December 5, 2024

Hampi times

Kannada News Portal from Vijayanagara

ಕೆ.ರವಿಶಂಕರ ಶ್ರೇಷ್ಠ ವರ್ತಕ, ಅಲೀಂ ಎಸ್.ಅಹ್ಮದ್‌ಗೆ ಶ್ರೇಷ್ಠ ಕೈಗಾರಿಕೋದ್ಯಮಿ ಪ್ರಶಸ್ತಿ ಪ್ರದಾನ

 

https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್ ಹೊಸಪೇಟೆ:
ನಗರದ ಸಮೃದ್ಧಿ  ಡೆವಲಪರ್ಸ್ ಮಾಲೀಕರು, ಹೊಸಪೇಟೆ ತಾಲೂಕು ವೀರಶೈವ ಲಿಂಗಾಯತ ಸಮಾಜದ ಪ್ರಧಾನ ಕಾರ್ಯದರ್ಶಿ ಕೆ.ರವಿಶಂಕರ್‌ಗೆ ಶ್ರೇಷ್ಠ ವರ್ತಕರು ಪ್ರಶಸ್ತಿ, ಹಾಗೂ  ಮುನೀರ್ ಗ್ರೂಪ್‌ನ ಅಲೀಂ ಎಸ್.ಅಹ್ಮದ್‌ಗೆ ಶ್ರೇಷ್ಠ ಕೈಗಾರಿಕೋದ್ಯಮಿ ಪ್ರಶಸ್ತಿಯನ್ನು ಹೈ.ಕರ್ನಾಟಕ ವಾಣಿಜ್ಯೋದ್ಯಮಿ ಹಾಗೂ ಕೈಗಾರಿಕೋದ್ಯಮ ಸಂಘದ ಅಧ್ಯಕ್ಷ ಪ್ರಶಾಂತ ಎಸ್.ಮಾನ್ಕರ್, ಕಾರ್ಯದರ್ಶಿ ಶರಣಬಸಪ್ಪ ಎಂ ಪಪ್ಪ ಪದಾನ ಮಾಡಿದರು.


ಕಲಬುರ್ಗಿಯ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಸಂಘವು ಕಲಬುರ್ಗಿ ಪಿಡಿಎ ಇಂಜನೀಯರಿಂಗ್ ಕಾಲೇಜ್‌ನಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯಮಟ್ಟದ ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಸಮ್ಮೇಳನದಲ್ಲಿ ವಿಜಯನಗರ ಜಿಲ್ಲೆಯ ಕೆ.ರವಿಶಂಕರ್ ಮತ್ತು ಅಲೀಂ ಎ ಸ್ ಅಹ್ಮದ್ ಇವರಿಗೆ ಶ್ರೇಷ್ಠ ಉದ್ಯಮಿ ಹಾಗೂ ಶ್ರೇಷ್ಠ ಕೈಗಾರಿಕೋದ್ಯಮಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಎಂಎಲ್‌ಸಿ ಶಶೀಲ್ ನಮೋಶಿ, ವಿಜಯನಗರ ಜಿಲ್ಲಾ ವಾಣಿಜ್ಯೋದ್ಯಮಿ ಹಾಗೂ ಕೈಗಾರಿಕೋದ್ಯಮ ಸಂಘದ ಅಧ್ಯಕ್ಷ ಅಶ್ವಿನ್ ಕೋತಂಬ್ರಿ, ಹಿರಿಯ ಉಪಾಧ್ಯಕ್ಷ ಸೈಯದ್ ನಾಜೀಮುದ್ದೀನ್, ವರ್ತಕರಾದ ಗೋವರ್ಧನ್, ಜಾಲಿ ಪ್ರಕಾಶ, ಮೊಹಮ್ಮದ್ ಮುಶೇರ್, ಮಧುಸೂಧನ್ ಸಿಂಗ್ ಇತರರು ಇದ್ದರು.

 

 

ಜಾಹೀರಾತು
error: Content is protected !!