https://youtu.be/NHc6OMSu0K4?si=SI_K4goOPEgwo6h2
ಸಹಕಾರಿ ಸೇವೆಯಲ್ಲಿ ಬಿಡಿಸಿಸಿ ಬ್ಯಾಂಕ್ ರಾಜ್ಯಕ್ಕೆ ಪ್ರಥಮ : ಸಚಿವ ಎಸ್.ಟಿ.ಸೋಮಶೇಖರ
ಹಂಪಿ ಟೈಮ್ಸ್ ಹೊಸಪೇಟೆ:
ರಾಜ್ಯದ 21 ಡಿಸಿಸಿ ಬ್ಯಾಂಕ್ ಗಳ ಪೈಕಿ ಬಳ್ಳಾರಿ ಡಿಸಿಸಿ ಬ್ಯಾಂಕ್ ಸಹಕಾರಿ ಸೇವೆಯಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ ಹೇಳಿದರು.
ನಗರದ ಡಾ.ಪುನೀತ್ ರಾಜ್ ಕುಮಾರ ಜಿಲ್ಲಾ ಕ್ರೀಡಾಂಗಣದಲ್ಲಿ ಬಿಡಿಸಿಸಿ ಬ್ಯಾಂಕ್ ಸಂಸ್ಥಾಪಕ ಅಧ್ಯಕ್ಷ ಅಸುಂಡಿ ಭೀಮರಾವ್ ವೇದಿಕೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ ಶತಮಾನೋತ್ಸವ ಸಮಾರಂಭ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ರೈತರ ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ಸರ್ಕಾರ 157 ಕೋಟಿ ರೂ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಲಾಗಿದೆ. ಚಳಿಗಾಲದ ಅಧಿವೇಶನದಲ್ಲಿ ಸಿಎಂಗೆ ಮತ್ತೊಮ್ಮ ಮನವಿ ಮಾಡಿ, ಬಾಕಿ ಬಿಡುಗಡೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಬ್ಯಾಂಕಿನ ಅಧ್ಯಕ್ಷರು, ಸಚಿವರಾದ ಆನಂದಸಿಂಗ್ ಎಲ್ಲರ ವಿಶ್ವಾಸದೊಂದಿಗೆ ಮುನ್ನಡೆದಾಗ ಭವಿಷ್ಯದಲ್ಲಿ ಸಹಕಾರ ಕ್ಷೇತ್ರ ಮತ್ತಷ್ಟು ದಾಖಲೆ ನಿರ್ಮಿಸುತ್ತದೆ. ಗ್ರಾಹಕರ ಸಹಕಾರದಿಂದ ಬಿಡಿಸಿಸಿ ಬ್ಯಾಂಕ್ ಅಭಿವೃದ್ಧಿ ಹೊಂದಿ ಶತಮಾನದ ಸಂಭ್ರಮಕ್ಕೆ ಸಾಕ್ಷಿಯಾಗಿದೆ. ಸಹಕಾರ ಅಭಿವೃದ್ಧಿಗೆ ಸಾಲ ವಿತರಣೆ, ಸಾಲ ವಸೂಲಿ ಪ್ರಮುಖ ಪಾತ್ರವಹಿಸುತ್ತದೆ. ಬಿಡಿಸಿಸಿ ಬ್ಯಾಂಕ್ ನಿರಂತರವಾಗಿ ಎ ಗ್ರೇಡ್ ಪಡೆದಿದ್ದು, ಎ ಗ್ರೇಡ್ ಪಡೆದ ಬ್ಯಾಂಕ್ ಆರೋಗ್ಯವಾಗಿದೆ ಎಂದು ಸಾರುತ್ತದೆ. ಲಕ್ಷಾಂತರ ರೈತರ ಹಾಗೂ ಸ್ವಸಹಾಯ ಸಂಘಗಳ ಬಲವರ್ಧನೆಗೆ ಮೊದಲ ಆಧ್ಯತೆ ನೀಡಬೇಕು.
ಸಚಿವ ಆನಂದಸಿಂಗ್ ಚಾಣಿಕ್ಯ: ವಿಜಯನಗರ ಜಿಲ್ಲೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ತರುವಲ್ಲಿ ಸಚಿವ ಆನಂದಸಿಂಗ್ ಚಾಣಕ್ಯ ಇದ್ದಂತೆ. ತನ್ಸ ಚಾಣಾಕ್ಷತನದಿಂದ ಸಿಎಂ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಯೋಜನೆಗಳ ಉದ್ದೇಶ ಅರ್ಥಪೂರ್ಣವಾಗಿ ತಿಳಿಯಪಡಿಸುತ್ತಾರೆ ಎಂದರು.
ಪ್ರವಾಸೋಧ್ಯಮ ಸಚಿವ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಆನಂದಸಿಂಗ್ ಅಧ್ಯಕ್ಷತೆವಹಿಸಿ ಮಾತನಾಡಿದರು. ರೈತರಿಗೆ ಬಡ್ಡಿ ರಹಿತ ಸಾಲ ನೀಡಿ, ಪೂರ್ಣಪ್ರಮಾಣದಲ್ಲಿ ಸಾಲ ವಸೂಲಿ ಮಾಡಿರುವದರಿಂದ ಬಿಡಿಸಿಸಿ ಬ್ಯಾಂಕ್ 100 ವಸಂತಗಳನ್ನು ಪೂರೈಸಿ, ಮಾದರಿಯಾಗಿದೆ. ಬ್ಯಾಂಕ್ ಆಡಿಟ್ ನಲ್ಲಿ ಸತತ ಎ ಗ್ರೇಡ್ ಪಡೆದಿದೆ. ಸಂಪೂರ್ಣ ಗಣಕೀಕೃತದೊಂದಿಗೆ ಡಿಜಿಟಲ್ ಸೇವೆ ನೀಡುತ್ತದೆ. ಆರ್ ಬಿಐ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆಎಂದ ಅವರು ಬ್ಯಾಂಕಿನ ಭವಿಷ್ಯದ ಯೋಜನೆಗಳ ಕುರಿತು ತಿಳಿಸಿದರು.
ಶಾಸಕ ಎನ್.ವೈ.ಗೋಪಾಲಕೃಷ್ಣ, ಹಿರಿಯ ಸಹಕಾರಿಗಳಾದ ಎನ್.ತಿಪ್ಪಣ್ಣ, ಚೊಕ್ಕಬಸವನಗೌಡ, ವಿಶ್ವನಾಥ ಚ.ಹಿರೇಮಠ, ಜೆ.ಎಂ. ವೃಷಭೇಂದ್ರಯ್ಯ, ಎಂ.ಗುರುಸಿದ್ದನಗೌಡ, ಕೋಳೂರು ಮಲ್ಲಿಕಾರ್ಜುನ ಗೌಡ, ಎಲ್.ಎಸ್.ಆನಂದ, ಟಿ.ಎಂ.ಚಂದ್ರಶೇಖರಯ್ಯ, ಡಿ.ಭೋಗಾರೆಡ್ಡಿ, ರವೀಂದ್ರನಾ.ಕೆ., ಬಿ.ಕೆ.ಒ್ರಕಾಶ, ಎನ್.ಭರತ್ ರೆಡ್ಡಿ, ನಗರಸಭೆ ಅಧ್ಯಕ್ಷೆ ಸುಂಕಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ತಾರಿಹಳ್ಳಿ ಜಂಬುನಾಥ, ಸಹಕಾರ ಸಂಘಗಳ ನಿಬಂಧಕ ಡಾ. ಕ್ಯಾಪ್ಟನ್ ರಾಜೇಂದ್ರ, ಜಿಲ್ಲಾಧಿಕಾರಿ ಟಿ.ವೆಂಕಟೇಶ, ಎಸ್ಪಿ ಶ್ರೀಹರಿಬಾಬು, ಬ್ಯಾಕಿನ ಸಿಇಒ ಹರೀಶ ಬಿ.ಎಸ್. ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸಹಕಾರಿ ಸಚಿವ ಟಿ.ಸೋಮಶೇಖರ್ ಗೆ ಗಣೇಶ ಮೂರ್ತಿ, ಪ್ರವಾಸೋಧ್ಯಮ ಸಚಿವ ಆನಂದಸಿಂಗ್ ಗೆ ಶ್ರೀಕೃಷ್ಣನ ಮೂರ್ತಿ ನೀಡಿ ಸನ್ಮಾನಿಸಲಾಯಿತು. ಸ್ಮರಣ ಸಂಚಿಕೆಯನ್ನು ಗಣ್ಯರು ಬಿಡುಗಡೆಗೊಳಿಸಿದರು. ಸಾಕ್ಷ್ಯ ಚಿತ್ರ ಪ್ರದರ್ಶಿಸಲಾಯಿತು.
ಬ್ಯಾಂಕಿನ ಉಪಾಧ್ಯಕ್ಷ ಕೆ.ತಿಪ್ಪೇಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ನಿರ್ದೇಶಕ ಐಗೋಳ ಚಿದಾನಂದ ಸ್ಚಾಗತಿಸಿದರು. ನಟಿ ಅಪರ್ಣ ನಿರ್ವಹಿಸಿದರು.
More Stories
ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ
ಪ್ಯಾನೆಲ್ ವಕೀಲರ ನೇಮಕಾತಿಗಾಗಿ ಅರ್ಜಿ ಆಹ್ವಾನ
ಗುಡೇಕೋಟೆ ನಾಗರಾಜ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ