December 5, 2024

Hampi times

Kannada News Portal from Vijayanagara

ಡಿ.12ರಂದು ಐಕ್ಯ ಸಮಾವೇಶ: ಸೌಭಾಗ್ಯ ದೊಡ್ಡಮನಿ

 

https://youtu.be/NHc6OMSu0K4?si=SI_K4goOPEgwo6h2

ಹಂಪಿಟೈಮ್ಸ್ ಕೊಪ್ಪಳ:
ಸಹಜ ಟ್ರಸ್ಟ್, ದೇವದಾಸಿ ವಿಮೋಚನಾ ವೇದಿಕೆ, ರೂಪಾಂತರ ವೇದಿಕೆ ಸಹಯೋಗದಲ್ಲಿ ಡಿ.12 ರಂದು ನಗರದ ಸಾಹಿತ್ಯ ಭವನದಲ್ಲಿ ಅಲೆಮಾರಿ ಸಮುದಾಯ ಮತ್ತು ದೇವದಾಸಿ ಸಮುದಾಯದ ಜಾಗೃತಿಗಾಗಿ ಐಕ್ಯ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ದೇವದಾಸಿ ವಿಮೋಚನಾ ವೇದಿಕೆ ಜಿಲ್ಲಾಧ್ಯಕ್ಷೆ ಸೌಭಾಗ್ಯ ದೊಡ್ಡಮನಿ ಹೇಳಿದರು.
ನಗರದ ಮೀಡಿಯಾ ಕ್ಲಬ್ ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 9 ಗಂಟೆಗೆ ಮಹಿಳಾ ಚಿಂತಕಿ ಸರಸ್ವತಿ ಸಮಾವೇಶ ಉದ್ಘಾಟಿಸಲಿದ್ದಾರೆ. ಹೆಚ್‌ಐಡಿಎಫ್ ನಿರ್ದೇಶಕ ವೆಂಕಟೇಶ ಪ್ರಸಾದ್ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಯಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಪದ್ಮಾವತಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಚಿದಾನಂದ, ನಗರಸಭೆ ಅಧ್ಯಕ್ಷೆ ಶಿವಗಂಗಮ್ಮ, ಅಂಬೇಡ್ಕರ್ ಅಭಿವೃದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕ ವೈ.ಎ.ಕಾಳೆ ಸೇರಿ ಹಲವರು ಭಾಗವಹಿಸಲಿದ್ದಾರೆ ಎಂದರು.
ಸಮಾವೇಶದಲ್ಲಿ ಗುಣಮಟ್ಟದ ಶಿಕ್ಷಣ ಪಡೆಯುವಲ್ಲಿ ಅಲೆಮಾರಿ ಮತ್ತು ದೇವದಾಸಿ ಸಮುದಾಯದ ಮಕ್ಕಳ ಸವಾಲುಗಳು ಹಾಗೂ ಪ್ರಸ್ತುತ ಅಭಿವೃದ್ಧಿ ಪರಿಕಲ್ಪನೆ ಮತ್ತು ದಲಿತ ಮಹಿಳೆ ವಿಷಯದ ಕುರಿತು ವಿಚಾರ ಗೋಷ್ಠಿಗಳು ನಡೆಯಲಿವೆ ಎಂದರು. ಗೋಷ್ಠಿಯಲ್ಲಿ ಸಹಜ ಟ್ರಸ್ಟ್‌ನ ಶೀಲಾ, ರೂಪಾಂತರ ವೇದಿಕೆಯ ಪ್ರಿಯಾಂಕ, ಅಸ್ಮಾ ಸೇರಿ ಮತ್ತಿತರರಿದ್ದರು.

 

 

ಜಾಹೀರಾತು
error: Content is protected !!