March 15, 2025

Hampi times

Kannada News Portal from Vijayanagara

ಇಂಗ್ಲೀಷ್ ಪದ ಬಳಸಿದಷ್ಟು ಕಲಿಕೆ ಸರಳ : ಬಿಇಒ ಚನ್ನಬಸಪ್ಪ

 

https://youtu.be/NHc6OMSu0K4?si=SI_K4goOPEgwo6h2

 

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಶಿಕ್ಷಕರಿಗೆ ಕಾರ್ಯಾಗಾರ

ಹಂಪಿಟೈಮ್ಸ್ ಹೊಸಪೇಟೆ:

ವಿದ್ಯಾರ್ಥಿಗಳ ಭವಿಷ್ಯದ ಶೈಕ್ಷಣಿಕ ಆಯ್ಕೆಗೆ ಎಸ್‌ಎಸ್‌ಎಲ್‌ಸಿ ಪ್ರಮುಖ ಘಟ್ಟವಾಗಿರುವುದರಿಂದ, ಇಂಗ್ಲೀಷ್ ಕಲಿಕೆಗೆ ಹೆಚ್ಚಿನ ಆಧ್ಯತೆ ನೀಡಿ, ಪರಿಣಾಮಕಾರಿ ಬೋಧನೆ ಮೂಲಕ ವಿದ್ಯಾರ್ಥಿಗಳ ಕಲಿಕಾ ಆಸಕ್ತಿ ಹೆಚ್ಚಿಸಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಶಿಕ್ಷಕರು ಶ್ರಮಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಚನ್ನಬಸಪ್ಪ ಹೇಳಿದರು.

ನಗರದ ಮಹಿಳಾ ಸಮಾಜ ಪ್ರೌಢಶಾಲೆಯಲ್ಲಿ 2022-23ನೇ ಸಾಲಿನ ಎಸ್.ಎಸ್.ಎಲ್.ಸಿ. ಗುಣಾತ್ಮಕ ಫಲಿತಾಂಶ ಸುಧಾರಣಗಾಗಿ ಸರ್ಕಾರಿ ಅನುದಾನ ಮತ್ತು ಅನುದಾನ ರಹಿತ ಪ್ರೌಢಶಾಲಾ ಸಹ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ವಿಷಯ ಶಿಕ್ಷಕರ ಕಾರ್ಯಾಗಾರದದಲ್ಲಿ ಮಂಗಳವಾರ ಮಾತನಾಡಿದರು. ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಆರು ವಿಷಯಗಳಿಗೆ ಸಂಬಂಧಿಸಿದಂತೆ ಆರು ದಿನ ವಿಷಯ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳಲ್ಲಿ ಇಂಗ್ಲೀಷ್ ಪದಗಳ ಬಳಕೆ ಹೆಚ್ಚಿದಷ್ಟು ಇಂಗ್ಲೀಷ್ ಕಲಿಕೆ ಸರಳವಾಗಲಿದೆ. ಇಂಗ್ಲೀಷ್ ಕಬ್ಬಿಣದ ಕಡಲೆ ಅಲ್ಲ ಎಂಬುದು ಮಕ್ಕಳಿಗೆ ಅರ್ಥೈಸಬೇಕು. ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ನೀಲನಕ್ಷೆಯ ಮಾದರಿಯಲ್ಲಿ ಇಂಗ್ಲೀಷ್‌ನ್ನು ಕಲಿಸಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮಾದರಿ ಉತ್ತರಗಳನ್ನು ಎಲ್ಲಾ ವಿದ್ಯಾರ್ಥಿಗಳಿಗೆ ನೀಡಿ, ವಿದ್ಯಾರ್ಥಿಗಳ ಸತತ ಅಭ್ಯಾಸ, ಕಲಿಕೆಯ ಮೇಲೆ ವಿಷಯ ಶಿಕ್ಷಕರು ನಿಗಾವಹಿಸಬೇಕು. ಇಂಗ್ಲೀಷ್ ಬಗ್ಗೆ ವಿದ್ಯಾರ್ಥಿಗಳಲ್ಲಿರುವ ಆತಂಕವನ್ನು ದೂರಾಗಿಸಿ, ಹೊಸಪೇಟೆ ತಾಲೂಕು ಫಲಿತಾಂಶವು ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಪಡೆದುಕೊಳ್ಳಲು ಎಲ್ಲಾ ವಿಷಯ ಶಿಕ್ಷಕರು ಶ್ರಮಿಸಬೇಕು ಎಂದರು.
ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಬಿ.ತಿಮ್ಮಪ್ಪ, ಮಹಿಳಾ ಸಮಾಜ ಪ್ರೌಢಶಾಲೆ ಅಡಳಿತಾಧಿಕಾರಿ ರಾಘವೇಂದ್ರ ಆಚಾರ್, ಸಂಪನ್ಮೂಲ ವ್ಯಕ್ತಿಗಳಾದ ಎಚ್.ತಿಮ್ಮಾರೆಡ್ಡಿ, ಆಸೀಂ ಅಲಿ, ಜಯಶ್ರೀ, ಶಿರಾಜ್ ಉಪಸ್ಥಿತರಿದ್ದರು. ತಾಲೂಕಿನ ಆಂಗ್ಲ ಭಾಷ ಶಿಕ್ಷಕರು ಭಾಗವಹಿಸಿದ್ದರು, ಶಿಕ್ಷಣ ಇಲಾಖೆಯ ನೂಡಲ್ ಅಧಿಕಾರಿ ಎಚ್.ಶಿವರಾಮಪ್ಪ ನಿರ್ವಹಿಸಿದರು.

 

 

ಜಾಹೀರಾತು
error: Content is protected !!