https://youtu.be/NHc6OMSu0K4?si=SI_K4goOPEgwo6h2
ಹಂಪಿಟೈಮ್ಸ್ ಹೊಸಪೇಟೆ:
ವಕೀಲರ ಮೇಲೆ ಪದೇ ಪದೇ ಹಲ್ಲೆ ಪ್ರಕರಣಗಳು ಹೆಚ್ಚುತ್ತಿದ್ದು, ಹಲ್ಲೆಕೋರರ ವಿರುದ್ಧ ಕಠಿಣ ಕ್ರಮ ಜರುಗಿಸಿ, ವಕೀಲರ ರಕ್ಷಣೆಗಾಗಿ ಈಗಾಗಲೇ ಸಿದ್ಧಗೊಂಡಿರುವ ವಕೀಲರ ಸಂರಕ್ಷಣಾ ಕಾಯ್ದೆಯ ಕರಡು ಪ್ರತಿಯನ್ನು ಬೆಳಗಾವಿ ಅಧಿವೇಶನಲ್ಲಿ ಮಂಡಿಸಿ, ಕಾಯ್ದೆ ಜಾರಿಗೆ ತರಬೇಕೇಂದು ಒತ್ತಾಯಿಸಿ ವಿಜಯನಗರ ಜಿಲ್ಲಾ ಬಾರ್ ಅಸೋಸಿಯೇನ್ ಶನಿವಾರ ನಗರದಲ್ಲಿ ಬೈಕ್ ರ‍್ಯಾಲಿ ನಡೆಸಿತು.
ವಕೀಲರ ಸಂಘದ ಅಧ್ಯಕ್ಷ ಕೆ.ವಿ.ಬಸವರಾಜ ಮಾತನಾಡಿ, ಕಾನೂನು ರಕ್ಷಣೆ ಮಾಡುವ ವಕೀಲರಿಗೆ ರಕ್ಷಣೆ ಇಲ್ಲದೆ ಹೋದರೆ, ಕಾನೂನುಗಳು ಮೌಲ್ಯವನ್ನು ಕಳೆದುಕೊಳ್ಳುತ್ತವೆ. ಹಲ್ಲೆಕೋರರ ವಿರುದ್ಧ ಕಠಿಣ ಕ್ರಮ ಜರುಗಿಸುವಲ್ಲಿ ವಿಳಂಭ ಮಾಡಿದರೆ ಅರಾಜಕತೆಯುಂಟಾಗಿ ಕಾನುನು ಬಾಹಿರ ಶಕ್ತಿಗಳು ತಾಂಡವವಾಡುತ್ತವೆ. ಸಮಾಜಘಾತಕ ಶಕ್ತಿಗಳಿಂದಾಗುವ ಹಲ್ಲೆಗಳನ್ನು ತಪ್ಪಿಸಬೇಕು. ವಕೀಲರ ರಕ್ಷಣೆಯ ಜವಬ್ದಾರಿಯೂ ಸರ್ಕಾರದ ಮೇಲಿದ್ದು, ವಕೀಲ ಸಮೂದಾಯದ ಘನತೆಯನ್ನು ಎತ್ತಿಹಿಡಿಯಲು ಸರ್ಕಾರ ಶೀಘ್ರವೇ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ತರಬೇಕೆಂದು ಒತ್ತಾಯಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಎ.ಕರುಣಾನಿಧಿ ಮಾತನಾಡಿದರು. ವಕೀಲರಾದ ತಾರಿಹಳ್ಳಿ ಹನುಮಂತಪ್ಪ, ನಾಗರಾಜ, ರ‍್ರಿಸ್ವಾಮಿ, ಮಹರಾಜ ರವಿ, ಸಿಎಂ ಶಿವಪ್ರಕಾಶ, ದಿವಾಕರ ರಾವ್ ಎಚ್.ಎಸ್., ಸತೀಶ್, ಮಂಜುನಾಥ ಕೆ. ರೇಣುಕಾ ದಿನ್ನಿ, ರಾಫಿಯಾ ಜದೀನ್, ಭರತ್ ಕುಮಾರ್, ಕೇಶವ, ಮೊಹ್ಮದ್ ಸಲೀಂ, ಮೌಲಾ ಬುಡಕುಂಟಿ, ಕೆ.ರಫೀಕ್, ಎ.ಸೌಧಗರ ಸೇರಿದಂತೆ ಅನೇಕ ವಕೀಲರು ಇದ್ದರು.
ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ‍್ಯಾಲಿ ಮೂಲಕ ಜಿಲ್ಲಾಧಿಕಾರಿ ಕಛೇರಿಗೆ ತೆರಳಿದ ವಕೀಲರು ತಹಶೀಲ್ದಾರ್ ಗುರುಬಸಪ್ಪ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.
More Stories
ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ
ಪ್ಯಾನೆಲ್ ವಕೀಲರ ನೇಮಕಾತಿಗಾಗಿ ಅರ್ಜಿ ಆಹ್ವಾನ
ಗುಡೇಕೋಟೆ ನಾಗರಾಜ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ