಟೆ:
ಪದವಿ ಪೂರ್ವದಲ್ಲಿನ ಪ್ರೀತಿ, ಗೆಳೆತನ, ಸಂಬಂಧಗಳಿದ್ದ ಮೌಲ್ಯಗಳನ್ನು ಪ್ರಧಾನವಾಗಿಟ್ಟುಕೊಂಡು 3 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪದವಿ ಪೂರ್ವ ಸಿನಿಮಾ 30 ಡಿಸೆಂಬರ್ 2022ರಂದು ರಾಜ್ಯಾದ್ಯಂತ 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ಎಂದು ಚಿತ್ರದ ನಾಯಕ ಪೃಥ್ವಿ ಶಾಮನೂರ್ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹಳೇ ಬೇರು ಹೊಸ ಚಿಗುರು ಎಂಬಂತೆ ಹಿರಿಯ ಕಲಾವಿದರೊಂದಿಗೆ ಹೊಸ ಮುಖಗಳ ಪರಿಚಯ ತೆರೆಯಲ್ಲಿ ಕಾಣಲಿದೆ. ಮೊಬೈಲ್ ಇ್ಲಲದ 1995-96ರ ಆ ದಿನಗಳಲ್ಲಿನ ಸ್ನೇಹ, ಪ್ರೀತಿ, ಕೌಟಂಬಿಕ ಬಾಂಧವ್ಯಗಳನ್ನು ನೋಡುಗರಿಗೆ ನೆನಪಿಸುತ್ತವೆ.
ಯೋಗರಾಜ್ ಭಟ್, ಅರ್ಜುನ್ ಜನ್ಯ, ಹಂಸಲೇಖ ಅವರ ಪ್ರೋತ್ಸಾಹದಿಂದ ಚಿತ್ರದಲ್ಲಿ ನಟಿಸಲು ಯುವಕರ ತಂಡ ಮುಂದಾಗಿದೆ. ಯೋಗರಾಜ್ ಸಿನಿಮಾಸ್ ಮತ್ತು ರವಿ ಶಾಮನೂರ್ ಫಿಲ್ಮ್ ಬ್ಯಾನರ್ ಅಡಿ ಚಿತ್ರ ನಿರ್ಮಾಣಗೊಂಡಿದೆ.
ಹರಿಪ್ರಸಾದ್ ಜಯಣ್ಣ ನಿರ್ದೇಶನ, ಯೋಗರಾಜ್ ಭಟ್ ಮತ್ತು ರವಿ ಶಾಮನೂರ್ ನಿರ್ಮಾಪಕರಾಗಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿರುವ ನಾಲ್ಕು ಹಾಡುಗಳನ್ನು ಯೋಗರಾಜ ಭಟ್ ಅವರೇ ಬರೆದಿದ್ದಾರೆ. ನಟಿಯಾಗಿ ಅಂಜಲಿ ಅನೀಶ್ ಅಭಿನಯಿಸಿದ್ದಾರೆ. ರಂಗಾಯಣ ರಘು, ಶರತ್ ಲೋಹಿತಾಶ್ವ, ಅದಿತಿ ಪ್ರಭುದೇವ ಸೇರಿದಂತೆ ಒಟ್ಟು 20 ಜನ ಸಿನಿಮಾದಲ್ಲಿ ನಟಿಸಿದ್ದಾರೆ, ಒಂದು ಬಿಟ್ ಸಾಂಗ್ ಇದೆ ಎಂದರು.
ಬೆಂಗಳೂರು, ಶಿವಮೊಗ್ಗ, ಮೈಸೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರದ ಅವಧಿ ಒಟ್ಟು 2.10 ನಿಮಿಷವಿದೆ. ಚಿತ್ರದ ನಿರ್ಮಾಣದಲ್ಲಿ ಹಿರಿಯ ತಂತ್ರಜ್ಞರೆಲ್ಲ ಕೆಲಸ ಮಾಡಿದ್ದಾರೆ. ಪ್ರತಿಯೊಬ್ಬರೂ ಸಿನಿಮಾ ನೋಡಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಚಿತ್ರತಂಡದ ಯುವ ನಟರಾದ ರಜನೀಶ್, ಸುಶ್ಮಿತಾ, ವಿಜೇಶ್ ಅರಕಲಗೂಡು, ವೆಂಕಟ್ ಇದ್ದರು.
More Stories
ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ
ಗುಡೇಕೋಟೆ ನಾಗರಾಜ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ
ರಾಜ್ಯಪಾಲರಿಂದ ಹಂಪಿಯ ಐತಿಹಾಸಿಕ ಸುಗ್ರೀವ ಗುಹೆ ವೀಕ್ಷಣೆ