December 5, 2024

Hampi times

Kannada News Portal from Vijayanagara

ಮಕ್ಕಳಲ್ಲಿ ಅಪೌಷ್ಟಿಕತೆ ನಿರ್ಮೂಲನೆಗೆ ತರಕಾರಿ ಸೊಪ್ಪು ಬಳಸಿ: ಶಿಲ್ಪನಾಗ್

 

https://youtu.be/NHc6OMSu0K4?si=SI_K4goOPEgwo6h2

ಮಾದರಿ ಕೋಳಿಶೆಡ್‌ಗೆ ಆರ್‌ಡಿಪಿಆರ್ ಆಯುಕ್ತರು ಫಿದಾ | ನರೇಗಾ ಕಾಮಗಾರಿಗಳ ವೀಕ್ಷಿಸಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಕಮಿಷನರ್ ಶಿಲ್ಪಾನಾಗ್

ಹಂಪಿಟೈಮ್ಸ್ ಹೊಸಪೇಟೆ:
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವಿಜಯನಗರ ಜಿಲ್ಲೆಯಲ್ಲಿ  ಕೈಗೊಂಡಿರುವ ವಿವಿಧ ಕಾಮಗಾರಿಗಳನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಆಯುಕ್ತರಾದ ಶಿಲ್ಪಾನಾಗ್ ಅವರು ಸೋಮವಾರ  ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳನ್ನು ವೀಕ್ಷಿಸಿ, ಫಲಾನುಭವಿ ಹಾಗೂ ನರೇಗಾ ಕೂಲಿ ಕಾರ್ಮಿಕರೊಂದಿಗೆ ಚರ್ಚಿಸಿದರು.

ಹೊಸಪೇಟೆ ತಾಲೂಕಿನ 114 ಡಣಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ 114 ಡಣಾಪುರ ಗ್ರಾಮದ ಅಂಗನವಾಡಿ ಪೌಷ್ಟಿಕ ಕೈತೋಟನ್ನು ವೀಕ್ಷಿಸಿದ ಆಯುಕ್ತರು, ಈ ತೋಟದಲ್ಲಿ ತರಿಕಾರಿ, ಸೊಪ್ಪು ಬೆಳೆದು ಅಂಗನವಾಡಿ ಮಕ್ಕಳಿಗೆ ಅಡುಗೆ ಮಾಡಿ ಉಣಬಡಿಸಬೇಕು. ಇದರಿಂದ ಮಕ್ಕಳಲ್ಲಿ ಅಪೌಷ್ಟಿಕತೆ ನಿರ್ಮೂಲನೆ ಸಾಧ್ಯ ಎಂದು ಅಂಗನವಾಡಿ ಸಿಬ್ಬಂದಿಗೆ ತಿಳಿಸಿದರು. ಇನ್ನು ಇದೇ ಗ್ರಾಮದ ಮೂವರು ಅಂಗವಿಕಲರಿಗೆ ನರೇಗಾ ಉದ್ಯೋಗ ಚೀಟಿ ವಿತರಿಸಿ, ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡುವ ಅಂಗವಿಕಲರಿಗೆ ಕೆಲಸದ ಪ್ರಮಾಣದಲ್ಲಿ ಶೇ.50ರಷ್ಟು, ಅದೇ ರೀತಿ ಲಿಂಗತ್ವ ಅಲ್ಪಾ ಸಂಖ್ಯಾತರಿಗೆ ಶೇ. 10 ರಷ್ಟು ರಿಯಾಯತಿ ಇದೆ ಎಂದು ತಿಳಿಸಿದರು. ಇದೇ ವೇಳೆ ವಿದ್ಯಾ ಜ್ಯೋತಿ ಒಕ್ಕೂಟದ ಮಹಿಳಾ ಸದಸ್ಯರೊಂದಿಗೆ ಒಕ್ಕೂಟದಲ್ಲಿ ಕೈಗೊಳ್ಳುವ ವಿವಿಧ ರೀತಿಯ ಚಟುವಟಿಕೆಗಳ ಕುರಿತು ಸಮಾಲೋಚನೆ ನಡೆಸಿದರು. ಇನ್ನು ಡಣನಾಯಕನಕೆರೆ ಗ್ರಾಪಂ ವ್ಯಾಪ್ತಿಯ ಬರುವ ಇಕೋ ಪಾರ್ಕ್ನಲ್ಲಿ ಅನುಷ್ಠಾನಗೊಂಡ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.

ಹಬೊಹಳ್ಳಿಗೂ ಭೇಟಿ: ತಾಲೂಕಿನ ಮರಬ್ಬಿಹಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಪನಾಯಕನಹಳ್ಳಿಯ ಹೊರವಲಯದಲ್ಲಿ ಹಮ್ಮಿಕೊಂಡಿರುವ ಸಮುದಾಯದ ಕೃಷಿ ಹೊಂಡ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಆಯುಕ್ತರು, ಕಾಮಗಾರಿ ವೀಕ್ಷಿಸಿ ಎನ್‌ಎಂಎAಎಸ್ ಆ್ಯಪ್ ಬಳಕೆ, ಉದ್ಯೋಗಚೀಟಿಯಲ್ಲಿ ಮಾಹಿತಿ ಇಂದೀಕರಿಸುವ ಕುರಿತು ಬಿಎಫ್‌ಟಿ, ಗ್ರಾಮ ಕಾಯಕ ಮಿತ್ರ, ಕಾಯಕ ಬಂಧುಗಳಿಗೆ ಸೂಚಿಸಿದರು. ಬಳಿಕ ವಾರ್ಷಿಕವಾಗಿ ಪ್ರತಿ ಕುಟುಂಬಕ್ಕೆ 150 ಮಾನವ ಕೂಲಿ ದಿನ ಹೆಚ್ಚಳ ಮಾಡುವಂತೆ ಆಯುಕ್ತರಿಗೆ ನರೇಗಾ ಕೂಲಿ ಕಾರ್ಮಿಕರು ಮನವಿ ಸಲ್ಲಿಸಿದರು. ನಂತರ ಇದೇ ಗ್ರಾಮದ ಹೊರವಲಯದಲ್ಲ ನಡೆಯುತ್ತಿದ್ದ ಕ್ಷೇತ್ರ ಬದುನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಮೂಲಸೌಲಭ್ಯ ಹಾಗೂ ಕೆಲಸ ಅಳತೆ, ಪ್ರಮಾಣದ ಬಗ್ಗೆ ಕೂಲಿ ಕಾರ್ಮಿಕರಿಂದ ಮಾಹಿತಿ ಪಡೆದರು. ಬ್ಯಾಸಿಗಿದೇರಿ ಗ್ರಾಪಂ ವ್ಯಾಪ್ತಿಯ ನಂದಿಪುರ ಗ್ರಾಮದ ರಾಜಾಭಕ್ಷಿ ಎನ್ನುವವರು ವೈಯಕ್ತಿಕ ಕಾಮಗಾರಿಯಡಿ ನಿರ್ಮಿಸಿಕೊಂಡಿರುವ ಮಾದರಿ ಕೋಳಿಶೆಡ್, ಹೈಡ್ರೋಫೋನಿಕ್ಸ್ ಘಟಕ, ಅಜೋಲಾ ಘಟಕಗಳನ್ನು ಉದ್ಘಾಟಿಸಿ ಪರಿಶೀಲಿಸಿದ ಆಯುಕ್ತರು, ಕೋಳಿಶೆಡ್ ನಿರ್ಮಿಸಿಕೊಂಡು ಲಾಭ ಪಡೆಯುತ್ತಿರುವ ಫಲಾನುಭವಿಯ ಅಭಿಪ್ರಾಯ ಕೇಳಿ ಆಯಕ್ತರು ವ್ಯಕ್ತ ಮೆಚ್ಚುಗೆ ಪಡಿಸಿದರು.


ವಿಜಯನಗರ ಜಿಪಂ ಸಿಇಒ  ಹರ್ಷಲ್ ಬೋಯರ್ ನಾರಾಯಣರಾವ್, ಉಪ ಕಾರ್ಯದರ್ಶಿ ತಿಮ್ಮಪ್ಪ, ಸಹಾಯಕ ಕಾರ್ಯದರ್ಶಿ ಉಮೇಶ್, ಹೊಸಪೇಟೆ, ಹಬೊಹಳ್ಳಿ ತಾಪಂಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು(ಗ್ರಾ.ಉ.), ಜಿಲ್ಲಾ ಹಾಗೂ ತಾಲೂಕುಮಟ್ಟದ ಅನುಷ್ಠಾನ ಇಲಾಖೆಗಳ ಅಧಿಕಾರಿಗಳು, ತಾಂತ್ರಿಕ ಸಂಯೋಜಕರು, ಐಇಸಿ ಸಂಯೋಜಕರು ಹಾಗೂ ನರೇಗಾ ಸಿಬ್ಬಂದಿ ಇದ್ದರು.

 

 

 

ಜಾಹೀರಾತು
error: Content is protected !!