https://youtu.be/NHc6OMSu0K4?si=SI_K4goOPEgwo6h2
ಮಂಗಳೂರು ಬ್ಲಾಸ್ಟ್ ಪ್ರಕರಣದ ಹೇಳಿಕೆ ಸಮರ್ಥಿಸಿಕೊಳ್ಳುವೆ ಎಂದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಶಿವಕುಮಾರ
ಹಂಪಿ ಟೈಮ್ಸ್ ಕೊಪ್ಪಳ( ಕುಷ್ಟಗಿ):
ಮಂಗಳೂರು ಬ್ಲಾಸ್ಟ್ ಪ್ರಕರಣದ ಹೇಳಿಕೆಯನ್ನು ಈಗಲೂಸ ಮರ್ಥಿಸಿಕೊಳ್ಳುತ್ತೇನೆ, ಯಾವುದೇ ಭಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಕುಷ್ಟಗಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದರು. ಮಂಗಳೂರು ಕಮಿಷನರ್ ತನಿಖೆ ಮಾಡದೆ ಆರೋಪಿಯ ಬಗ್ಗೆ ಹೇಳಿಕೆ ನೀಡಿದ್ದಾರೆ. ಇದರ ಅರ್ಥ ಏನು…?
ಬಿಜೆಪಿಯ ಭ್ರಷ್ಟಾಚಾರ ಬಯಲಿಗೆಳೆದ ಹಿನ್ನೆಲೆ ಬ್ಲಾಸ್ಟ್ ಪ್ರಕರಣ ನಡೆದಿದೆ. ಭ್ರಷ್ಟಾಚಾರ ವಿಷಯ ಡೈವರ್ಟ್ ಮಾಡಲು ಬಿಜೆಪಿ ಆಡಿದ ಕೆಲಸ ಇದಾಗಿದೆ.
ಈಗಲೂ ದಕ್ಷಿಣ ಕನ್ನಡ- ಶಿವಮೊಗ್ಗ ಘಟನೆಗಳಿಂದ ಭ್ರಷ್ಟಾಚಾರ ಡೈವರ್ಟ್ ಮಾಡಲು ಹೊರಟಿದೆ.
ಈ ವಿಷಯದಲ್ಲಿ ನನಗೆ ಯಾರ ಸಪೋರ್ಟ್ ಬೇಕಿಲ್ಲ. ನಾನು ನನ್ನ ಹೇಳಿಕೆಯನ್ನು ಈಗಲೂ ಸಮರ್ಥಿಸಿಕೊಳ್ಳುತ್ತೇನೆ.
ಬಿಜೆಪಿಗೆ ಯಾವಾಗಲು ಡಿಕೆಶಿನೆ ಟಾರ್ಗೆಟ್ ಆಗಿರುತ್ತಾನೆ, ಎದುರಿಸುವೆ ಎಂದರು.
More Stories
ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ
ಪ್ಯಾನೆಲ್ ವಕೀಲರ ನೇಮಕಾತಿಗಾಗಿ ಅರ್ಜಿ ಆಹ್ವಾನ
ಗುಡೇಕೋಟೆ ನಾಗರಾಜ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ