December 5, 2024

Hampi times

Kannada News Portal from Vijayanagara

ಶತಮಾನದ ಸಂಭ್ರಮದಲ್ಲಿ ಬಿಡಿಸಿಸಿ ಬ್ಯಾಂಕ್ : ಕೆ.ತಿಪ್ಪೇಸ್ವಾಮಿ

 

https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್ ಹೊಸಪೇಟೆ:

ಬಿಡಿಸಿಸಿ ಬ್ಯಾಂಕ್ 100 ವಸಂತಗಳನ್ನು ಪೂರೈಸುವ ಮೂಲಕ ಶತಮಾನೋತ್ಸವ ಸಂಭ್ರಮದಲ್ಲಿದೆ. ಡಿ.18ರಂದು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ ಎಂದು ಬ್ಯಾಂಕಿನ ಉಪಾಧ್ಯಕ್ಷ ಕೆ.ತಿಪ್ಪೇಸ್ವಾಮಿ ಹೇಳಿದರು.

ನಗರದ ಬಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಶುಕ್ರವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು.
ಸಮಾರಂಭದಲ್ಲಿ ರಾಜ್ಯದ ಸಚಿವರು, ಸಂಸದರು, ಶಾಸಕರು, ಸಹಕಾರ ಸಂಸ್ಥೆಗಳ ಅಧ್ಯಕ್ಷರು, ಆಡಳಿತ ಮಂಡಳಿ ಮತ್ತೊಂದು ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ರೈತರ ಜೀವನಾಡಿಯಾಗಿ ಬೆಳೆದು ಎಲ್ಲಾ ವರ್ಗದ ಸರ್ವತೋಮುಖ ಅಭಿವೃರದ್ಧಿಯಲ್ಲಿ ತೊಡಗಿದೆ.  ಗ್ರಾಹಕರಿಗೆ ಎಲ್ಲಾ ವಿಧದ ಡಿಜಿಟಲ್ ಬ್ಯಾಂಕಿಂಗ್ ಸೇವೆ ನೀಡಲಾಗುತ್ತಿದೆ.  ರಾಜ್ಯದ 21 ಡಿಸಿಸಿ ಬ್ಯಾಂಕ್ ಗಳ ಪೈಕಿ ಬಿಡಿಸಿಸಿ ಪ್ರಥಮವಾಗಿ ಯುಪಿಐ ಸೇವೆ ಆರಂಭಿಸಿದೆ. ಕಾಯ್ದಿಟ್ಟ ನಿಧಿ ಸೇರಿದಂತೆ 172.28ಕೋಟೊ ಸ್ವಂತ ಬಂಡವಾಳ ಹೊಂದಿದೆ.  ಬಳ್ಳಾರಿ ವಿಜಯನಗರ ಜಿಲ್ಲೆಯ ಸಮಗ್ರ ಗ್ರಾಹಕರ ವಿಶ್ವಾಸಾರ್ಹ ಬ್ಯಾಂಕ್ ಆಗಿದ್ದು, 1355.50 ಕೋಟಿ ಠೇವಣಿ ಹೊಂದಿದೆ.1,11,893 ರೈತರಿಗೆ ಶೂನ್ಯ ಬೆ್ಡಿ ದರದಲ್ಲಿ ಕೆ.ಸಿ.ಸಿ.ಸಾಲ 1035.49 ಕೋಟಿ ರೂ. , ಶೇ.3 ಬಡ್ಡಿಯಲ್ಲಿ 69.52 ಕೋಟಿ ರೂ., ಕೃಷಿಯೇತರ ಸಾಲ 483.58 ಕೋಟಿ ರೂ. ಸೇರಿದಂತೆ ಒಟ್ಟು ಬ್ಯಾಂಕಿನ ಗ್ರಾಹಕರಿಗೆ1588.59 ಕೋಟಿ ರೂ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಸ್ವಸಹಾಯ ಗುಂಪಿನ ಸದಸ್ಯರಿಗೆ ಅನುಕೂಲಕ್ಕಾಗಿ 2 ಮೊಬೈಲ್ ವ್ಯಾನ್ ಮೂಲಕ ಬ್ಯಾಂಕಿಂಗ್ ಸೇವೆ ನೀಡಲಾಗುತ್ತಿದೆ. ಪ್ರತಿ ವರ್ಷ ಆಯ್ದ 100 ಸಹಕಾರ ಸಂಘಗಳಲ್ಲಿ ಮೈಕ್ರೋ ಎಟಿಎಂಗಲನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ನಿರ್ದೇಶಕರಾದ ಎಲ್.ಎಸ್.ಆನಂದ, ಚಿದಾನಂದ ಐಗೋಳ, ಸಿಇಒ ಹರೀಶ ಬಿ.ಎಸ್,
ತಿಮ್ಮಾರೆಡ್ಡಿ, ಶಂಕರ್ ಉಪಸ್ಥಿತರಿದ್ದರು.

 

 

ಜಾಹೀರಾತು
error: Content is protected !!