October 14, 2024

Hampi times

Kannada News Portal from Vijayanagara

ಮಾನವೀಯತೆ ಮರೆತು ಘಟನೆ ನೋಡುತ್ತ ನಿಂತ ಜನ

 

https://youtu.be/NHc6OMSu0K4?si=SI_K4goOPEgwo6h2

 

 

ಹೈಟೆನ್ಸನ್ ವೈಯರ್ ತಗುಲಿ ಚಾಲಕ ದುರ್ಮರಣ

ಹಂಪಿಟೈಮ್ಸ್ ಬಳ್ಳಾರಿ:
ಹೈಟೈನ್ಸನ್ ವೈಯರ್ ತಗುಲಿ ಚಾಲಕನೋರ್ವ ಸಂಡೂರು ತಾಲೂಕಿನ ಜಿಂದಾಲ್ ಸ್ಟೀಲ್ಸ್ ವಾಕ್ಸ್ ಎರಡನೇ ಗೇಟ್ ಬಳಿ ಸೋಮವಾರ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ.
ಮೃತ ಚಾಲಕನನ್ನು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರ ಸಮೀಪದ ಮೇಗಳ ಕನ್ಯೆ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ. ಲಾರಿಯನ್ನು ನಿಲ್ಲಿಸಿದ ಬಳಿಕ  ಚಾಲಕ ಲಾರಿಯ ಮೇಲೆರಿದ್ದಾನೆ.
ಆದರೆ, ಈ ವೇಳೆ ತನ್ನ ತಲೆಯ ಮೇಲಿದ್ದ ಹೈಟೆನ್ಷನ್ ವೈರ್ ಅನ್ನು ಗಮನಿಸದೆ ಕೆಲಸ ಆರಂಭಿಸಿದಾಗ ವಿದ್ಯುತ್  ತಗುಲಿ ಮೃತಪಟ್ಟಿದ್ದಾನೆ. ಚಾಲಕನಿಗೆ ಏಕಾಏಕಿ ಹೈಟೈನ್ಸನ್ ವೈಯರ್ ತಗುಲಿ ಮೃತಪಡುತ್ತಿರುವ ದೃಶ್ಯ ಮೊಬೈಲ್‌ ನಲ್ಲಿ ಸೆರೆಯಾಗಿದ್ದು, ಕರುಳು ಚುರ್ ಎನ್ನುವಂತಿದೆ.
ದುರಂತ ಎಂದರೇ ಘಟನಾ ಸ್ಥಳದಲ್ಲಿ ಜನರಿದ್ದರೂ ಯಾರು ಚಾಲಕನ ಪ್ರಾಣ ರಕ್ಷಣೆಗೆ ಮುಂದಾಗದೇ ನೋಡುತ್ತಾ ನಿಂತುಕೊಂಡು ಅಮಾನವೀಯತೆ ಮೆರೆದಿರುವುದು ಕೂಡ ಆಕ್ರೋಶಕ್ಕೆ ಕಾರಣವಾಗಿದೆ. ತೋರಣಗಲ್ಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

 

ಜಾಹೀರಾತು
error: Content is protected !!