December 8, 2024

Hampi times

Kannada News Portal from Vijayanagara

ನೀರುಪಾಲದ ವಿದ್ಯಾರ್ಥಿಗಳು, ಮುಗಿಲುಮುಟ್ಟಿದ ಆಕ್ರಂಧನ

 

https://youtu.be/NHc6OMSu0K4?si=SI_K4goOPEgwo6h2

ನೀರುಪಾಲಾದ  ಮೂವರು ವಿದ್ಯಾರ್ಥಿಗಳು, ಮುಗಿಲು‌ಮುಟ್ಡಿದ ಪಾಲಕರ ಆಕ್ರಂದನ, ಮುಂದುವರೆದ ಶೋಧ ಕಾರ್ಯ

ಹಂಪಿ ಟೈಮ್ಸ್ ಹೊಸಪೇಟೆ:

ನಗರದ ಸಾಯಿಬಾಬ ಗುಡಿ ಬಳಿ ಹಾದುಹೋಗಿರುವ
ಎಚ್ ಎಲ್ ಸಿ ಕಾಲುವೆಯಲ್ಲಿ ಶನಿವಾರ ಮಧ್ಯಾಹ್ನ ಈಜಾಡಲು ಧುಮುಕಿದ್ದ ಅರು ಹುಡುಗರ ಪೈಕಿ ಮೂವರು ನೀರುಪಾಲಾಗಿದ್ದಾರೆ.

ನಗರದ ವಿಜಯನಗರ ಕಾಲೇಜಿನಲ್ಲಿ ಪಿಯುಸಿಯಲ್ಲಿ‌ ಓದುತ್ತಿದ್ದ ಕೊಪ್ಪಳ ಜಿಲ್ಲೆಯ ಯಶ್ವಂತ, ಹೊಸಪೇಟೆ ತಾಲೂಕು ಗುಂಡಾ ಗ್ರಾಮದ ಗುರುರಾಜ, ಪದವಿ ದ್ವಿತೀಯ ವರ್ಷದಲ್ಲಿ ಓದುತ್ತಿದ್ದ ಹೊಸಪೇಟೆಯ ಅಂಜಿನಿ ನೀರುಪಾಲಾಗಿದ್ದು,  ಅಗ್ನಿಶಾಮಕದಳದ‌ ಸಿಬ್ಬಂದಿ ಹಾಗೂ ಪೊಲೀಸರಿಂದ ಹುಡುಗರ ಶೋಧ ಕಾರ್ಯ ಮುಂದುವರೆದಿದೆ ಎಂದು ಎಸ್ಪಿ ಶ್ರೀಹರಿಬಾಬು ತಿಳಿಸಿದ್ದಾರೆ.

ಕಣ್ಮರೆಯಾದ ವಿದ್ಯಾರ್ಥಿಗಳ ಪಾಲಕರು, ಕುಟುಂಬದ ಸದಸ್ಯರ ಆಕ್ರಂದನ ಮುಗಿಲುಮುಟ್ಡಿದೆ. ಚಿಲಕನಹಟ್ಟಿ ನವೀನ್, ಬಿ.ಹೊಸಹಳ್ಳಿ ಯ ಗೋಪಿನಾಥ, ಹೊಸಪೇಟೆ ಶ್ರೀವಲ್ಲಭಪಾ ಪ್ರಾಣಾಪಾಯದಿಂದ ಪಾರಾದ ವಿದ್ಯಾರ್ಥಿಗಳು

 

 

ಜಾಹೀರಾತು
error: Content is protected !!